ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು

ಜೀವನ ನಡೆಸಲು ದೆಹಲಿಯ ಬೀದಿಯಲ್ಲಿ ಮನೋಜ್​ ರಾಯ್​ ಭಿಕ್ಷೆ ಬೇಡುತ್ತಿದ್ದರು. ಅವರನ್ನು ಕರೆದು ‘ಪಿಕೆ’ ಸಿನಿಮಾದಲ್ಲಿ ಅವಕಾಶ ನೀಡಲಾಯಿತು. ಆ ಸಿನಿಮಾ ತೆರೆಕಂಡ ಬಳಿಕ ಮನೋಜ್​ ರಾಯ್​ ಜೀವನದಲ್ಲಿ ಬದಲಾವಣೆ ಆಯಿತು. ಹಣದ ಜೊತೆ ಅವರಿಗೆ ಜನಪ್ರಿಯತೆ ಕೂಡ ಸಿಕ್ಕಿತು. ಆ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..

ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು
ಆಮಿರ್​ ಖಾನ್​, ಮನೋಜ್​ ರಾಯ್
Follow us
ಮದನ್​ ಕುಮಾರ್​
|

Updated on: Apr 02, 2024 | 9:41 PM

ಚಿತ್ರರಂಗಕ್ಕೆ ಬಂದಮೇಲೆ ಅನೇಕರ ಬದುಕು ಬದಲಾಗಿದೆ. ಏನೂ ಇಲ್ಲದೇ ಇರುವವರು ಈ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಹಾಗೆಯೇ ಹಣ ಕಳೆದುಕೊಂಡವರು ಕೂಡ ಇದ್ದಾರೆ. ನಟರು ಮಾಡುವ ಸಣ್ಣ ಪಾತ್ರ ಕೂಡ ದೊಡ್ಡ ಪ್ರಭಾವ ಬೀರಿದ ಉದಾಹರಣೆ ಸಾಕಷ್ಟಿದೆ. ಕೆಲವರ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಆಮಿರ್ ಖಾನ್​ (Aamir Khan) ನಟನೆಯ ‘ಪಿಕೆ’ ಸಿನಿಮಾದಲ್ಲಿ ಭಿಕ್ಷುಕನ (Beggar) ಪಾತ್ರ ಮಾಡಿದ ನಟನ ಬದುಕು ಕೂಡ ಅದೇ ರೀತಿ ಬದಲಾಯಿತು. ರಿಯಲ್​ ಲೈಫ್​ನಲ್ಲಿಯೂ ಭಿಕ್ಷೆ ಬೇಡುತ್ತಿದ್ದ ಮನೋಜ್​ ರಾಯ್​ (Manoj Roy) ಅವರಿಗೆ ಈ ಅವಕಾಶ ಸಿಕ್ಕಿದ್ದೇ ಒಂದು ಅಚ್ಚರಿ.

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದ ‘ಪಿಕೆ’ ಸಿನಿಮಾದಲ್ಲಿ ಕೇವಲ 5 ಸೆಕೆಂಡ್​​ ಕಾಣಿಸಿಕೊಳ್ಳುವ ಓರ್ವ ಭಿಕ್ಷುಕನ ಪಾತ್ರವಿದೆ. ಆ ಪಾತ್ರಕ್ಕೂ ಕೂಡ ಆಡಿಷನ್​ ಮಾಡಲಾಗಿತ್ತು! ಹೌದು, ನಿಜವಾಗಿ ಭಿಕ್ಷೆ ಬೇಡುವ ಕೆಲವು ವ್ಯಕ್ತಿಗಳನ್ನು ಕರೆದು ಆಡಿಷನ್​ ಮಾಡಿಸಲಾಗಿತ್ತು. ಅದರಲ್ಲಿ ಮನೋಜ್ ರಾಯ್​ ಕೂಡ ಇದ್ದರು. ಆಡಿಷನ್​ ಪ್ರಕ್ರಿಯೆ ಮತ್ತು ಶೂಟಿಂಗ್​ ಮುಗಿಯುವ ತನಕ ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಮನೋಜ್​ ರಾಯ್​ ಅವರು ನಟಿಸಿಲು ಒಪ್ಪಿಕೊಂಡಿದ್ದರು!

ಇದನ್ನೂ ಓದಿ: ‘ಡ್ರಗ್ಸ್​ ತೆಗೆದುಕೊಳ್ಳುವುದು ನಿಲ್ಲಿಸಿ’: ಲೈವ್​ನಲ್ಲೇ ಆಮಿರ್​ ಖಾನ್​ಗೆ ಟ್ರೋಲ್​; ನಟನ ಉತ್ತರ ಏನು?

ತುಂಬ ಬಡ ಕುಟುಂಬದಿಂದ ಬಂದವರು ಮನೋಜ್​ ರಾಯ್​. ಬಾಲ್ಯದಲ್ಲೇ ಅವರು ತಾಯಿಯನ್ನು ಕಳೆದುಕೊಂಡರು. ತಂದೆ ದಿನಗೂಲಿ ಮಾಡಿ ಮಗನನ್ನು ಸಾಕಿದರು. ಆದರೆ ತಂದೆಯು ಅನಾರೋಗ್ಯಕ್ಕೆ ಒಳಗಾದ ಬಳಿಕ ಮನೋಜ್​ ಅವರು ಶಾಲೆ ಬಿಟ್ಟು ಭಿಕ್ಷೆ ಬೇಡಲು ಶುರು ಮಾಡಿದರು. ಕೆಲಸ ಹುಡುಕಿಕೊಂಡು ದೆಹಲಿಗೆ ಬಂದ ಅವರಿಗೆ ಕೆಲಸ ಸಿಗಲಿಲ್ಲ. ಆಗ ಅವರು ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಿದರು. ಆಗಲೇ ಅವರಿಗೆ ‘ಪಿಕೆ’ ಸಿನಿಮಾದ ಅವಕಾಶ ಸಿಕ್ಕಿತು.

ಇದನ್ನೂ ಓದಿ: ಮಗನಿಗೆ ನೋವಾಗದ ರೀತಿಯಲ್ಲಿ ಸಂಸಾರದ ಸಮಸ್ಯೆ ಪರಿಹರಿಸಿಕೊಂಡ ಆಮಿರ್​ ಖಾನ್​-ಕಿರಣ್​ ರಾವ್​

ಅದು 5 ಸೆಕೆಂಡ್​ನ ಪಾತ್ರ ಆಗಿದ್ದರೂ ಕೂಡ ಮನೋಜ್​ ರಾಯ್​ ಅವರು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆಮಿರ್​ ಖಾನ್​ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಅದು. ಆ ಸಿನಿಮಾ ಬಿಡುಗಡೆ ಆದ ಬಳಿಕ ಮನೋಜ್​ ರಾಯ್​ ಅವರಿಗೆ ಜನಪ್ರಿಯತೆ ಮತ್ತು ಒಂದಷ್ಟು ಹಣ ಸಿಕ್ಕಿತು. ಹಣವನ್ನು ತೆಗೆದುಕೊಂಡು ಅವರು ಊರಿಗೆ ವಾಪಸ್​ ಹೋದರು. ಅಲ್ಲಿ ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಖಾತೆ ಹೊಂದಿದರು. ನಂತರ ಅವರಿಗೆ ಗರ್ಲ್​ಫ್ರೆಂಡ್​ ಕೂಡ ಸಿಕ್ಕಳು. ಅಷ್ಟರಮಟ್ಟಿಗೆ ಮನೋಜ್​ ರಾಯ್​ ಬದುಕು ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.