AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವರು ನಮ್ಮ ಸಂತೃಪ್ತ ಗ್ರಾಹಕ’: ಜಾನಿ ಸಿನ್ಸ್​ ಜತೆ ಮತ್ತೆ ತೆರೆ ಹಂಚಿಕೊಂಡ ರಣವೀರ್​ ಸಿಂಗ್​

ಜಾನಿ ಸಿನ್ಸ್​ ಅವರು ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಆರಂಭದಲ್ಲಿ ತೋರಿಸಲಾಗುತ್ತದೆ. ನಂತರ ಅವರು ಈ ಸ್ಪ್ರೇ ಬಳಸಿದ ಬಳಿಕ ಅವರ ಸಮಸ್ಯೆ ಪರಿಹಾರ ಆಯಿತು ಎಂದು ರಣವೀರ್​ ಸಿಂಗ್​ ಹೇಳುತ್ತಾರೆ. ಅಲ್ಲದೇ ಜಾನಿ ಸಿನ್ಸ್​ ಅವರನ್ನು ‘ನಮ್ಮ ಸಂತೃಪ್ತ ಗ್ರಾಹಕ’ ಎಂದು ರಣವೀರ್​ ಸಿಂಗ್​ ಪರಿಚಯಿಸುತ್ತಾರೆ. ಈ ಜಾಹೀರಾತು ವೈರಲ್​ ಆಗಿದೆ.

‘ಇವರು ನಮ್ಮ ಸಂತೃಪ್ತ ಗ್ರಾಹಕ’: ಜಾನಿ ಸಿನ್ಸ್​ ಜತೆ ಮತ್ತೆ ತೆರೆ ಹಂಚಿಕೊಂಡ ರಣವೀರ್​ ಸಿಂಗ್​
ರಣವೀರ್​ ಸಿಂಗ್​, ಜಾನಿ ಸಿನ್ಸ್
ಮದನ್​ ಕುಮಾರ್​
|

Updated on: Apr 03, 2024 | 3:31 PM

Share

ಬಾಲಿವುಡ್ ಕಲಾವಿದ ರಣವೀರ್ ಸಿಂಗ್​ (Ranveer Singh) ಅವರು ಕೆಲವು ದಿನಗಳ ಹಿಂದೆ ಅಡಲ್ಟ್​ ಸಿನಿಮಾ ನಟ ಜಾನಿ ಸಿನ್ಸ್​ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈಗ ಅವರು ಮತ್ತೊಮ್ಮೆ ಜಾನಿ ಸಿನ್ಸ್​ ಜೊತೆ ನಟಿಸಿದ್ದಾರೆ. ಪುರುಷರ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಉತ್ಪನ್ನಗಳ ಬ್ರ್ಯಾಂಡ್​ಗೆ ರಣವೀರ್​ ಸಿಂಗ್​ ರಾಯಭಾರಿ ಆಗಿದ್ದಾರೆ. ಅದರ ಜಾಹೀರಾತಿನಲ್ಲಿ ಜಾನಿ ಸಿನ್ಸ್​ (Johnny Sins) ಮತ್ತು ರಣವೀರ್​ ಸಿಂಗ್​ ಅಭಿನಯಿಸಿದ್ದಾರೆ. ಈ ಮೊದಲು ಬಂದಿದ್ದ ಜಾಹೀರಾತಿನ ರೀತಿಯೇ ಈ ಹೊಸ ಜಾಹೀರಾತು ಕೂಡ ಕಾಮಿಡಿ ಶೈಲಿಯಲ್ಲಿದೆ.

ಶೀಘ್ರ ಸ್ಖಲನಕ್ಕೆ ಸಂಬಂಧಿಸಿದ ಜಾಹೀರಾತು ಇದಾಗಿದ್ದು, ಜಾನಿ ಸಿನ್ಸ್​ ಅವರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜಾಹೀರಾತಿನ ಆರಂಭದಲ್ಲಿ ತೋರಿಸಲಾಗುತ್ತದೆ. ನಂತರ ಅವರು ಈ ಸ್ಪ್ರೇ ಬಳಸಿದ ಬಳಿಕ ಅವರ ಸಮಸ್ಯೆ ಪರಿಹಾರ ಆಯಿತು ಎಂದು ರಣವೀರ್​ ಸಿಂಗ್​ ಹೇಳುತ್ತಾರೆ. ಅಲ್ಲದೇ ಜಾನಿ ಸಿನ್ಸ್​ ಅವರನ್ನು ‘ನಮ್ಮ ಸಂತೃಪ್ತ ಗ್ರಾಹಕ’ ಎಂದು ರಣವೀರ್​ ಸಿಂಗ್​ ಪರಿಚಯಿಸುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಜಾಹೀರಾತು ವೈರಲ್ ಆಗಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಪ್ರೆಗ್ನೆಂಟ್​; ಡಿಫರೆಂಟ್​ ಆಗಿ ಸಿಹಿ ಸುದ್ದಿ ನೀಡಿದ ರಣವೀರ್​ ಸಿಂಗ್​

ಸದ್ಯ ವೈರಲ್​ ಆಗಿರುವ ಈ ಜಾಹೀರಾತನ್ನು ಕಂಡು ನೆಟ್ಟಿಗರು ಸಖತ್​ ಎಂಜಾಯ್​ ಮಾಡಿದ್ದಾರೆ. ಈ ಜಾಹೀರಾತು ತುಂಬ ಕ್ರಿಯೇಟಿವ್​ ಆಗಿದೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ರಣವೀರ್​ ಸಿಂಗ್​ ಅವರು ಯಾವುದೇ ಪಾತ್ರ ಕೊಟ್ಟರೂ ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಅನೇಕರು ಮತ್ತೊಮ್ಮೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬೋಲ್ಡ್​ ಆದಂತಹ ವಿಚಾರಗಳನ್ನು ಮಾತನಾಡಿದ್ದಕ್ಕೆ ಅನೇಕರು ಭೇಷ್​ ಎಂದಿದ್ದಾರೆ.

ರಣವೀರ್​ ಸಿಂಗ್​ ಅವರು ಈ ಮೊದಲು ಬೆತ್ತಲೆ ಫೋಟೋಶೂಟ್​ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಅವರ ಜಾನಿ ಸಿನ್ಸ್​ ಜೊತೆ ಅಭಿನಯಿಸುವ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಸಿಂಗಂ ಅಗೇನ್​’ ಹಾಗೂ ‘ಡಾನ್​ 3’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನದಲ್ಲಿ ‘ಸಿಂಗಂ ಅಗೇನ್​’ ಹಾಗೂ ಫರ್ಹಾನ್​ ಅಖ್ತರ್​ ನಿರ್ದೇಶದಲ್ಲಿ ‘ಡಾನ್​ 3’ ಸಿನಿಮಾ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್