Tamannaah Bhatia: ಅಕ್ರಮವಾಗಿ ಐಪಿಎಲ್ ಪ್ರಸಾರ ಮಾಡಿದ ಆ್ಯಪ್ಗೆ ತಮನ್ನಾ ಪ್ರಮೋಷನ್; ಸಿಕ್ತು ನೋಟಿಸ್
2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇತ್ತು. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್ನ ಫೇರ್ಪ್ಲೇ ಆ್ಯಫ್ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಈ ಆ್ಯಪ್ ಪ್ರಚಾರದಲ್ಲಿ ತಮನ್ನಾ ಭಾಗಿ ಆಗಿದ್ದರು.
ನಟಿ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ಮಹಾರಾಷ್ಟ್ರ ಸೈಬರ್ ಇಲಾಖೆಯವರು ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಅಕ್ರಮವಾಗಿ ಐಪಿಎಲ್ನ ಪ್ರಸಾರ ಮಾಡಿದ ಆರೋಪ ಹೊಂದಿರುವ ‘ಫೇರ್ಪ್ಲೇ’ ಆ್ಯಪ್ನ ಪ್ರಚಾರದಲ್ಲಿ ನಟಿ ತಮನ್ನಾ ಭಾಟಿಯಾ ಕೂಡ ಭಾಗಿ ಆಗಿದ್ದರು ಎನ್ನಲಾಗಿದೆ. ಈ ಆ್ಯಪ್ ಮಹದೇವ್ ಆನ್ಲೈನ್ ಗೇಮಿಂಗ್ ಆ್ಯಪ್ನ ಅಂಗಸಂಸ್ಥೆ ಆಗಿದೆ. ಇದರಿಂದ ತಮನ್ನಾ ಅವರಿಗೆ ತೊಂದರೆ ಆಗೋ ಸಾಧ್ಯತೆ ಇದೆ.
ಸೆಲೆಬ್ರಿಟಿಗಳು ಹಲವು ಪ್ರಾಡಕ್ಟ್ಗಳ ಪ್ರಚಾರ ಮಾಡುತ್ತಾರೆ. ಅನೇಕ ಬಾರಿ ತಾವು ಪ್ರಮೋಷನ್ ಮಾಡುತ್ತಿರುವ ಸಂಸ್ಥೆ ಎಂಥದ್ದು, ಅದರ ಹಿನ್ನೆಲೆ ಏನು ಎಂಬುದನ್ನು ತಿಳಿಯದೇ ದುಡ್ಡಿದಾಗಿ ಜಾಹೀರಾತು ಮಾಡಿಕೊಡುತ್ತಾರೆ. ಸಂಸ್ಥೆಗಳು ಈ ರೀತಿ ತೊಂದರೆಗೆ ಸಿಲುಕಿದಾಗ ಅದರ ಪ್ರಚಾರ ಮಾಡಿದವರೂ ವಿಚಾರಣೆ ಎದುರಿಸಬೇಕಾಗುತ್ತದೆ. ನಟಿ ತಮನ್ನಾ ವಿಚಾರದಲ್ಲಿ ಈಗ ಆಗಿರುವುದು ಹಾಗೇಯೇ.
2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇತ್ತು. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್ನ ಫೇರ್ಪ್ಲೇ ಆ್ಯಫ್ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಹೀಗಾಗಿ, ಫೇರ್ಪ್ಲೇ ಆ್ಯಪ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಕೇವಲ ತಮನ್ನಾ ಮಾತ್ರವಲ್ಲದೆ ಗಾಯಕ ಬಾದ್ಶಾ, ನಟ ಸಂಜಯ್ ದತ್ಗೂ ಸಮನ್ಸ್ ನೀಡಲಾಗಿದೆ. ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ವಿಚಾರಣೆಗೆ ಹಾಜರಾಗಲು ಮತ್ತಷ್ಟು ಸಮಯ ಕೇಳಿದ್ದಾರೆ. ನಟಿ ತಮನ್ನಾ ಕೂಡ ಸದ್ಯ ಬ್ಯುಸಿ ಇದ್ದಾರೆ. ಹೀಗಾಗಿ, ಅವರು ವಿಚಾರಣೆಗೆ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ‘ಅವರ ಜತೆ ಹಸಿಬಿಸಿ ದೃಶ್ಯ ನೋಡುತ್ತಿರಲಿಲ್ಲ, ನನಗೆ ಇರಿಸುಮುರುಸು ಆಗುತ್ತಿತ್ತು’: ತಮನ್ನಾ
2023 ನಟಿ ತಮನ್ನಾಗೆ ಆಶಾದಾಯಕವಾಗಿತ್ತು. ‘ಲಸ್ಟ್ ಸ್ಟೋರಿಸ್ 2’ ಹಾಗೂ ‘ಜೈಲರ್’ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಈ ವರ್ಷ ಅವರು ‘ಅರಣ್ಮಣೈ 4’, ‘ವೇದಾ’, ‘ಸ್ತ್ರೀ 2’, ‘ಒಡೇಲಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.