‘ಅವರ ಜತೆ ಹಸಿಬಿಸಿ ದೃಶ್ಯ ನೋಡುತ್ತಿರಲಿಲ್ಲ, ನನಗೆ ಇರಿಸುಮುರುಸು ಆಗುತ್ತಿತ್ತು’: ತಮನ್ನಾ
ಲಸ್ಟ್ ಸ್ಟೋರಿಸ್ 2’ ಪ್ರಚಾರ ಕಾರ್ಯದಲ್ಲಿ ತಮನ್ನಾ ಬ್ಯುಸಿ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ನೋ ಕಿಸ್ ಪಾಲಿಸಿ ಹಾಕಿಕೊಂಡಿದ್ದ ಅವರು ಇದೇ ಮೊದಲ ಬಾರಿಗೆ ಈ ನಿಯಮ ಮುರಿದಿದ್ದಾರೆ. ವಿಜಯ್ ವರ್ಮಾ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕೆಲವರಿಂದ ಟೀಕೆ ಕೂಡ ವ್ಯಕ್ತವಾಗಿದೆ. ಈಗ ತಮನ್ನಾ ಅವರು ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ‘ನಾನು ಆಗಿನ್ನೂ ಪ್ರೇಕ್ಷಕನಾಗಿದ್ದೆ. ನನ್ನ ಕುಟುಂಬದೊಂದಿಗೆ ಕುಳಿತು ಹಸಿಬಿಸಿ ದೃಶ್ಯಗಳನ್ನು ನೋಡುತ್ತಿರಲಿಲ್ಲ. ನನಗೆ ಇರಿಸುಮುರುಸು ಆಗುತ್ತಿತ್ತು. ಆ ರೀತಿಯ ದೃಶ್ಯ ಬಂದಾಗ ನಾನು ಬೇರೆ ಕಡೆ ನೋಡಲು ಪ್ರಾರಂಭಿಸುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ಎಂದಿಗೂ ಆ ರೀತಿಯ ಸಿನಿಮಾ ಮಾಡಿರಲಿಲ್ಲ’ ಎಂದಿದ್ದಾರೆ ತಮನ್ನಾ.
ನಟಿ ತಮನ್ನಾ (Tamannaah Bhatia ) ಸದ್ಯ ಸುದ್ದಿಯಲ್ಲಿದ್ದಾರೆ. ಅವರ ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಎರಡೂ ಚರ್ಚೆಯ ಕೇಂದ್ರಬಿಂದು ಆಗಿದೆ. ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಇದರಲ್ಲಿ ಹಸಿಬಿಸಿ ದೃಶ್ಯಗಳಿವೆ. ವಿಜಯ್ ವರ್ಮಾ ಜೊತೆಗಿನ ಲವ್ ವಿಚಾರಕ್ಕೂ ತಮನ್ನಾ ಸುದ್ದಿ ಆಗುತ್ತಿದ್ದಾರೆ. ಈಗ ತಮನ್ನಾ ಅವರು ಮತ್ತೊಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಅವರು ಎಂದಿಗೂ ಕುಟುಂಬದವರ ಜೊತೆ ಹಸಿಬಿಸಿ ದ್ರಶ್ಯಗಳನ್ನು ನೋಡುತ್ತಿರಲಿಲ್ಲವಂತೆ. ಈ ರೀತಿಯ ವಿಚಾರಗಳು ಅವರಿಗೆ ಇರಿಸುಮುರುಸು ತರಿಸುತ್ತಿದ್ದವು. ಈ ಬಗ್ಗೆ ತಮನ್ನಾ ಮಾತನಾಡಿದ್ದಾರೆ.
‘ಲಸ್ಟ್ ಸ್ಟೋರಿಸ್ 2’ ಪ್ರಚಾರ ಕಾರ್ಯದಲ್ಲಿ ತಮನ್ನಾ ಬ್ಯುಸಿ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ನೋ ಕಿಸ್ ಪಾಲಿಸಿ ಹಾಕಿಕೊಂಡಿದ್ದ ಅವರು ಇದೇ ಮೊದಲ ಬಾರಿಗೆ ಈ ನಿಯಮ ಮುರಿದಿದ್ದಾರೆ. ವಿಜಯ್ ವರ್ಮಾ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕೆಲವರಿಂದ ಟೀಕೆ ಕೂಡ ವ್ಯಕ್ತವಾಗಿದೆ. ಈಗ ತಮನ್ನಾ ಅವರು ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ.
‘ನಾನು ಆಗಿನ್ನೂ ಪ್ರೇಕ್ಷಕನಾಗಿದ್ದೆ. ನನ್ನ ಕುಟುಂಬದೊಂದಿಗೆ ಕುಳಿತು ಹಸಿಬಿಸಿ ದೃಶ್ಯಗಳನ್ನು ನೋಡುತ್ತಿರಲಿಲ್ಲ. ನನಗೆ ಇರಿಸುಮುರುಸು ಆಗುತ್ತಿತ್ತು. ಆ ರೀತಿಯ ದೃಶ್ಯ ಬಂದಾಗ ನಾನು ಬೇರೆ ಕಡೆ ನೋಡಲು ಪ್ರಾರಂಭಿಸುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ಎಂದಿಗೂ ಆ ರೀತಿಯ ಸಿನಿಮಾ ಮಾಡಿರಲಿಲ್ಲ’ ಎಂದಿದ್ದಾರೆ ತಮನ್ನಾ.
ಇದನ್ನೂ ಓದಿ: Tamannaah Bhatia: ಅಭಿಮಾನಿಯ ಕೈ ಮೇಲೆ ತಮನ್ನಾ ಭಾವಚಿತ್ರದ ಟ್ಯಾಟೂ; ಪ್ರೀತಿ ಕಂಡು ನಟಿ ಭಾವುಕ
‘ಈಗ ನನ್ನ ಪ್ರೇಕ್ಷಕರಿಗೆ ಹಾಗೆಯೇ ಆಗಬೇಕೆಂದು ನಾನು ಬಯಸುವುದಿಲ್ಲ. ಆ ಭ್ರಮೆ ನನಗೆ ಮುರಿದುಹೋಗಿದೆ. ಹೀಗಾಗಿ ನಾನು ಕಲಾವಿದನಾಗಿ ನನ್ನನ್ನು ಅನ್ವೇಷಿಸಲು ಮತ್ತು ವಿವಿಧ ರೀತಿಯ ಪಾತ್ರಗಳನ್ನು ಮತ್ತು ಕೆಲಸಗಳನ್ನು ಮಾಡುತ್ತಾ ಖುಷಿ ಪಡುತ್ತೇನೆ’ ಎಂದಿದ್ದಾರೆ ತಮನ್ನಾ. ಈ ಕಾರಣಕ್ಕೆ ಅವರು ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ನಟಿಸಿದರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ