Lust Stories 2: ‘ಇದನ್ನು ನೀವು ನೋಡಿ, ಮನೆಯವರಿಗೂ ತೋರಿಸಿ, ಏನಾಗಲ್ಲ’ ಎಂದ ತಮನ್ನಾಗೆ ನೆಟ್ಟಿಗರ ತರಾಟೆ

Tamannaah Bhatia: ಲೈಂಗಿಕತೆಯ ವಿಚಾರವನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರವನ್ನು ಕುಟುಂಬದವರ ಜೊತೆ ಕುಳಿತು ನೋಡಿ ಎಂದು ತಮನ್ನಾ ಹೇಳಿದ್ದಾರೆ.

Lust Stories 2: ‘ಇದನ್ನು ನೀವು ನೋಡಿ, ಮನೆಯವರಿಗೂ ತೋರಿಸಿ, ಏನಾಗಲ್ಲ’ ಎಂದ ತಮನ್ನಾಗೆ ನೆಟ್ಟಿಗರ ತರಾಟೆ
ತಮನ್ನಾ ಭಾಟಿಯಾ
Follow us
ಮದನ್​ ಕುಮಾರ್​
|

Updated on:Jun 29, 2023 | 2:26 PM

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಇಷ್ಟು ವರ್ಷಗಳ ಸಿನಿ ಜೀವನದಲ್ಲಿ ಅವರು ಯಾವ ನಟರ ಜೊತೆಗೂ ಲಿಪ್​ ಲಾಕ್​ ಮಾಡಿರಲಿಲ್ಲ. ಆದರೆ ‘ಲಸ್ಟ್​ ಸ್ಟೋರೀಸ್​ 2’ (Lust Stories 2) ಸಿನಿಮಾದ ಸಲುವಾಗಿ ಅವರು ಮೊದಲ ಬಾರಿಗೆ ಲಿಪ್​ ಲಾಕ್​ ಮಾಡಿದರು. ಅದು ಅಭಿಮಾನಿಗಳಲ್ಲಿ ವಲಯದಲ್ಲಿ ಸಖತ್​ ಚರ್ಚೆ ಹುಟ್ಟುಹಾಕಿದೆ. ಹೆಸರೇ ಹೇಳುವಂತೆ ‘ಲಸ್ಟ್​ ಸ್ಟೋರೀಸ್​ 2’ ಚಿತ್ರದಲ್ಲಿ ಕಾಮದ ಕುರಿತಾದ ಕಹಾನಿ ಇದೆ. ಇದನ್ನು ಪ್ರಚಾರ ಮಾಡುವಾಗ ತಮನ್ನಾ ಭಾಟಿಯಾ (Tamanna Bhatia) ಅವರು ಬಳಸಿದ ಮಾತುಗಳು ಟ್ರೋಲ್​ ಆಗುತ್ತಿವೆ. ‘ಇದನ್ನು ನೀವು ನೋಡಿ. ಮನೆಯವರಿಗೂ ತೋರಿಸಿ, ಏನಾಗಲ್ಲ’ ಎಂದು ಅವರು ಹೇಳಿದ್ದಾರೆ. ಅದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಇಂದು (ಜೂನ್​ 29) ಈ ಸಿನಿಮಾ ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆಗಿದೆ.

‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ನಡುವೆ ಹಸಿ ಬಿಸಿ ದೃಶ್ಯಗಳು ಇವೆ. ಅಂಥ ಅನೇಕ ಸೀನ್​ಗಳು ಇದರಲ್ಲಿ ಇವೆ. ಎಲ್ಲ ವರ್ಗದ ಪ್ರೇಕ್ಷಕರು ಇಂಥದ್ದನ್ನು ನೋಡುವುದಿಲ್ಲ. ಆದರೂ ಕೂಡ ತಮನ್ನಾ ಅವರು ‘ಇದು ಮನೆಮಂದಿಯೆಲ್ಲ ನೋಡುವ ಸಿನಿಮಾ’ ಎಂಬಂರ್ಥದಲ್ಲಿ ಪ್ರಚಾರ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಪ್ರೋಮೋಗೆ ಜನರು ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Lust Stories 2: ತಮನ್ನಾ ಭಾಟಿಯಾ-ಮೃಣಾಲ್​ ಠಾಕೂರ್​ ವಿಡಿಯೋ ವೈರಲ್​; ಇದು ಇನ್ನೊಂದು ಲಸ್ಟ್​ ಸ್ಟೋರಿ

ತಮನ್ನಾ ಭಾಟಿಯಾ ಹೇಳಿದ್ದೇನು?

‘ಲಸ್ಟ್​ ಸ್ಟೋರೀಸ್​ 2 ನೋಡುವಾಗ ಯಾರಾದರೂ ನಿಮ್ಮ ರೂಮ್​ ಒಳಗೆ ಬಂದರೆ ನಿಲ್ಲಿಸಬೇಡಿ. ಆರಾಮಾಗಿ ನೋಡಿ. ಇದರಲ್ಲಿ ಕೇವಲ ಲಸ್ಟ್​ ಮಾತ್ರ ಇಲ್ಲ. ಬೇರೆ ಭಾವನೆಗಳು ಕೂಡ ಇವೆ. ಇದನ್ನು ಎಲ್ಲರಿಗೂ ತೋರಿಸಿ. ಇಂಥದನ್ನು ನೋಡಿದರೆ ಏನು ಮಹಾ ಆಗಿಬಿಡುತ್ತದೆ? ಬಿರುಗಾಳಿ ಬರುತ್ತಾ? ಆಕಾಶ ಬಿದ್ದು ಹೋಗತ್ತಾ? ವೈ-ಫೈ ಆಫ್​ ಆಗುತ್ತಾ? ಇಲ್ಲ ತಾನೇ? ಅಷ್ಟೆಲ್ಲ ತಲೆ ಕೆಡಿಸಿಕೊಳ್ಳದೇ ಲಸ್ಟ್​ ಸ್ಟೋರೀಸ್​ 2 ಸಿನಿಮಾ ನೋಡಿ ಎಂಜಾಯ್​ ಮಾಡಿ’ ಎಂದು ತಮನ್ನಾ ಹೇಳಿದ್ದಾರೆ.

View this post on Instagram

A post shared by Netflix India (@netflix_in)

ಲೈಂಗಿಕತೆಯ ವಿಚಾರವನ್ನೇ ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದ ಸಿನಿಮಾವನ್ನು ಮನೆಯವರ ಜೊತೆ ಕುಳಿತು ನೋಡಲು ಹೇಗೆ ಸಾಧ್ಯ ಎಂದು ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಸೆಲೆಬ್ರಿಟಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ಅನೇಕರು ಟೀಕಿಸಿದ್ದಾರೆ. ಅಲ್ಲದೇ ರಿಯಲ್​ ಲೈಫ್​ ಬಾಯ್​ಫ್ರೆಂಡ್​ ಆಗಿರುವ ವಿಜಯ್​ ವರ್ಮಾ ಜೊತೆ ನಟಿಸಿದ ತಮನ್ನಾ ಅವರು ಮೊದಲ ಬಾರಿಗೆ ತೆರೆಮೇಲೆ ​ಲಿಪ್​ ಲಾಕ್​ ಮಾಡಿದ್ದಾರೆ ಎಂಬ ವಿಚಾರವನ್ನೇ ಇಟ್ಟುಕೊಂಡು ಪ್ರಚಾರ ಮಾಡುತ್ತಿರುವುದಕ್ಕೂ ಕೆಲವರಿಂದ ವಿರೋಧ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:25 pm, Thu, 29 June 23