Lust Stories 2: ತಮನ್ನಾ ಭಾಟಿಯಾ-ಮೃಣಾಲ್​ ಠಾಕೂರ್​ ವಿಡಿಯೋ ವೈರಲ್​; ಇದು ಇನ್ನೊಂದು ಲಸ್ಟ್​ ಸ್ಟೋರಿ

ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಜನರ ಲೈಕ್​ ಮಾಡಿದ್ದಾರೆ. ಸಾವಿರಾರು ಕಮೆಂಟ್​ಗಳು ಬಂದಿವೆ. ಕೇವಲ 15 ಗಂಟೆಯಲ್ಲಿ 38 ಲಕ್ಷಕ್ಕೂ ಹೆಚ್ಚು ಬಾರಿ ಇದು ವೀಕ್ಷಣೆ ಕಂಡಿದೆ.

Lust Stories 2: ತಮನ್ನಾ ಭಾಟಿಯಾ-ಮೃಣಾಲ್​ ಠಾಕೂರ್​ ವಿಡಿಯೋ ವೈರಲ್​; ಇದು ಇನ್ನೊಂದು ಲಸ್ಟ್​ ಸ್ಟೋರಿ
ತಮನ್ನಾ ಭಾಟಿಯಾ, ಮೃಣಾಲ್​ ಠಾಕೂರ್​
Follow us
ಮದನ್​ ಕುಮಾರ್​
|

Updated on: Jun 27, 2023 | 1:00 PM

ನಟಿ ಮೃಣಾಲ್​ ಠಾಕೂರ್ (Mrunal Thakur)​ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ‘ಸೀತಾ ರಾಮಂ’ ಸಿನಿಮಾ ಯಶಸ್ಸು ಕಂಡ ಬಳಿಕ ಅವರು ದಕ್ಷಿಣ ಭಾರತದಲ್ಲಿ ತುಂಬಾ ಫೇಮಸ್​ ಆದರು. ಈಗ ಅವರಿಗೆ ಹೊಸ ಹೊಸ ಆಫರ್​ಗಳು ಸಿಗುತ್ತಿವೆ. ಜೂನ್ 29ರಂದು ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆಗಲಿರುವ ‘ಲಸ್ಟ್​ ಸ್ಟೋರೀಸ್​ 2’ (Lust Stories 2) ಸಿನಿಮಾದಲ್ಲಿ ಮೃಣಾಲ್​ ಠಾಕೂರ್​ ನಟಿಸಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರು ಕೂಡ ಚಿತ್ರದಲ್ಲಿ ನಟಿಸಿರುವ ಕಾರಣದಿಂದ ಹೈಪ್​ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ನಾಲ್ಕು ಪ್ರತ್ಯೇಕ ಕಥೆಗಳು ಇರಲಿವೆ. ಒಂದು ಕಥೆಯಲ್ಲಿ ತಮನ್ನಾ ಭಾಟಿಯಾ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆ ಹತ್ತಿರ ಆಗುತ್ತಿರುವ ಈ ಸಂದರ್ಭದಲ್ಲಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ಮೃಣಾಲ್​ ಠಾಕೂರ್​ ನಡುವೆ ಸ್ನೇಹ ಜಾಸ್ತಿ ಆಗಿದೆ. ಇಬ್ಬರೂ ಜೊತೆಯಾಗಿ ರೀಲ್ಸ್​ ಮಾಡಿದ್ದಾರೆ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ‘ಮತ್ತೊಂದು ಲಸ್ಟ್​ ಸ್ಟೋರಿ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಜನರ ಲೈಕ್​ ಮಾಡಿದ್ದಾರೆ. ಸಾವಿರಾರು ಕಮೆಂಟ್​ಗಳು ಬಂದಿವೆ. ಕೇವಲ 15 ಗಂಟೆಯಲ್ಲಿ 38 ಲಕ್ಷಕ್ಕೂ ಹೆಚ್ಚು ಬಾರಿ ಇದು ವೀಕ್ಷಣೆ ಕಂಡಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ. ತಮನ್ನಾ ಭಾಟಿಯಾ ಮತ್ತು ಮೃಣಾಲ್​ ಠಾಕೂರ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಮೃಣಾಲ್​ ಠಾಕೂರ್​ ಅವರಿಗೆ 91 ಲಕ್ಷ ಫಾಲೋವರ್ಸ್​ ಇದ್ದಾರೆ. 2.1 ಕೋಟಿ ಜನರು ತಮನ್ನಾ ಭಾಟಿಯಾ ಅವರನ್ನು ಫಾಲೋ ಮಾಡುತ್ತಿದ್ದಾರೆ.

‘ಲಸ್ಟ್​ ಸ್ಟೋರೀಸ್​ 2’ ಕುರಿತು:

ನಾಲ್ಕು ಕಥೆಗಳನ್ನು ಹೊಂದಿದ್ದ ‘ಲಸ್ಟ್​ ಸ್ಟೋರೀಸ್​’ ಸಿನಿಮಾ 2018ರಲ್ಲಿ ಬಿಡುಗಡೆ ಆಗಿತ್ತು. ಇಡೀ ಸಿನಿಮಾ ಬೋಲ್ಡ್​ ಆಗಿ ಮೂಡುಬಂದಿತ್ತು. ಈಗ ‘ಲಸ್ಟ್​ ಸ್ಟೋರಿಸ್​ 2’ ಸಿನಿಮಾ ಒಟಿಟಿ (ನೆಟ್​ಫ್ಲಿಕ್ಸ್​) ಮೂಲಕ ರಿಲೀಸ್​ ಆಗುತ್ತಿದೆ. ತಮನ್ನಾ ಭಾಟಿಯಾ, ಕಾಜೋಲ್​, ನೀನಾ ಗುಪ್ತಾ, ಕುಮುದ್​ ಮಿಶ್ರಾ, ಮೃಣಾಲ್​ ಠಾಕೂರ್​, ವಿಜಯ್​ ವರ್ಮಾ, ಅಂಗದ್​ ಬೇಡಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Lust Stories 2: ವೈರಲ್​ ಆಯ್ತು ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು

‘ಲಸ್ಟ್​ ಸ್ಟೋರಿಸ್​’ ರೀತಿಯೇ ‘ಲಸ್ಟ್​ ಸ್ಟೋರಿಸ್​ 2’ ಸಿನಿಮಾದಲ್ಲೂ 4 ಕಥೆಗಳು ಇವೆ. ಈ 4 ಪ್ರತ್ಯೇಕವಾದ ಕಥೆಗಳಿಗೆ ಆರ್​. ಬಾಲ್ಕಿ, ಅಮಿತ್​ ರವಿಂದರ್​ನಾಥ್​ ಶರ್ಮಾ, ಕೊಂಕಣ ಸೇನ್​ ಶರ್ಮಾ ಮತ್ತು ಸುಜಯ್​ ಘೋಷ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು