Lust Stories 2: ವೈರಲ್​ ಆಯ್ತು ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು

Lust Stories 2 Trailer: ಬಹುತಾರಾಗಣ ಇರುವ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಲೈಂಗಿಕತೆ ಬಗ್ಗೆ ನೀನಾ ಗುಪ್ತಾ ಹೇಳುವ ಡೈಲಾಗ್​ಗಳು ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

Lust Stories 2: ವೈರಲ್​ ಆಯ್ತು ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು
ತಮನ್ನಾ ಭಾಟಿಯಾ, ವಿಜಯ್​ ವರ್ಮಾ
Follow us
ಮದನ್​ ಕುಮಾರ್​
|

Updated on: Jun 21, 2023 | 6:54 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲಸ್ಟ್​ ಸ್ಟೋರೀಸ್​ 2’ (Lust stories 2) ಕೂಡ ಇದೆ. ಬೋಲ್ಡ್​ ಕಥಾಹಂದರ ಹೊಂದಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರು ಕುತೂಹಲ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸದ್ಯಕ್ಕಂತೂ ಒಟಿಟಿಗೆ ಸೆನ್ಸಾರ್​ ಹಂಗಿಲ್ಲ. ತುಂಬ ಬೋಲ್ಡ್​ ಆದಂತಹ ಕಥಾವಸ್ತುವನ್ನು ಪ್ರೇಕ್ಷಕರಿಗೆ ತಲುಪಿಸಲು ನಿರ್ದೇಶಕರು ಒಟಿಟಿ ಮೊರೆ ಹೋಗುತ್ತಾರೆ. ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲೂ ಲೈಂಗಿಕತೆಗೆ ಸಂಬಂಧಿಸಿದ 4 ಡಿಫರೆಂಟ್​ ಕಥೆಗಳು ಇವೆ. ಜೂನ್​ 29ರಂದು ನೆಟ್​ಫ್ಲಿಕ್ಸ್​’ (Netflix) ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್​ನ ಅನೇಕ ಸ್ಟಾರ್​ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಇಂದು (ಜೂನ್​ 21) ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​ (Lust stories 2 Trailer) ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಇದು ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ.

‘ಲಸ್ಟ್​ ಸ್ಟೋರೀಸ್​’ ಚಿತ್ರ 2018ರಲ್ಲಿ ರಿಲೀಸ್​ ಆಗಿತ್ತು. ಬೋಲ್ಡ್​ ಆದಂತಹ ಕಥಾಹಂದರ ಅದರಲ್ಲಿ ಇತ್ತು. 4 ಬೇರೆ ಬೇರೆ ಕಹಾನಿಗಳನ್ನು ಅದು ಒಳಗೊಂಡಿತ್ತು. ಈಗ ‘ಲಸ್ಟ್​ ಸ್ಟೋರಿಸ್​ 2’ ಚಿತ್ರ ರಿಲೀಸ್​ಗೆ ಸಜ್ಜಾಗಿದೆ. ತಮನ್ನಾ ಭಾಟಿಯಾ, ವಿಜಯ್​ ವರ್ಮಾ, ಕಾಜೋಲ್​, ನೀನಾ ಗುಪ್ತಾ, ಮೃಣಾಲ್​ ಠಾಕೂರ್​, ಕುಮುದ್​ ಮಿಶ್ರಾ, ಅಂಗದ್​ ಬೇಡಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಲಸ್ಟ್​ ಸ್ಟೋರಿಸ್​’ ರೀತಿ ‘ಲಸ್ಟ್​ ಸ್ಟೋರಿಸ್​ 2’ ಚಿತ್ರದಲ್ಲೂ ನಾಲ್ಕು ಕಥೆಗಳಿವೆ. ಈ ಕಥೆಗಳಿಗೆ ಆರ್​. ಬಾಲ್ಕಿ, ಕೊಂಕಣ ಸೇನ್​ ಶರ್ಮಾ, ಅಮಿತ್​ ರವಿಂದರ್​ನಾಥ್​ ಶರ್ಮಾ ಹಾಗೂ ಸುಜಯ್​ ಘೋಷ್​ ಅವರು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್​ನ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವ ಕಾರಣದಿಂದ ಹೈಪ್​ ಹೆಚ್ಚಾಗಿದೆ.

2018ರ ‘ಲಸ್ಟ್​ ಸ್ಟೋರೀಸ್​’ ಸಿನಿಮಾದಲ್ಲಿನ ಕಥೆಗಳಿಗೆ ಜೋಯಾ ಅಖ್ತರ್​, ದಿಬಾಕರ್​ ಬ್ಯಾನರ್ಜಿ, ಕರಣ್​ ಜೋಹರ್​ ಮತ್ತು ಅನುರಾಗ್​ ಕಶ್ಯಪ್​ ಅವರು ನಿರ್ದೇಶನ ಮಾಡಿದ್ದರು. ಆದರೆ ಈಗ 2ನೇ ಪಾರ್ಟ್​ನಲ್ಲಿ ಸಂಪೂರ್ಣ ಬೇರೆಯದೇ ನಿರ್ದೇಶಕರ ತಂಡ ಕೆಲಸ ಮಾಡಿದೆ. ಪಾತ್ರವರ್ಗ ಕೂಡ ಸಂಪೂರ್ಣ ಬದಲಾಗಿದೆ. ಬಾಲಿವುಡ್​ ಸಿನಿಮಾಗಳು ಚಿತ್ರಮಂದಿರದಲ್ಲಿ ಗೆಲ್ಲುತ್ತಿಲ್ಲ. ಈ ಸಂದರ್ಭದಲ್ಲಿ ಒಟಿಟಿಯಲ್ಲಾದರೂ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾ ಜನಮೆಚ್ಚುಗೆ ಗಳಿಸಲಿದೆಯೇ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.

ಇದನ್ನೂ ಓದಿ: Vijay Varma: ‘ನಾನು ಖುಷಿಯಾಗಿದ್ದೇನೆ’: ತಮನ್ನಾ ಭಾಟಿಯಾ ಪ್ರೀತಿ ಒಪ್ಪಿಕೊಂಡ ಬಳಿಕ ವಿಜಯ್​ ವರ್ಮಾ ಪ್ರತಿಕ್ರಿಯೆ

ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರು ನಿಜ ಜೀವನದಲ್ಲಿ ಡೇಟಿಂಗ್​ ಮಾಡುತ್ತಿದ್ದಾರೆ. ಅವರಿಬ್ಬರು ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಬೋಲ್ಡ್​ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಅವರ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿರಲಿದೆ. ಕಾಜೋಲ್​ ಅವರು ಈ ಚಿತ್ರದಲ್ಲಿ ಡಿಗ್ಲಾಮ್​ ಪಾತ್ರ ಮಾಡಿದ್ದಾರೆ. ಲೈಂಗಿಕತೆ ಬಗ್ಗೆ ನೀನಾ ಗುಪ್ತಾ ಹೇಳುವ ಡೈಲಾಗ್​ಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ