ಮೊದಲ ದಿನವೇ ‘ಸ್ಪಿರಿಟ್’ ಚಿತ್ರ 150 ಕೋಟಿ ರೂ. ಗಳಿಸುತ್ತೆ ಎಂದ ಸಂದೀಪ್ ರೆಡ್ಡಿ ವಂಗಾ
ಸಂದರ್ಶನವೊಂದರಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ವಿಚಾರದ ಕುರಿತು ಮಾತಾಡಿದ್ದಾರೆ. 3 ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕಾರಣದಿಂದ ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ‘ಸ್ಪಿರಿಟ್’ ಚಿತ್ರಕ್ಕೆ ಅವರು ಪ್ರಭಾಸ್ ಜತೆ ಕೈ ಜೋಡಿಸಿದ ಕಾರಣಕ್ಕೆ ಹೈಪ್ ಹೆಚ್ಚಿದೆ. ಆ ಬಗ್ಗೆ ಸಂದೀಪ್ ಅವರು ಅನಿಸಿಕೆ ತಿಳಿಸಿದ್ದಾರೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ಡೈರೆಕ್ಟರ್ ಎಂದು ಗುರುತಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ ಮತ್ತು ‘ಅನಿಮಲ್’ ಚಿತ್ರಗಳ ಸಕ್ಸಸ್ನಿಂದ ಸಂದೀಪ್ ರೆಡ್ಡಿ ವಂಗಾ ಬಹುಬೇಡಿಕೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ಅವರನ್ನು ನಂಬಿಕೊಂಡು ನೂರಾರು ಕೋಟಿ ರೂಪಾಯಿ ಸುರಿಯಲು ನಿರ್ಮಾಪಕರು ರೆಡಿ ಇದ್ದಾರೆ. ಈಗ ಸಂದೀಪ್ ರೆಡ್ಡಿ ವಂಗಾ ‘ಸ್ಪಿರಿಟ್’ (Spirit) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾಗೆ ಪ್ರಭಾಸ್ (Prabhas) ಹೀರೋ. ಮೊದಲ ದಿನ ‘ಸ್ಪಿರಿಟ್’ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಅವರು ಈಗ ಮಾತನಾಡಿದ್ದಾರೆ.
ಭಾರದ್ವಾಜ್ ರಂಗನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಸಂದೀಪ್ ರೆಡ್ಡಿ ವಂಗಾ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮೂರು ಸೂಪರ್ ಹಿಟ್ ನೀಡಿದ ಕಾರಣದಿಂದ ಸಂದೀಪ್ ಅವರ ಮುಂದಿನ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆ ಜಾಸ್ತಿ ಆಗಿದೆ. ಅದರಲ್ಲೂ ಅವರು ಪ್ರಭಾಸ್ ಜೊತೆ ಕೈ ಜೋಡಿಸಿರುವ ಕಾರಣದಿಂದ ಹೈಪ್ ಹೆಚ್ಚಿದೆ. ಆ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಲಿರುವ ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ
‘ಬಜೆಟ್ ಗಮನಿಸಿದರೆ ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ. ನನ್ನ ಮತ್ತು ಪ್ರಭಾಸ್ ಕಾಂಬಿನೇಷನ್ ಇರುವುದರಿಂದ ಸ್ಯಾಟಲೈಟ್ ಹಾಗೂ ಡಿಜಿಟಲ್ ಪ್ರಸಾರದ ಹಕ್ಕುಗಳಿಂದ ಸಿನಿಮಾದ ಬಜೆಟ್ ಮರಳಿ ಸಿಗುತ್ತದೆ. ಟೀಸರ್, ಟ್ರೇಲರ್, ಹಾಡುಗಳು ಹಾಗೂ ಪ್ರೀ-ರಿಲೀಸ್ ಎಲ್ಲವೂ ಚೆನ್ನಾಗಿ ಜನರ ಗಮನ ಸೆಳೆದರೆ ಮೊದಲ ದಿನವೇ 150 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ. ಇದು ಟ್ರೇಡ್ ಲೆಕ್ಕಾಚಾರ. ಇದು ಪ್ಯಾನ್ ಇಂಡಿಯಾ ಮತ್ತು ವಿಶ್ವಾದ್ಯಂತ ಆಗಬೇಕು’ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಭಾಸ್ ಫ್ಯಾನ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಥಳಿತ
ಈ ಮೊದಲು ಪ್ರಭಾಸ್ ಅವರಿಗಾಗಿ ಒಂದು ಹಾಲಿವುಡ್ ಸಿನಿಮಾದ ತೆಲುಗು ರಿಮೇಕ್ ಮಾಡುವಂತೆ ಸಂದೀಪ್ ರೆಡ್ಡಿ ವಂಗಾ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಆ ಸಿನಿಮಾದ ಕಥೆ ಇಷ್ಟವಾಗದ ಕಾರಣ ಸಂದೀಪ್ ಅವರು ಆ ಅವಕಾಶವನ್ನು ತಿರಸ್ಕರಿಸಿದ್ದರು. ಬಳಿಕ ‘ಸ್ಪಿರಿಟ್’ ಚಿತ್ರದ ಕಥೆಯನ್ನು ಅವರು ಹೇಳಿದರು. ಅದು ಪ್ರಭಾಸ್ಗೆ ಇಷ್ಟವಾಯಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ‘ಸ್ಪಿರಿಟ್’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಈಗ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.