Viral News: ಪೆಟ್ರೋಲ್​ ಬಂಕ್​ನಲ್ಲಿ ಹಣ ಕದ್ದು ಸಿಕ್ಕಿಬೀಳುವ ಭಯದಲ್ಲಿ 14 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದೇಕೆ?

ಚೀನಾದ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್​ನಿಂದ ಹಣ ಕದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ 14 ವರ್ಷಗಳ ಕಾಲ ಗುಹೆಯಲ್ಲಿ ತಲೆಮರೆಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.

Viral News: ಪೆಟ್ರೋಲ್​ ಬಂಕ್​ನಲ್ಲಿ ಹಣ ಕದ್ದು ಸಿಕ್ಕಿಬೀಳುವ ಭಯದಲ್ಲಿ 14 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದೇಕೆ?
ಮೊಫು

Updated on: Mar 05, 2023 | 8:05 AM

ಚೀನಾದ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್​ನಿಂದ ಹಣ ಕದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ 14 ವರ್ಷಗಳ ಕಾಲ ಗುಹೆಯಲ್ಲಿ ತಲೆಮರೆಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ. ಮೊಫು ಎಂಬ ವ್ಯಕ್ತಿ 2009ರಲ್ಲಿ ತನ್ನ ಸಹಚರರೊಂದಿಗೆ ಪೆಟ್ರೋಲ್​ ಬಂಕ್​ನಲ್ಲಿ 156 ಯುವಾನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 1859 ರೂ.ವನ್ನು ಕದ್ದಿದ್ದ.

ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಹೆಯೊಂದರಲ್ಲಿ ತಲೆ ಮರೆಸಿಕೊಂಡಿದ್ದ, ಆತ ಬರೋಬ್ಬರಿ 14 ವರ್ಷಗಳ ಕಾಲ ಯಾರಿಗೂ ಕಾಣದಂತೆ ವಾಸಿಸುತ್ತಿದ್ದ, ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಚೀನಾದ ಹ್ಯೂಬೆ ಪ್ರಾಂತ್ಯದಲ್ಲಿ ನಡೆದಿದೆ. ಎನ್ಶಿ ಸಿಟಿಯ ಲಿಯು ಮೊಫು ಎಂಬ ವ್ಯಕ್ತಿ ಪೆಟ್ರೋಲ್ ಬಂಕ್​ನಲ್ಲಿ ಹಣ ಕದ್ದಿದ್ದ, ಲೂಟಿ ಮಾಡಿದ ಹಣದಲ್ಲಿ ಮೊಫು ಮತ್ತು ಅವನ ಸಹಚರರು 60 ಯುವಾನ್ ಖರ್ಚು ಮಾಡಿದ್ದರು. ಉಳಿದ ಹಣವನ್ನು ಹಂಚಿಕೊಂಡರು. ತನಿಖೆಯ ಬಳಿಕ ಮೊಫು ಸಹಚರರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಓದಿ: Video Viral: ಲೋಹದ ಬೇಲಿ ಮುರಿದ ಮೊಸಳೆ, ಇದು ಭಯಾನಕ ದೃಶ್ಯ ಎಂದ ನೆಟ್ಟಿಗರು

ಮೊಫು ಆಶ್ರಯಕ್ಕಾಗಿ ನಗರದಿಂದ ದೂರವಿರುವ ಪರ್ವತಗಳಲ್ಲಿನ ಗುಹೆಯನ್ನು ಆರಿಸಿಕೊಂಡಿದ್ದ, ಈ ಪ್ರದೇಶದಲ್ಲಿ ಜನರ ಓಡಾಟ ಕಡಿಮೆ ಇತ್ತು. ಪರಿಣಾಮವಾಗಿ ಮೊಫು ಸುರಕ್ಷಿತವಾಗಿದ್ದ. ಆದರೆ ಸಮಯ ಕಳೆದಂತೆ ಅಲ್ಲಿ ಬದುಕುವುದು ಹೆಚ್ಚು ಕಷ್ಟಕರವಾಯಿತು. ಮೊಫು ಭೇಟಿಯಾಡುವ ಮೂಲಕ ಆಹಾರ ತರುತ್ತಿದ್ದ. ತನ್ನ ರಕ್ಷಣೆಗಾಗಿ ನಾಯಿಯನ್ನೂ ಸಾಕಿದ್ದ.

ಇಂತಹ ಪರಿಸ್ಥಿತಿಗಳಲ್ಲಿ 14 ವರ್ಷಗಳನ್ನು ಕಳೆದ ಮೊಫು ಕುಟುಂಬದವರ ಕೋರಿಕೆ ಮೇರೆಗೆ ಪೊಲೀಸರಿಗೆ ಶರಣಾಗಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us