ದೇಹದ ದುರ್ನಾತ ವಿಚಾರವಾಗಿ ವಿಮಾನದಲ್ಲಿ ಜಗಳ, ಸಿಬ್ಬಂದಿಯನ್ನು ಕಚ್ಚಿದ ಪ್ರಯಾಣಿಕ

|

Updated on: Apr 04, 2025 | 12:52 PM

ದೇಹದಿಂದ ಬರುವ ದುರ್ನಾತ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವಾಗ ಸಮಾಧಾನ ಮಾಡಲು ಬಂದ ವಿಮಾನ ಸಿಬ್ಬಂದಿಯನ್ನು ಪ್ರಯಾಣಿಕ ಕಚ್ಚಿರುವ ಘಟನೆ ಶೆನ್ಜೆನ್ ಏರ್​ಲೈನ್ಸ್​ನಲ್ಲಿ ನಡೆದಿದೆ. ಈ ಕಾರಣದಿಂದಾಗಿಯೇ ವಿಮಾನ ಹಾರಾಟ 2 ಗಂಟೆಗಳ ಕಾಲ ವಿಳಂಬವಾಗಿತ್ತು. ಏಪ್ರಿಲ್ 1 ರಂದು ದಕ್ಷಿಣ ಚೀನಾದ ಶೆನ್ಜೆನ್ ನಿಂದ ಶಾಂಘೈಗೆ ಹೊರಡಲು ನಿಗದಿಯಾಗಿದ್ದ ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಸಂಘರ್ಷ ಭುಗಿಲೆದ್ದಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ದೇಹದ ದುರ್ನಾತ ವಿಚಾರವಾಗಿ ವಿಮಾನದಲ್ಲಿ ಜಗಳ, ಸಿಬ್ಬಂದಿಯನ್ನು ಕಚ್ಚಿದ ಪ್ರಯಾಣಿಕ
ವಿಮಾನ
Follow us on

ವಿಮಾನ(Flight)ದಲ್ಲಿ ಮದ್ಯಪಾನ, ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದು, ಸಹ ಪ್ರಯಾಣಿಕರೊಂದಿಗೆ ಜಗಳ ಮಾಡಿರುವ ಸಾಕಷ್ಟು ನಿದರ್ಶನಗಳಿವೆ. ಹಾಗೆಯೇ ದೇಹದಿಂದ ಬರುವ ದುರ್ನಾತ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವಾಗ ಸಮಾಧಾನ ಮಾಡಲು ಬಂದ ವಿಮಾನ ಸಿಬ್ಬಂದಿಯನ್ನು ಪ್ರಯಾಣಿಕರಬ್ಬರು ಕಚ್ಚಿರುವ ಘಟನೆ ಶೆನ್ಜೆನ್ ಏರ್​ಲೈನ್ಸ್​ನಲ್ಲಿ ನಡೆದಿದೆ.

ಈ ಕಾರಣದಿಂದಾಗಿಯೇ ವಿಮಾನ ಹಾರಾಟ 2 ಗಂಟೆಗಳ ಕಾಲ ವಿಳಂಬವಾಗಿತ್ತು. ಏಪ್ರಿಲ್ 1 ರಂದು ದಕ್ಷಿಣ ಚೀನಾದ ಶೆನ್ಜೆನ್ ನಿಂದ ಶಾಂಘೈಗೆ ಹೊರಡಲು ನಿಗದಿಯಾಗಿದ್ದ ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಸಂಘರ್ಷ ಭುಗಿಲೆದ್ದಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಅಕ್ಕಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಘರ್ಷಣೆ ಆರಂಭವಾಯಿತು.

ಇದನ್ನೂ ಓದಿ
Video: ಸುಡಾನ್​ನಲ್ಲಿ ಸೇನಾ ವಿಮಾನ ಪತನ, 46 ಮಂದಿ ಸಾವು
ವಿಮಾನ ರನ್​ ವೇನಲ್ಲಿ ಇಳಿಯುವಾಗ ಅಡ್ಡ ಬಂದೇ ಬಿಡ್ತು ಮತ್ತೊಂದು ವಿಮಾನ
ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ವಿಮಾನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ

ಅವರಲ್ಲಿ ಒಬ್ಬರು ಇನ್ನೊಬ್ಬರ ದೇಹದ ವಾಸನೆಯ ಬಗ್ಗೆ ದೂರು ನೀಡಿದರೆ, ಇನ್ನೊಬ್ಬರು ತನ್ನ ಸಹ ಪ್ರಯಾಣಿಕರ ಸೆಂಟ್​ನ ಬಲವಾದ ವಾಸನೆಯನ್ನು ವಿರೋಧಿಸಿದರು. ಅವರ ನಡುವಿನ ಮಾತಿನ ಚಕಮಕಿ ಶೀಘ್ರದಲ್ಲೇ ದೈಹಿಕ ಘರ್ಷಣೆಗೆ ಕಾರಣವಾಯಿತು. ಇಬ್ಬರು ಮಹಿಳಾ ವಿಮಾನ ಸಿಬ್ಬಂದಿ ಮತ್ತು ಇಬ್ಬರು ಪುರುಷ ಸಹೋದ್ಯೋಗಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆಯಲು ಪ್ರಯತ್ನಿಸಿದರು.

ಮತ್ತಷ್ಟು ಓದಿ: ವಿಮಾನದಲ್ಲಿ ಏಕಾಏಕಿ ರಂಧ್ರ ಸೃಷ್ಟಿಯಾಗಿ, 8 ತಿಂಗಳ ಮಗು ಸೇರಿ ನಾಲ್ಕು ಮಂದಿ 15 ಸಾವಿರ ಅಡಿಯಿಂದ ಬಿದ್ದಿದ್ರು, ಏನಿದು ಘಟನೆ

ಗಲಾಟೆ ನಡೆಯುತ್ತಿದ್ದಾಗ ಸೃಷ್ಟಿಯಾದ ಅವ್ಯವಸ್ಥೆಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ವಿಮಾನ ಸಿಬ್ಬಂದಿಯೊಬ್ಬರು, ಬಾಯಿ ತೆಗೆಯಿರಿ. ನೀವು ನನ್ನನ್ನು ಕಚ್ಚುತ್ತಿದ್ದೀರಾ ಎಂದು ವಿಮಾನ ಸಿಬ್ಬಂದಿ ಕೂಗುತ್ತಿದ್ದಾರೆ.

ಸಿಬ್ಬಂದಿ ಸಣ್ಣ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾಗೆಯೇ ಘರ್ಷಣೆಯಲ್ಲಿ ಭಾಗಿಯಾದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಕರೆದೊಯ್ದರು. ಇತರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ಹೇಳಲಾಯಿತು.

ಎರಡು ಗಂಟೆಗಳ ನಂತರ ಅವರು ಮತ್ತೆ ವಿಮಾನ ಹತ್ತಿದರು. ಶೆನ್ಜೆನ್ ಏರ್ಲೈನ್ಸ್ ಪ್ರಯಾಣಿಕರು ಮತ್ತು ಅದರ ಉದ್ಯೋಗಿಗಳ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತದೆ ಎಂದು ಹೇಳಿದೆ.

ಈ ಇಬ್ಬರು ಮಹಿಳೆಯರನ್ನು ಭವಿಷ್ಯದಲ್ಲಿ ಯಾವುದೇ ವಿಮಾನ ಮತ್ತು ರೈಲುಗಳಲ್ಲಿ ಪ್ರಯಾಣಿಸದಂತೆ ಕಪ್ಪುಪಟ್ಟಿಗೆ ಸೇರಿಸಬೇಕು. ಇಂತಹ ಅವಿವೇಕಿ ಜನರು ಯಾವುದೇ ಸ್ಥಳದಲ್ಲಿ ಅಪಾಯವನ್ನುಂಟು ಮಾಡಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ