ಬಾಹ್ಯ ವ್ಯಕ್ತಿಗಳಿಗಿಂತ ಮನೆಯ ಸದಸ್ಯರ ಅದರಲ್ಲೂ ತಂದೆ ತಾಯಿಯರು ಬೆಂಬಲ, ಪ್ರೋತ್ಸಾಹ ನೀಡಿದರೆ ಅದೆಂತಹ ಕಷ್ಟಕರವಾದ ಸಾಧನೆ ಮಾಡಲೂ ಸ್ಪೂರ್ತಿ ತುಂಬುತ್ತದೆ. ಇದೀಗ ಸಣ್ಣ ತರಗತಿಯ ವಿದ್ಯಾರ್ಥಿಯೊಬ್ಬರು ಪರೀಕ್ಷೆಯಲ್ಲಿ ತನ್ನ ತಾಯಿಯನ್ನು ಹೊಗಳಿ ಪ್ರಬಂಧವನ್ನು ಬರೆದಿದ್ದಾರೆ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಬಂಧ ಓದಿದ ಕೆಲವು ನೆಟ್ಟಿಗರು ಕಣ್ಣೀರು ಹಾಕಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಪ್ರಬಂಧಕ್ಕೆ ಐದರಲ್ಲಿ ಮೂರೂವರೆ ಅಂಕ ಕೊಟ್ಟರೂ ನೆಟ್ಟಿಗರು ಮಾತ್ರ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗಾದರೆ ಆ ಪ್ರಬಂಧದಲ್ಲಿ ಬರೆದದ್ದಾದರೂ ಏನು? ಇಲ್ಲಿದೆ ನೋಡಿ:
“ನನ್ನ ತಾಯಿಯನ್ನು ನಾನು ಮೆಚ್ಚುತ್ತೇನೆ ಏಕೆಂದರೆ ಅವಳು ನನಗೆ ದಯೆ ಮತ್ತು ಕಾಳಜಿಯನ್ನು ಕಲಿಸಿದವಳು. ಅವಳು ತುಂಬಾ ತಮಾಷೆಯ ವ್ಯಕ್ತಿ ಮತ್ತು ಒಳ್ಳೆಯ ಹಾಸ್ಯ ಮಾಡುವವಳು. ಅವಳು ಚೆನ್ನಾಗಿ ಅಡುಗೆ ಮಾಡಬಲ್ಲಳು. ಅವಳು ನನಗೆ ನಡೆಯಲು ಕಲಿಸಿದಳು. ಅವಳು ಅದ್ಭುತವಾದ ಆಹಾರವನ್ನು ತಯಾರಿಸುತ್ತಾಳೆ, ಅವಳು ಕೆಲವೊಮ್ಮೆ ನನಗೆ ತಿನ್ನಿಸುತ್ತಾಳೆ, ಅವಳು ನನ್ನನ್ನು ಯಾವಾಗಲೂ ನಗಿಸುತ್ತಾಳೆ, ಅವಳು ಮನೆಯಲ್ಲಿ ಕೆಲಸ ಮಾಡುತ್ತಾಳೆ ಮತ್ತು ನನ್ನನ್ನು ನೋಡಿಕೊಳ್ಳುತ್ತಾಳೆ, ಅವಳು ನನ್ನನ್ನು ದಿನಕ್ಕೆ ಎರಡು ಗಂಟೆ ಓದುವಂತೆ ಮಾಡುತ್ತಾಳೆ, ನನ್ನನ್ನು ಟ್ಯೂಷನ್‌ಗೆ ಸೇರಿಸುತ್ತಾಳೆ, ಅವಳು ನನ್ನನ್ನು ವಾರಕ್ಕೆ ಎರಡು ಬಾರಿ ಈಜಲು ಕರೆದುಕೊಂಡು ಹೋಗುತ್ತಾಳೆ, ನನಗೆ ನನ್ನ ತಾಯಿ ತುಂಬಾ ಇಷ್ಟ, ಅವಳು ಜಗತ್ತಿನಲ್ಲಿ ಅತ್ಯುತ್ತಮವಾದವಳು” ಎಂದು ಪ್ರಬಂಧದಲ್ಲಿ ಬರೆಯಲಾಗಿದೆ.
ಇದರ ಫೋಟೋವನ್ನು ಟ್ವಿಟರ್ಲ್ಲಿ ಹಂಚಿಕೊಂಡ ರಿತುಪರ್ಣಾ ಚಟರ್ಜಿ ಅವರು, “ನಾನು ಅಳುತ್ತೇನೆ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋ ವೈರಲ್ ಪಡೆದು, ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಅನೇಕರು ಈ ಹೃದಯಸ್ಪರ್ಷಿ ಪ್ರಬಂಧವನ್ನು ಮೆಚ್ಚಿಕೊಂಡಿದ್ದಾರೆ.
I'm going to cry ? pic.twitter.com/Xl63f25R3n
— Rituparna Chatterjee (@MasalaBai) August 17, 2022
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Sat, 20 August 22