ಸೌದಿ ಅರೇಬಿಯಾದ ಪಾದರಕ್ಷೆ ಅಂಗಡಿಯೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಭಾರತೀಯರು ಟಾಯ್ಲೆಟ್ಗೆ ಬಳಸುವಂತಿರುವ ಹವಾಯಿ ಚಪ್ಪಲಿಯೊಂದನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಇದರ ಬೆಲೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಚಪ್ಪಲಿಯ ಬೆಲೆ ಬರೋಬ್ಬರಿ 1ಲಕ್ಷ ರೂಪಾಯಿ.
ಭಾರತದಲ್ಲಿ ಸಾಮಾನ್ಯವಾಗಿ 100 ರೂಪಾಯಿಗೆ ಹೆಚ್ಚೆಂದರೆ ಇನ್ನೂರು ರೂಪಾಯಿ ಒಳಗಡೆ ಸಿಗುವ ಈ ಹವಾಯಿ ಚಪ್ಪಲಿಯನ್ನು ಸೌದಿ ಅರೇಬಿಯಾದಲ್ಲಿ 4,500 ರಿಯಾಲ್ಗಳು ಅಂದರೆ ಭಾರತದ ರೂಪಾಯಗಳಲ್ಲಿ ಹೇಳುವುದಾದರೆ 1,00,305 ಲಕ್ಷ ರೂ. ಮಾರಾಟ ಮಾಡಲಾಗುತ್ತಿದೆ.
We Indians use these sandals as a toilet footwear 😀 pic.twitter.com/7EtWY27tDT
— Rishi Bagree (@rishibagree) July 16, 2024
@rishibagree ಎಂಬ ಟ್ವಟಿರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಅಂಗಡಿಯ ಸಿಬ್ಬಂದಿ ಕೈಗವಸುಗಳನ್ನು ಧರಿಸಿ ಜೋಡಿ ಪಾದರಕ್ಷೆಗಳನ್ನು ಹೊರತೆಗೆದು ಗಾಜಿನ ಮೇಜಿನ ಮೇಲೆ ಅದರ ವಿಶೇಷತೆಗಳನ್ನು ಹೇಳುತ್ತಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ” ಇದು ಟಾಯ್ಲೆಟ್ಗೆ ಬಳಸೋ ಹವಾಯಿ ಚಪ್ಪಲಿ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 am, Wed, 17 July 24