220 ಟನ್ ತೂಕದ ಪುರಾತನ ಹೋಟೆಲ್ ಭವನವನ್ನು 30 ಅಡಿ ಜರುಗಿಸಿರುವ ಸಾಹಸ ವಿಡಿಯೋ ಇಲ್ಲಿದೆ ನೋಡಿ

|

Updated on: Dec 12, 2023 | 8:03 PM

Viral Video: ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಅದನ್ನು ನೋಡಿದರೆ ನಿಮಗೆ ಈ ಮಾಹಿತಿ ಸತ್ಯಾಸತ್ಯತೆ ವೇದ್ಯವಾದೀತು.. ಕಟ್ಟಡ ಸ್ಥಳಾಂತರಗೊಂಡಿರುವ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಹ್ಯಾಲಿಫ್ಯಾಕ್ಸ್‌ನಲ್ಲಿರುವ ಈ ಕಟ್ಟಡವನ್ನು 1826 ರಲ್ಲಿ ನಿರ್ಮಿಸಲಾಯಿತು.

220 ಟನ್ ತೂಕದ ಪುರಾತನ ಹೋಟೆಲ್ ಭವನವನ್ನು 30 ಅಡಿ ಜರುಗಿಸಿರುವ ಸಾಹಸ ವಿಡಿಯೋ ಇಲ್ಲಿದೆ ನೋಡಿ
ಪುರಾತನ ಹೋಟೆಲ್ ಭವನವನ್ನು 30 ಅಡಿ ಜರುಗಿಸಿರುವ ಸಾಹಸ ವಿಡಿಯೋ ಇಲ್ಲಿದೆ
Follow us on

ಕೆನಡಾದ (Canada) ನೋವಾ ಸ್ಕಾಟಿಯಾದಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ 220 ಟನ್ ತೂಕದ ಬೃಹತ್ ಕಟ್ಟಡವನ್ನು ಸೋಪ್ ಬಾರ್‌ಗಳ (Bars Of Soap) ಸಹಾಯದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ! ಹೌದು ನೀವು ಈ ಸುದ್ದಿಯನ್ನು ಸರಿಯಾಗಿ ಓದಿದ್ದೀರಿ (Building Shift).

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಅದನ್ನು ನೋಡಿದರೆ ನಿಮಗೆ ಈ ಮಾಹಿತಿ ಸತ್ಯಾಸತ್ಯತೆ ವೇದ್ಯವಾದೀತು.. ಕಟ್ಟಡ ಸ್ಥಳಾಂತರಗೊಂಡಿರುವ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಹ್ಯಾಲಿಫ್ಯಾಕ್ಸ್‌ನಲ್ಲಿರುವ ಈ ಕಟ್ಟಡವನ್ನು 1826 ರಲ್ಲಿ ನಿರ್ಮಿಸಲಾಯಿತು.

ನಂತರ ಅದನ್ನು ವಿಕ್ಟೋರಿಯನ್ ಎಲ್ಮ್ವುಡ್ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಈ ಕಟ್ಟಡವನ್ನು ಕೆಡವಲು ಸಿದ್ಧತೆ ನಡೆದಿದೆ. ಆದಾಗ್ಯೂ, ರಿಯಲ್ ಎಸ್ಟೇಟ್ ಕಂಪನಿ ಗ್ಯಾಲಕ್ಸಿ ಪ್ರಾಪರ್ಟೀಸ್ ಕಟ್ಟಡವನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆಯೊಂದಿಗೆ ಹೋಟೆಲ್ ಅನ್ನು ಖರೀದಿಸಿತು. ಇದು ಕಟ್ಟಡವನ್ನು ನೆಲಸಮದಿಂದ ರಕ್ಷಿಸಿದೆ. ಆದರೆ ಈ ಕನ್‌ಸ್ಟ್ರಕ್ಷನ್ ಕಂಪನಿ ಸಂಪೂರ್ಣ ಕಟ್ಟಡವನ್ನು ಸ್ಥಳಾಂತರಿಸಿರುವ ರೀತಿ ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ