AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾನಿಪುರಿ ವ್ಯಾಪಾರಿಗಳ ತಿಂಗಳ ಆದಾಯ ಎಷ್ಟು? ದಿನದ ಗಳಿಕೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ

ಸಾಮಾನ್ಯವಾಗಿ ಹೆಚ್ಚಿನವರು ಮುಸ್ಸಂಜೆ ಹೊತ್ತಿನಲ್ಲಿ ಪಾನಿಪುರಿ ಗೋಲ್ಗಪ್ಪವನ್ನು  ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಮತ್ತು ಪಾಪಾ ಈ ಪಾನಿಪುರಿ ಮಾರುವವರು ಗಂಟೆಗಟ್ಟಲೆ ಬೀದಿಬದಿಯಲ್ಲಿ ನಿಂತುಕೊಂಡು ಕೆಲಸ ಮಾಡ್ತಾರಲ್ವಾ, ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತೋ ಇಲ್ವೋ ಎಂದು ಪಾನಿಪುರಿ ಮಾರಾಟಗಾರರನ್ನು ನೋಡಿ ಹಲವರು ಮರುಕ ವ್ಯಕ್ತಪಡಿಸುತ್ತಾರೆ.  ಆದ್ರೆ ನಿಜವಾಗಿಯೂ ಅವರು ದಿನದಲ್ಲಿ ಎಷ್ಟು ಸಂಪಾದನೆ ಮಾಡ್ತಾರೆ ಅಂತ ನಿಮಗೆ ಗೊತ್ತಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.

Viral Video: ಪಾನಿಪುರಿ ವ್ಯಾಪಾರಿಗಳ ತಿಂಗಳ ಆದಾಯ ಎಷ್ಟು? ದಿನದ ಗಳಿಕೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Dec 13, 2023 | 4:23 PM

Share

ಪಾನಿಪುರಿ, ಗೋಲ್ಗಪ್ಪ ಭಾರತದ ಅತ್ಯಂತ ಜನಪ್ರಿಯ ಬೀದಿಬದಿ ಆಹಾರವಾಗಿದೆ. ಅದ್ರಲ್ಲೂ ಈ ಪಾನಿಪುರಿ ಹೆಂಗಳೆಯರ ಆಲ್ ಟೈಮ್ ಫೇವರೆಟ್ ಸ್ಟ್ರೀಟ್ ಫುಡ್ ಅಂತಾನೇ ಹೇಳಬಹುದು. ಯಾಕಂದ್ರೆ ಸಂಜೆ ಹೊತ್ತಲ್ಲಿ ಯುವಕರು ಹೆಚ್ಚಾಗಿ ಟೀ ಸ್ಟಾಲ್ ಅಥವಾ ಫಾಸ್ಟ್ ಫುಡ್ ಶಾಪ್ಗಳಿಗೆ ಹೋದ್ರೆ, ಯುವತಿಯರು  ಮಾತ್ರ ಪಾನಿಪುರಿ ವ್ಯಾಪಾರಿಯ ಬಳಿ ಹೋಗಿ ಬಯ್ಯಾ ಏಕ್ ಪ್ಲೇಟ್ ಪಾನಿಪುರಿ ದೇದೋ ಎಂದು ಹೇಳುತ್ತಾ ಬೀದಿಬದಿಯಲ್ಲಿ ನಿಂತುಕೊಂಡು ಪಾನಿಪುರಿ ಸವಿಯುತ್ತಾರೆ. ಅಲ್ಲಾ ಇವ್ರೆಲ್ಲಾ ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ನಿಂತು ಕಷ್ಟಪಟ್ಟು ಕೆಲಸ ಮಾಡ್ತಾರಲ್ವಾ, ಇವರಿಗೆ ತಮ್ಮ ಕೆಲಸಕ್ಕೆ ತಕ್ಕ ಗಳಿಗೆ, ಲಾಭ ಸಿಗುತ್ತದೆಯೇ?,  ಇವರಿಗೆ ಇದಕ್ಕಿಂತ ಒಳ್ಳೆಯ ಸಂಬಳ ಸಿಗುವ ಕೆಲಸಕ್ಕೆ ಹೋಗ್ಬಹುದಲ್ವಾ ಅಂತೆಲ್ಲಾ ಹಲವರು ಹೇಳುತ್ತಿರುತ್ತಾರೆ.   ಆದ್ರೆ  ಈ ವಿಡಿಯೋವನ್ನು ನೋಡಿದ್ರೆ  ಅಬ್ಬಬ್ಬಾ! ಪಾನಿಪುರಿ ಮಾರಾಟ ಮಾಡುವವರು ಒಂದು ದಿನಕ್ಕೆ ಇಷ್ಟೆಲ್ಲಾ ಸಂಪಾದನೆ ಮಾಡ್ತಾರಾ?   ಲ್ಯಾಪ್ಟಾಪ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವ ಬದಲು ನಾನು ಕೂಡಾ ಒಂದು ಪಾನಿಪುರಿ ಸ್ಟಾಲ್ ತೆರೆದರೆ ಚೆನ್ನಾಗಿರುತ್ತೆ  ಎಂದು ನೀವು ಖಂಡಿತವಾಗಿಯೂ ಹೇಳ್ತೀರಾ ನೋಡಿ.

ಈ ವಿಡಿಯೋವನ್ನು ವಿಜಯ್ (@vijay_vox_) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಿಜಯ್ ಅವರು ಬೀದಿಬದಿಯಲ್ಲಿ ಪಾನಿಪುರಿ ಮಾರಾಟ ಮಾಡುವಂತಹ ವ್ಯಾಪಾರಿಯ ಬಳಿ ಹೋಗಿ, ನಿಮ್ಮ ದಿನದ ಸಂಪಾದನೆ ಎಷ್ಟು ಎಂದು ಕೇಳುತ್ತಾರೆ. ಆ ಸಂದರ್ಭದಲ್ಲಿ ಆ ಪಾನಿಪುರಿ ಮಾರಾಟಗಾರ ನಾನು ಒಂದು ದಿನದಲ್ಲಿ 2500 ರೂ. ಸಂಪಾದನೆ ಮಾಡುತ್ತೇನೆ ಎಂದು ಹೇಳುವುದನ್ನು ಕಾಣಬಹುದು. ಓಹ್ ದೇವ್ರೇ..  ಇವ್ರು ಒಂದು ದಿನಕ್ಕೆ ಇಷ್ಟೆಲ್ಲಾ ಸಂಪಾದನೆ ಮಾಡ್ತಾರ ಎಂದು ಹಲವರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ನಿಲ್ಲೇ ಗಂಗಮ್ಮ ಅರ್ಜೆಂಟ್ ಯಾಕ್ ಮಾಡ್ತೀ ನಮ್ಮವ್ವ” ಕಂಡೆಕ್ಟರ್ ಪ್ರಯಾಣಿಕರನ್ನು ಬಸ್ಸಿಂದ ಹತ್ತಿ-ಇಳಿಸುವುದು ಹೀಗೆ 

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

View this post on Instagram

A post shared by Vijay (@vijay_vox_)

ಡಿಸೆಂಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 42.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.6 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿದ್ದಾರೆʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಅವರು ದಿನವಿಡೀ ನಿಂತುಕೊಂಡು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು, ಇನ್ನು ಮುಂದೆ ನಾನು ಕೂಡಾ ಇದೇ ವ್ಯಾಪಾರವನ್ನು ಮಾಡುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:12 pm, Tue, 12 December 23

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್