ಮುಂಬೈ ಲೋಕಲ್ ಟ್ರೈನ್​​ನಲ್ಲಿ ಕಾನ್‌ಸ್ಟೆಬಲ್‌ ಮುಂದೆ ಯುವತಿ ಡ್ಯಾನ್ಸ್, ಪೇದೆ ಏನು ಮಾಡಿದರು ವಿಡಿಯೋ ನೋಡಿ!

ಯುವತಿ ಇದ್ದಕ್ಕಿದ್ದಂತೆ ಡ್ಯಾನ್ಸ್ ಮಾಡುತ್ತಾ ಪೊಲೀಸ್ ಪೇದೆಗೂ ಡಾನ್ಸ್​ ಮಾಡುವಂತೆ ಪ್ರೇರೇಪಿಸಿದ್ದಾಳೆ. ಮೊದಲು ಕಾನ್‌ಸ್ಟೆಬಲ್‌ ಡ್ಯಾನ್ಸ್ ಮಾಡಲು ಮುಂದಾಗಿಲ್ಲ. ಆದರೆ ಅವಳ ನೃತ್ಯವನ್ನು ತದೇಕಚಿತ್ತದಿಂದ ನೋಡಿದ ಪೇದೆಗೆ ಅದೇನನ್ನಿಸಿತೂ, ಯೂನಿಫಾರ್ಮ್‌ನಲ್ಲಿಯೇ ಆ ತುಂಬು ಚೆಲುವೆಯ ಜೊತೆ ಜೋಡಿ ನೃತ್ಯದಲ್ಲಿ ತೊಡಗುತ್ತಾನೆ.

ಮುಂಬೈ ಲೋಕಲ್ ಟ್ರೈನ್​​ನಲ್ಲಿ ಕಾನ್‌ಸ್ಟೆಬಲ್‌ ಮುಂದೆ ಯುವತಿ ಡ್ಯಾನ್ಸ್, ಪೇದೆ ಏನು ಮಾಡಿದರು ವಿಡಿಯೋ ನೋಡಿ!
ಮುಂಬೈ ಲೋಕಲ್ ಟ್ರೈನ್​​ನಲ್ಲಿ ಕಾನ್‌ಸ್ಟೆಬಲ್‌ ಮುಂದೆ ಯುವತಿ ಡ್ಯಾನ್ಸ್
Follow us
ಸಾಧು ಶ್ರೀನಾಥ್​
|

Updated on: Dec 12, 2023 | 1:22 PM

ಇದು ಇಂಟರ್‌ನೆಟ್ ಯುಗ..ಪ್ರತಿಯೊಬ್ಬರೂ ತಮ್ಮ ಪ್ರತಿಭೆಯಿಂದ ಫೇಮಸ್ ಆಗಲು ಮತ್ತು ಮೇಲಕ್ಕೆ ಏರಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ಇಂದಿನ ಪೀಳಿಗೆಯ ಯುವಕರು ಹೋದಲ್ಲೆಲ್ಲಾ ರೀಲ್ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ರೀಲು, ಶಾರ್ಟ್ಸ್ ಹೆಸರಲ್ಲಿ ವಿಡಿಯೋ ಮಾಡತೊಡಗಿದ್ದಾರೆ. ಇದೀಗ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ದೆಹಲಿ ಮೆಟ್ರೋದಲ್ಲಿ ಹುಡುಗಿಯರು ನೃತ್ಯ ಮಾಡುವ ಅನೇಕ ವೀಡಿಯೊಗಳು ಪ್ರದರ್ಶನಗೊಂಡಿವೆ. ಇದು ಕೇವಲ ರಾಜಧಾನಿ ಮೆಟ್ರೋಗೆ ಸೀಮಿತವಾಗಿಲ್ಲ, ಈಗ ವಾಣಿಜ್ಯ ರಾಜಧಾನಿ ಮುಂಬೈ ಲೋಕಲ್ ರೈಲುಗಳಲ್ಲಿಯೂ (Mumbai Local train) ಕೆಲವು ರೀಲ್ಸ್​ ಪ್ರದರ್ಶನಗಳು (Viral Video) ನಡೆಯುತ್ತಿವೆ. ಮುಂಬೈ ಲೋಕಲ್ ರೈಲಿನಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಯುವತಿ ತನ್ನಲ್ಲಿ ತುಂಬಿತುಳುಕುತ್ತಿದ್ದ ಭಾರೀ ಡ್ಯಾನ್ಸ್​ ಪ್ರತಿಭೆಯನ್ನು ಢಾಳಾಗಿ ಪ್ರದರ್ಶನಕ್ಕೆ ಇಡಲು ಸಜ್ಜಾಗುತ್ತಿದ್ದಂತೆ ತನ್ನ ಹಿಂದೆ ಒಬ್ಬ ಪೊಲೀಸ್ ನಿಂತಿರುವುದನ್ನು (Police Constable) ಗಮನಿಸಿದಳು. ನಂತರ ಆ ಯುವತಿ ಸ್ವಲ್ಪ ಕಾಲ ನೃತ್ಯವನ್ನು ಮಾಡಿದ್ದಾಳೆ. ಆದರೆ, ಆ ನಂತರ ನಡೆದಿದ್ದು ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ (Social Media).

ಮುಂಬೈ ಲೋಕಲ್ ಟ್ರೈನ್ ವೈರಲ್ ವಿಡಿಯೋದಲ್ಲಿ ಯುವತಿ-ಪೇದೆ ಕಾಣಿಸಿಕೊಂಡಿದ್ದಾರೆ. ಯುವತಿಯೊಬ್ಬಳು ಚಲಿಸುವ ರೈಲಿನಲ್ಲಿ ರೀಲ್ ಮಾಡುತ್ತಿದ್ದಳು… ಕ್ಯಾಮರಾ ನೋಡುತ್ತಾ ಡ್ಯಾನ್ಸ್ ಮಾಡುತ್ತಿದ್ದಳು… ಡ್ಯಾನ್ಸ್ ಮಾಡುತ್ತಿದ್ದಾಗ ಅಲ್ಲಿ ನಿಂತಿದ್ದ ಪೊಲೀಸ್ ಪೇದೆಯೊಬ್ಬರಿಗೆ ತನ್ನೊಂದಿಗೆ ಡ್ಯಾನ್ಸ್​ ಮಾಡುವಂತೆ ಪ್ರೇರೇಪಿಸಿದ್ದಾಳೆ. ಡ್ಯಾನ್ಸ್ ಮಾಡುವಾಗ ಹುಡುಗಿ ತನ್ನ ಹಿಂದೆ ನಿಂತಿದ್ದ ಪೊಲೀಸ್ ಪೇದೆಗೆ ಆಹ್ವಾನ ಕೊಟ್ಟಿದ್ದಾಳೆ.

ಆದರೆ ಮೊದಲು ಕಾನ್‌ಸ್ಟೆಬಲ್‌ ಅವಳೊಂದಿಗೆ ಡ್ಯಾನ್ಸ್ ಮಾಡಲು ಮುಂದಾಗಿಲ್ಲ. ಶಿಸ್ತಿನ ಇಲಾಖೆಗೆ ಗೌರವ ತರುವ ರೀತಿ, ಅಂಥದ್ದೆಲ್ಲಾ ನಮ್ಮ ಮುಂದೆ ನಡೆಯುವುದಿಲ್ಲ. ಹೊರಹೋಗು ಎಂದು ಬಾಗಿಲು ತೋರಿಸಿದ್ದಾರೆ ಆ ಪೇದೆ. ಆದರೆ ಆ ಕ್ಷಣದಲ್ಲಿ ಅವಳ ನೃತ್ಯವನ್ನು ಇದೇಕಚಿತ್ತದಿಂದ ನೋಡಿದ ಪೇದೆಗೆ ಅದೇನನ್ನಿಸಿತೂ, ಆತನೂ ಸಹ ಪೊಲೀಸ್ ಯೂನಿಫಾರ್ಮ್‌ನಲ್ಲಿಯೇ ಜೋಡಿ ನೃತ್ಯದಲ್ಲಿ ತೊಡಗುತ್ತಾನೆ ಆ ತುಂಬು ಚೆಲುವೆಯ ಜೊತೆ. ಇದನ್ನೆಲ್ಲ ಕಂಡು ಲೋಕಲ್ ರೈಲಿನಲ್ಲಿದ್ದ ಪ್ರಯಾಣಿಕರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜವಾಬ್ದಾರಿಯುತ ನೌಕರನಾಗಿದ್ದುಕೊಂಡು ಇಂತಹ ಕೆಲಸ ಮಾಡಿದ್ದರಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಈ ವೈರಲ್ ವೀಡಿಯೊವನ್ನು ಮುಂಬೈ ಸ್ಥಳೀಯ ವ್ಯಕ್ತಿಯೊಬ್ಬರು @Vivekspeaks_ ಖಾತೆಯ ಮೂಲಕ X ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ ಮತ್ತು ನಾನಾ ವ್ಯಾಖ್ಯಾನಗಳು ಮತ್ತರು ಖಾರದ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಲೋಕಲ್ ಟ್ರೈನ್ , ಮೆಟ್ರೋಗಳಲ್ಲಿ ರೀಲ್ ಮಾಡಿ ಬೇರೆಯವರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾನ್ಸ್‌ಟೇಬಲ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅನೇಕ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್