AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆನೆ ಬಂತೋ.. ಕಾಪಾಡಪ್ಪ ಗಣಪ; ಈ ಹುಡುಗರು ಗೋಳಾಟ ನೋಡಿ 

ಸಾಮಾನ್ಯವಾಗಿ ಆನೆಗಳು ಆಕ್ರಮಣಕಾರಿ ಪ್ರಾಣಿಗಳಲ್ಲ. ಆದರೆ ಕೆಲವೊಂದು ಬಾರಿ ಆನೆಗಳಿಗೆ ಮದವೇರಿದರೆ, ಅದು ತನ್ನ ಎದುರಿಗಿರುವ ಯಾವುದೇ ಪ್ರಾಣಿಯನ್ನಾದರೂ ಸಹ ಅಟ್ಟಾಡಿಸಿಕೊಂಡು ಹೋಗುತ್ತದೆ.  ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಯುವಕರ ಗುಂಪೊಂದು ಜೀಪ್ ಅಲ್ಲಿ ಹೋಗುತ್ತಿದ್ದ ವೇಳೆ, ಆನೆಯೊಂದು ಅವರನ್ನು ಅಟ್ಟಾಡಿಸಿಕೊಂಡು ಹೋಗಿದೆ.  ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. 

Viral Video: ಆನೆ ಬಂತೋ.. ಕಾಪಾಡಪ್ಪ ಗಣಪ; ಈ ಹುಡುಗರು ಗೋಳಾಟ ನೋಡಿ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Dec 11, 2023 | 6:33 PM

Share

ಆನೆಗಳು ಶಾಂತ ಪ್ರಾಣಿಗಳು. ಸಾಮಾನ್ಯವಾಗಿ ಅವುಗಳು ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ. ಆದರೆ ಕೆಲವೊಮ್ಮೆ ಅವುಗಳಿಗೆ ಮದವೇರಿದರೆ, ಅದು ಇತರ ಪ್ರಾಣಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಅವುಗಳ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತವೆ. ಇದೇ ರೀತಿ ಮನುಷ್ಯರು ಹಾಗೂ ಪ್ರಾಣಿಗಳನ್ನು ಆನೆಗಳು ಅಟ್ಟಾಡಿಸಿಕೊಂಡು ಹೋಗುವಂತಹ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಜೀಪ್ ಅಲ್ಲಿ ಹಾಯಾಗಿ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಂತಹ ಯುವಕರ ಗುಂಪನ್ನು ಆನೆಯೊಂದು ಅಟ್ಟಾಡಿಸಿಕೊಂಡು ಬಂದಿವೆ.  ಈ ದೃಶ್ಯಕ್ಕೆ ಸೂಕ್ತವೆಂಬಂತೆ ಮನು ಹಂದಾಡಿಯವರ, ʼಹಟ್ಟಿಯಂಗಡಿ ಗಣಪತಿ ಮಧೂರು ಗಣಪತಿ… ಆನೆ ಹೋಯ್ತಾʼ ಎಂದು ಹೇಳುವ ತಮಾಷೆಯ ಡೈಲಾಗ್ ಅನ್ನು ಹಿನ್ನೆಲೆ ಧ್ವನಿಯಾಗಿ ಈ   ವಿಡಿಯೋಗೆ ಸೇರಿಸಲಾಗಿದೆ.  ಈ ದೃಶ್ಯಕ್ಕೆ  ಬ್ಯಾಗ್ರೌಂಡ್ ವಾಯ್ಸ್ ಹೇಳಿ ಮಾಡಿಸಿದಂತಿದೆ,  ಇದು ಸಿಕ್ಕಾಪಟ್ಟೆ ಹಾಸ್ಯಮಯವಾಗಿದೆ ಎಂದು ಹಲವರು ಹೇಳಿದ್ದಾರೆ.

ಈ ವಿಡಿಯೋವನ್ನು  @trollkannada_official  ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಜೀಪ್ ಅಲ್ಲಿ ಹಾಯಾಗಿ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ಯುವಕರ  ಗುಂಪನ್ನು  ದೈತ್ಯ ಆನೆ ಅಟ್ಟಾಡಿಸಿಕೊಂಡು ಹೋಗುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಕಾಡು ದಾರಿಯ  ಮಧ್ಯೆ  ಒಂದಷ್ಟು ಯುವಕರು ಜೀಪ್ ಅಲ್ಲಿ ಹಾಯಾಗಿ ಡ್ರೈವ್ ಮಾಡುತ್ತಾ ಹೋಗುತ್ತಿದ್ದರು. ಆ ವೇಳೆಯಲ್ಲಿ ದೈತ್ಯ ಆನೆಯೊಂದು ಇವರಿಗೆ ಎದುರಾಗುತ್ತದೆ. ಯುವಕರನ್ನು ಕಂಡು ಸಿಟ್ಟಾದ ಆನೆ ಅವರನ್ನು ಅಟ್ಟಾಡಿಸಿಕೊಂಡು ಬರುತ್ತದೆ. ಆನೆ ಮುಂದೆ ಬರುತ್ತಿದ್ದಂತೆ ಜೀಪ್ ಓಡಿಸುತ್ತಿದ್ದ ಚಾಲಕ ರಿವರ್ಸ್ ಡ್ರೈವ್ ಮಾಡುತ್ತಾ ಬರುತ್ತಾನೆ. ಕೊನೆಯಲ್ಲಿ ಆನೆ ಅತ್ತ ಕಡೆ ಹೋಗುತ್ತೆ.  ಈ ಒಂದು ಸಂದರ್ಭಕ್ಕೆ ಸೂಕ್ತವಾಗುವಂತೆ ಮನು ಹಂದಾಡಿಯವರ ʼಹಟ್ಟಿಯಂಗಡಿ ಗಣಪತಿ ಮಧೂರು ಗಣಪತಿ… ಆನೆ ಹೋಯ್ತಾʼ ಎಂದು ಹೇಳುವ ತಮಾಷೆಯ ಡೈಲಾಗ್ ಅನ್ನು ಹಿನ್ನೆಲೆ ಧ್ವನಿಯಾಗಿ ಸೇರಿಸಲಾಗಿದೆ.

ಇದನ್ನೂ ಓದಿ: ಈ ಲೇಸ್ ಪ್ಯಾಕೆಟ್​​ನಲ್ಲಿ ಎರಡೇ ಚಿಪ್ಸ್! ಇದು ಮಹಾಮೋಸ ಎಂದು ತಲೆ ಚಚ್ಚಿಕೊಂಡ ವ್ಯಕ್ತಿ 

ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 127K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಕೊನೆಗೂ ಭಗವಂತ ಕೈ ಹಿಡಿದʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಹುಡುಗರ ಪರಿಸ್ಥಿತಿಯನ್ನು ಕಂಡು ನಗು ತಡೆಯಲಾಗಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:31 pm, Mon, 11 December 23

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್