AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಲೇಸ್ ಪ್ಯಾಕೆಟ್​​ನಲ್ಲಿ ಎರಡೇ ಚಿಪ್ಸ್! ಇದು ಮಹಾಮೋಸ ಎಂದು ತಲೆ ಚಚ್ಚಿಕೊಂಡ ವ್ಯಕ್ತಿ 

ವಿಶೇಷವಾಗಿ ಲೇಸ್ ಕಂಪೆನಿಯ ಚಿಪ್ಸ್ ಪ್ಯಾಕೆಟ್​ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಚಿಪ್ಸ್  ಇರುತ್ತವೆ. 5 ರೂಪಾಯಿ ಲೇಸ್ ಪ್ಯಾಕೆಟ್ ಅಲ್ಲಿ ಹೆಚ್ಚೆಂದರೆ 9 ರಿಂದ 10 ಚಿಪ್ಸ್ ಇರುತ್ತೆ ಅಷ್ಟೆ.  ಆದರೆ ಇಲ್ಲೊಬ್ಬ ವ್ಯಕ್ತಿ ಲೇಸ್ ಖರೀದಿಸಿದ್ದು, ಆತನ ದುರಾದೃಷ್ಟಕ್ಕೋ ಏನೋ ಆತ ಖರೀದಿಸಿದ  ಲೇಸ್ ಪ್ಯಾಕೆಟ್ ಅಲ್ಲಿ ಕೇವಲ 2 ಚಿಪ್ಸ್ ಮಾತ್ರ ಸಿಕ್ಕಿದೆ. ಪುಣ್ಯಕ್ಕೆ ನಿಮಗೆ ಎರಡಾದ್ರೂ ಚಿಪ್ಸ್ ಸಿಕ್ಕಿದೆಯಲ್ವಾ, ತಿಂದು ಖುಷಿಪಡಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  

Viral Video: ಈ ಲೇಸ್ ಪ್ಯಾಕೆಟ್​​ನಲ್ಲಿ ಎರಡೇ ಚಿಪ್ಸ್! ಇದು ಮಹಾಮೋಸ ಎಂದು ತಲೆ ಚಚ್ಚಿಕೊಂಡ ವ್ಯಕ್ತಿ 
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 11, 2023 | 4:19 PM

Share

ಬಹುತೇಕ ಎಲ್ಲಾ ಮಕ್ಕಳಿಗೂ ಲೇಸ್ ಎಂದ್ರೆ ತುಂಬಾನೇ ಇಷ್ಟ, ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡಾ ಲೇಸ್ ಚಿಪ್ಸ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.  5 ರೂಪಾಯಿ ಅಲ್ಲ 50 ರೂಪಾಯಿ  ಲೇಸ್ ಖರೀದಿಸಿದ್ರೂ, ಆ ಚಿಪ್ಸ್ ಪ್ಯಾಕೆಟ್ ಅಲ್ಲಿ ಚಿಪ್ಸ್ಗಿಂತ ಹೆಚ್ಚಾಗಿ ಗಾಳಿಯೇ ತುಂಬಿರುತ್ತದೆ ಎಂದು ಹಲವರು ಹೇಳುವುದುಂಟು.  ಅದು ನಿಜ ಕೂಡಾ ಹೌದು, 5 ರೂಪಾಯಿ ಲೇಸ್ ಪ್ಯಾಕೇಟ್ ಖರೀದಿಸಿದ್ರೆ ಅದರಲ್ಲಿ  ಹೆಚ್ಚೆಂದರೆ 9 ರಿಂದ 10 ಚಿಪ್ಸ್​​​ಗಳು ಮಾತ್ರ ಇರುತ್ತವೆ ಹೊರತು ಅದಕ್ಕಿಂತ ಹೆಚ್ಚು ಚಿಪ್ಸ್ ಇರಲೂ ಸಾಧ್ಯವೇ ಇಲ್ಲ.  ಹೀಗಿದ್ರೂ ಕೂಡಾ ಹೆಚ್ಚಿನವರು ಇದೇ ಲೇಸ್ ಖರೀದಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ 5 ರೂಪಾಯಿ ಲೇಸ್ ಖರೀದಿಸಿದ್ದು,  ಆತನ ದುರಾದೃಷ್ಟಕ್ಕೋ ಏನೋ, ಆತ ಖರೀದಿಸಿದ ಲೇಸ್ ಪ್ಯಾಕೆಟ್ ಅಲ್ಲಿ ಕೇವಲ 2 ಚಿಪ್ಸ್ ಮಾತ್ರ ಸಿಕ್ಕಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾವು ಕೇವಲ ಚಿಪ್ಸ್ ಪ್ಯಾಕೆಟ್ ಅಲ್ಲಿ ಗಾಳಿ ಮಾತ್ರ ತುಂಬಿಸಿರಬಹುದು ಎಂದು ಭಾವಿಸಿದ್ದೆವು, ಪುಣ್ಯಕ್ಕೆ ನಿಮಗೆ ಎರಡು ಚಿಪ್ಸ್ ಆದ್ರೂ ಸಿಕ್ಕಿದೆಯಲ್ವಾ, ಅದಕ್ಕೆ ಖುಷಿ ಪಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ದಿವ್ಯಾಂಶು ಕಶ್ಯಪ್  (@Divyans60201407) ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ʼಬಹಳ ಆಸೆಯಿಂದ 5 ರೂಪಾಯಿಯ ಕ್ಲಾಸಿಕ್ ಸಾಲ್ಟೆಡ್ ಫ್ಲೇವರ್ ಲೇಸ್ ಖರೀದಿಸಿದರೆ, ಅದ್ರಲ್ಲಿ ಕೇವಲ 2 ಚಿಪ್ಸ್ ಮಾತ್ರ ಸಿಕ್ಕಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಬಹಳ ಕಡಿಮೆ ಚಿಪ್ಸ್  ಇದರಲ್ಲಿದೆʼ ಎಂದು ಲೇಸ್ (@Lays_India) ಕಂಪೆನಿಯನ್ನು ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಕ್ಕಳ ಜೊತೆ ಸೇರಿ ಹಗ್ಗಜಗ್ಗಾಟ ಆಡಿದ ಗಜರಾಜ; ಇಲ್ಲಿದೆ ವಿಡಿಯೋ 

ವಿಡಿಯೋದಲ್ಲಿ ಆ ವ್ಯಕ್ತಿ ಕ್ಲಾಸಿಕ್ ಸಾಲ್ಟೆಡ್ ಫ್ಲೇವರ್   ಲೇಸ್ ಪ್ಯಾಕೆಟ್​​​ನ್ನು  ಓಪನ್ ಮಾಡಿ, ಅದರಲ್ಲಿ ಕೇವಲ ಎರಡು ಚಿಪ್ಸ್  ಮಾತ್ರ ಇದೆ ಎಂದು ಹೇಳುತ್ತಾ ತಮ್ಮ ನಿರಾಸೆಯನ್ನು ವ್ಯಕ್ತಪಡಿಸುವುದನ್ನು  ಕಾಣಬಹುದು.

ಡಿಸೆಂಬರ್ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 34.4K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಪುಣ್ಯಕ್ಕೆ  ನಿಮಗೆ ಎರಡಾದರೂ ಚಿಪ್ಸ್ ಸಿಕ್ಕಿದೆ, ನಾನು ಕೇವಲ ಅದರೊಳಗೆ ಗಾಳಿ ಮಾತ್ರ ಇರಬಹುದು ಎಂದು ಭಾವಿಸಿದ್ದೆ. ನೀವು ತುಂಬಾ ಅದೃಷ್ಟವಂತರು ಬಿಡಿʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅವರು ಗ್ರಾಹಕ ಆರೋಗ್ಯದ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದಾರೆ,  ಅದಕ್ಕಾಗಿ ಪ್ಯಾಕೆಟ್ ಒಳಗಡೆ ಕೇವಲ ಎರಡು  ಚಿಪ್ಸ್ ಮಾತ್ರ ಹಾಕಿದ್ದಾರೆʼ ಎಂದು  ತಮಾಷೆ ಮಾಡಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಪವ್ರಾಗಿಲ್ಲ ನಿಮಗೆ ಎರಡಾದ್ರೂ ಚಿಪ್ಸ್ ಸಿಕ್ಕಿದೆಯಲ್ವಾ, ನಾನು ಖರೀದಿಸಿದಾಗ ಚಿಪ್ಸ್ ಪ್ಯಾಕೆಟ್ ಒಳಗೆ ಕೇವಲ ಗಾಳಿ ಬಿಟ್ಟು ಬೇರೇನು ಇರಲಿಲ್ಲ’ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ