AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ನಟ ದುನಿಯಾ ವಿಜಯ್ ಬಗ್ಗೆ ತಮಿಳು ನಟನ ಕೀಳು ಹೇಳಿಕೆ

ದುನಿಯಾ ವಿಜಯ್, ಇದೀಗ ಕನ್ನಡದ ನಟರಷ್ಟೆ ಅಲ್ಲ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಸಹ ದುನಿಯಾ ವಿಜಯ್ ನಟನೆ ಮಾಡಿದ್ದಾರೆ. ಅವರ ಫಿಟ್​​ನೆಸ್​​ ಮತ್ತು ನಟನೆಗೆ ದೊಡ್ಡ ಅಭಿಮಾನಿಗಳಿದ್ದಾರೆ. ಆದರೆ ಇದೀಗ ತಮಿಳು ಚಿತ್ರರಂಗದ ನಟನೊಬ್ಬ, ದುನಿಯಾ ವಿಜಯ್ ಬಗ್ಗೆ ಕೀಳಾಗಿ ಮಾತನಾಡಿ ಅವಮಾನ ಮಾಡಿದ್ದಾರೆ.

ಕನ್ನಡದ ನಟ ದುನಿಯಾ ವಿಜಯ್ ಬಗ್ಗೆ ತಮಿಳು ನಟನ ಕೀಳು ಹೇಳಿಕೆ
Duniya Vijay
ಮಂಜುನಾಥ ಸಿ.
|

Updated on: Nov 12, 2026 | 12:57 PM

Share

ಮುಖ್ಯಾಂಶಗಳು

  • ದುನಿಯಾ ವಿಜಯ್ ಬಗ್ಗೆ ಕೀಳು ಹೇಳಿಕೆ
  • ದುನಿಯಾ ವಿಜಯ್​ ಅನ್ನು ಅವಮಾನಿಸಿದ ನಟ
  • ತಮಿಳಿನ ಹಾಸ್ಯ ನಟ ಬಯಿಲ್ವಾನ್ ರಂಗನಾಥ್

ದುನಿಯಾ ವಿಜಯ್, ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರು. ದಶಕಗಳಿಂದಲೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ದುನಿಯಾ ವಿಜಯ್ ಅವರಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ನಿರ್ದೇಶಕರಾಗಿಯೂ ಸಹ ದುನಿಯಾ ವಿಜಯ್ ಯಶಸ್ವಿ ಆಗಿದ್ದಾರೆ. ವಿಜಯ್, ಇದೀಗ ಕನ್ನಡದ ನಟರಷ್ಟೆ ಅಲ್ಲ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಸಹ ದುನಿಯಾ ವಿಜಯ್ ನಟನೆ ಮಾಡಿದ್ದಾರೆ. ಅವರ ಫಿಟ್​​ನೆಸ್​​ ಮತ್ತು ನಟನೆಗೆ ದೊಡ್ಡ ಅಭಿಮಾನಿಗಳಿದ್ದಾರೆ. ಆದರೆ ಇದೀಗ ತಮಿಳು ಚಿತ್ರರಂಗದ ನಟನೊಬ್ಬ, ದುನಿಯಾ ವಿಜಯ್ ಬಗ್ಗೆ ಕೀಳಾಗಿ ಮಾತನಾಡಿ ಅವಮಾನ ಮಾಡಿದ್ದಾರೆ.

ಇತ್ತೀಚೆಗಷ್ಟೆ ದುನಿಯಾ ವಿಜಯ್ ಅವರು ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಅವರು ರಣಧೀರನ್ ಮತ್ತು ರುದ್ರಾ ಎಂಬ ಎರಡು ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ದುನಿಯಾ ವಿಜಯ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ತಮಿಳಿನ ಹಾಸ್ಯ ನಟನೊಬ್ಬ ದುನಿಯಾ ವಿಜಯ್ ಬಗ್ಗೆ ತೀರ ಕೆಟ್ಟದಾಗಿ ಮಾತನಾಡಿದ್ದಾರೆ.

ಹಾಸ್ಯ ನಟ ಬಯಿಲ್ವಾನ್ ರಂಗನಾಥ್ ಎಂಬಾತ ಯೂಟ್ಯೂಬ್ ಪಾಡ್​​ಕಾಸ್ಟ್ ಒಂದರಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಬಗ್ಗೆ ಮಾತನಾಡುತ್ತಾ, ವಿಜಯ್ ಅವರನ್ನು ಹಂದಿಗೆ ಹೋಲಿಕೆ ಮಾಡಿದ್ದಾರೆ. ಬಯಿಲ್ವಾನ್ ರಂಗನಾಥ್ ಕೆಲ ತಮಿಳು ಸಿನಿಮಾನಲ್ಲಿ ಹಾಸ್ಯ ನಟನಾಗಿ ನಟಿಸಿದ್ದು, ಇತ್ತೀಚೆಗೆ ಯೂಟ್ಯೂಬ್​​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಾರೆ. ಅದರ ಭಾಗವಾಗಿಯೇ ಯೂಟ್ಯೂಬ್ ಪಾಡ್​​ಕಾಸ್ಟ್​​ನಲ್ಲಿ ದುನಿಯಾ ವಿಜಯ್ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ:ಯೂಟ್ಯೂಬರ್ ಬಳಿ ದುನಿಯಾ ವಿಜಯ್ ವಿಶೇಷ ಮನವಿ

‘ಹಂದಿಯನ್ನು ಹೋಲುವ ವ್ಯಕ್ತಿ’ ಎಂದಿರುವ ರಂಗನಾಥ್, ಮತ್ತೆ ಮುಂದುವರೆದು, ‘ನಮ್ಮ ಯೋಗಿಬಾಬು ಗಿಂತಲೂ ಕಡೆಯಾಗಿದ್ದಾನೆ ಆತ’ ಎಂದಿದ್ದಾನೆ. ಈ ವೇಳೆ ಎದುರಿಗೆ ಕೂತಿದ್ದ ಸಂದರ್ಶಕ, ‘ಬಾಡಿ ಶೇಮಿಂಗ್ ಮಾಡಬೇಡಿ’ ಎಂದರೂ ಕೇಳದೆ ತಮ್ಮ ವರಾತ ಮುಂದುವರೆಸಿ ಕೀಳಾಗಿ ಮಾತನಾಡಿದ್ದಾರೆ. ದುನಿಯಾ ವಿಜಯ್ ಬಗ್ಗೆ ಬಯಿಲ್ವಾನ್ ರಂಗನಾಥ್ ಕೀಳು ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಬಯಿಲ್ವಾನ್ ಆಡಿರುವ ಮಾತುಗಳನ್ನು ವಿರೋಧಿಸಿದ್ದು, ಕೆಲವರು ಕ್ಷಮೆಗೆ ಒತ್ತಾಯಿಸಿದ್ದಾರೆ.

ದುನಿಯಾ ವಿಜಯ್ ನಟಿಸಿದ ಮೊದಲ ತಮಿಳು ಸಿನಿಮಾ ‘ಮೂಕುತ್ತಿ ಅಮ್ಮನ್ 2’. ಈ ಸಿನಿಮಾನಲ್ಲಿ ನಯನತಾರಾ, ರೆಜಿನಾ ಕೆಸಾಂಡ್ರಾ, ಖುಷ್ಬು ಇನ್ನೂ ಕೆಲವು ನಟಿಯರಿದ್ದಾರೆ. ಸಿನಿಮಾ ಅನ್ನು ಹಿರಿಯ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕಳೆದ ವಾರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು