Viral Video: ಮಕ್ಕಳ ಜೊತೆ ಸೇರಿ ಹಗ್ಗಜಗ್ಗಾಟ ಆಡಿದ ಗಜರಾಜ; ಇಲ್ಲಿದೆ ವಿಡಿಯೋ

ಹೆಚ್ಚಿನವರಿಗೆ ಹಗ್ಗಜಗ್ಗಾಟ ಆಟವೆಂದರೆ ತುಂಬಾ ಇಷ್ಟ. ಹಗ್ಗಜಗ್ಗಾಟ ಸ್ಪರ್ಧೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಹೀಗೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಜನರು ಭಾಗವಹಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ, ಆದರೆ ನೀವೆಂದಾದರೂ ಮನುಷ್ಯರ ಜೊತೆ ಸೇರಿ ಆನೆ ಕೂಡಾ ಹಗ್ಗಜಗ್ಗಾಟ ಆಟವಾಡುವುದನ್ನು ನೋಡಿದ್ದೀರಾ?  ಹಾಗಿದ್ದರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ.

Viral Video: ಮಕ್ಕಳ ಜೊತೆ ಸೇರಿ ಹಗ್ಗಜಗ್ಗಾಟ ಆಡಿದ ಗಜರಾಜ; ಇಲ್ಲಿದೆ ವಿಡಿಯೋ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 11, 2023 | 3:09 PM

ಆನೆಗಳು ತುಂಬಾ ಮುದ್ದಾದ ಪ್ರಾಣಿ. ಇವುಗಳು ಮನುಷ್ಯರೊಂದಿಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಮನುಷ್ಯರೊಂದಿಗೆ ಸೇರಿ ತಾನು ಕುಣಿಯುವ, ಕ್ರಿಕೆಟ್ ಇತ್ಯಾದಿ ಆಟವಾಡುವ ಆನೆಗಳ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತವೆ. ಅಷ್ಟೇ ಯಾಕೆ ಆನೆಗಳು ಮನುಷ್ಯರನ್ನು ಮಕ್ಕಳಂತೆ ಮುದ್ದಿಸುವ ಹೃದಯಸ್ಪರ್ಷಿ ವಿಡಿಯೋಗಳು ಕೂಡಾ ಆಗಾಗ್ಗೆ ಹರಿದಾಡುತ್ತಿರುತ್ತವೆ. ಆನೆಗಳ ಕುರಿತ ಇಂತಹ ಮುದ್ದಾದ ಮತ್ತು ತಮಾಷೆಯ ವಿಡಿಯೋಗಳು ಕೆಲವೊಮ್ಮೆ ನಮ್ಮ ಒತ್ತಡಗಳನ್ನು ದೂರ ಮಾಡಿ ಮುಖದಲ್ಲಿ ನಗು ತರಿಸುತ್ತದೆ. ಅಂತಹದ್ದೇ ಆನೆಯ ಕುರಿತ ಮುದ್ದಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೈತ್ಯ ಆನೆಯೊಂದು ಮಕ್ಕಳ ಜೊತೆ ಸೇರಿ ತಾನು ಮಗುವಾಗಿ ಹಗ್ಗಜಗ್ಗಾಟ ಆಟವಾಡಿದೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಈ ವೈರಲ್ ವಿಡಿಯೋವನ್ನು ಫೇಸ್ಬುಕ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಮಕ್ಕಳ ಜೊತೆ ಸೇರಿ ದೈತ್ಯ ಆನೆಯೊಂದು  ಹಗ್ಗಜಗ್ಗಾಟವಾಡುವ ಮುದ್ದಾದ ದೃಶ್ಯವನ್ನು ಕಾಣಬಹುದು. ವಿಡಿಯೋದಲ್ಲಿ ಆನೆಗೆ ಹಗ್ಗ ಕಟ್ಟಿ ಒಂದು ಬದಿಯಲ್ಲಿ ನಿಲ್ಲಿಸಲಾಗಿತ್ತು, ಆನೆಯ ಹಿಂದೆ ಆ ಹಗ್ಗವನ್ನು ಹಿಡಿದು  ಮಕ್ಕಳ ಸೈನ್ಯವೇ ನಿಂತಿತ್ತು, ಗಜರಾಜ ಮತ್ತು ಮಕ್ಕಳ ನಡುವೆ ಹಗ್ಗಜಗ್ಗಾಟ ಆಟ ಆರಂಭವಾದಾಗ ಆನೆಯನ್ನು ಆಟದಲ್ಲಿ ಸೋಲಿಸಲೇಬೇಕೆಂದು ಮಕ್ಕಳು ಹಗ್ಗವನ್ನು ಹಿಡಿದು ಜೋರಾಗಿ ಎಳೆಯಲು ಆರಂಭಿಸುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳಿಗೆ ಬೇಜಾರಾಗಬಾರದೆಂದು ಆನೆ ಒಮ್ಮೆ ಹಿಂದಕ್ಕೆ ಮುಂದಕ್ಕೆ ಸರಿಯುತ್ತದೆ. ಹೀಗೆ ಸ್ವಲ್ಪ ಹೊತ್ತು ಆನೆ ಮತ್ತು ಮಕ್ಕಳ ನಡುವೆ ಎಳೆದಾಡ ನಡೆಯುತ್ತೆ.  ಕೊನೆಯಲ್ಲಿ ಆನೆ  ಮಕ್ಕಳನ್ನು ನಿಧಾನಕ್ಕೆ ಎಳೆದುಕೊಂಡು ಹೋಗಿ ಸ್ಪರ್ಧೆಯಲ್ಲಿ ಗೆಲ್ಲುವ ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ರೀತಿ ಹಣೆ ಮೇಲೆ ನೀರು ತುಂಬಿದ ಗ್ಲಾಸ್ ಇಟ್ಟು ಬ್ಯಾಲೆನ್ಸ್ ಮಾಡುತ್ತಾ ನಡೆಯೋಕೇ ನಿಮ್ಮಿಂದ ಸಾಧ್ಯವೇ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಪೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ   2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 82K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ.  ಒಬ್ಬ ಬಳಕೆದಾರರು ʼಇದು ತುಂಬಾ ತಮಾಷೆಯಾಗಿದೆʼ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಆನೆಯ ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:01 pm, Mon, 11 December 23

ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್