Viral Video: ಈ ರೀತಿ ಹಣೆ ಮೇಲೆ ನೀರು ತುಂಬಿದ ಗ್ಲಾಸ್ ಇಟ್ಟು ಬ್ಯಾಲೆನ್ಸ್ ಮಾಡುತ್ತಾ ನಡೆಯೋಕೇ ನಿಮ್ಮಿಂದ ಸಾಧ್ಯವೇ?
ಒಂದು ಲೋಟದಲ್ಲಿ ಸಂಪೂರ್ಣವಾಗಿ ನೀರು ಹಾಕಿ, ಆ ಲೋಟವನ್ನು ಹಣೆಯ ಮೇಲಿಟ್ಟು, ನೀರು ಚೆಲ್ಲದಂತೆ ಹಾಗೂ ಲೋಟ ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ನಡೆಯಲು ನಿಮಗೆ ಸಾಧ್ಯನಾ ಅಂತ ಕೇಳಿದ್ರೆ, ಹೆಚ್ಚಿನವರು ಅದು ತುಂಬಾ ಕಷ್ಟ ಅಂತಾನೇ ಹೇಳ್ತಾರೆ, ಆದ್ರೆ ಇಲ್ಲೊಂದು ಶ್ವಾನ ಮಾತ್ರ, ಅದು ಸಾಧ್ಯವಿದೆ ಅಂತ ಹೇಳಿ ತನ್ನ ಹಣೆಯ ಮೇಲೆ ನೀರು ತುಂಬಿದ ಲೋಟವನ್ನು ಬ್ಯಾಲೆನ್ಸ್ ಮಾಡುತ್ತಾ ಹೊತ್ತುಕೊಂಡು ಹೋಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ನಾಯಿ ಮಾತ್ರ ಸಖತ್ ಟ್ಯಾಲೆಂಟೆಡ್ ಕಣ್ರೀ ಎಂದು ನೆಟ್ಟಿಗರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ನಾಯಿ ನಿಷ್ಠಾವಂತ ಪ್ರಾಣಿ ಮಾತ್ರವಲ್ಲ, ಅವು ಅತ್ಯಂತ ಬುದ್ಧಿವಂತ ಪ್ರಾಣಿಯೂ ಹೌದು. ಇದಕ್ಕೆ ಉದಾಹಣೆಯೆಂಬಂತೆ ಹಲವಾರು ಘಟನೆಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಅಷ್ಟೇ ಯಾಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಈ ಶ್ವಾನಗಳ ನಿಷ್ಠೆ ಮತ್ತು ಬುದ್ಧಿವಂತಿಕೆಯ ಕುರಿತ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದೇ ರೀತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ವಾನವೊಂದು ತನ್ನ ಹಣೆಯ ಮೇಲೆ ನೀರು ತುಂಬಿದ ಲೋಟವನ್ನು ಬ್ಯಾಲೆನ್ಸ್ ಮಾಡುತ್ತಾ ಹೊತ್ತುಕೊಂಡು ಹೋಗಿದೆ. ಅಲ್ಲಾ ಹಣೆಯ ಮೇಲೆ ಲೋಟವಿಟ್ಟು ನಡೆದುಕೊಂಡು ಹೋದ್ರೆ ನೀರು ಚೆಲ್ಲದಿರಲು ಅಥವಾ ಲೋಟ ಕೆಳಗೆ ಬೀಳದಿರಲು ಸಾಧ್ಯನಾ ಅಂತ ನಾವೆಲ್ರೂ ಯೋಚನೆ ಮಾಡ್ತಿದ್ರೆ, ಈ ಶ್ವಾನ ಮಾತ್ರ ನನ್ನಿಂದ ಅಸಾಧ್ಯವೆಂಬ ಮಾತೇ ಇಲ್ಲ ಎನ್ನುತ್ತಾ ನೀರು ಲೋಟವನ್ನು ಹಣೆಯ ಮೇಲೆ ಹೊತ್ತು ನಡೆದುಕೊಂಡು ಹೋಗಿದೆ.
ಈ ವಿಡಿಯೋವನ್ನು @everythingaboutnepal ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, ಶ್ವಾನವೊಂದು ಬ್ಯಾಲೆನ್ಸ್ ಮಾಡುತ್ತಾ, ಹಣೆಯ ಮೇಲೆ ನೀರು ತುಂಬಿದ ಲೋಟವನ್ನು ಹೊತ್ತು ನಡೆಯುವ ದೃಶ್ಯವನ್ನು ಕಾಣಬಹುದು.
View this post on Instagram
ವಿಡಿಯೋದಲ್ಲಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ನೀರು ತುಂಬಿಸಿ, ಅದನ್ನು ಶ್ವಾನದ ಹಣೆಯ ಮೇಲೆ ಇರಿಸಲಾಗಿದೆ. ಈ ಶ್ವಾನ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು, ಯಾವುದೇ ಕಾರಣಕ್ಕೂ ನೀರಿನ ಲೋಟನ್ನು ಕೆಳಗೆ ಹಾಕದೆ ನಿಧಾನಕ್ಕೆ ಒಂದೊಂದು ಹೆಜ್ಜೆಯನ್ನಿಡುತ್ತಾ ಬ್ಯಾಲೆನ್ಸ್ ಮಾಡುತ್ತಾ ಲೋಟವನ್ನು ಹೊತ್ತು ನಡದುಕೊಂಡು ಬರುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: 24 ವರ್ಷದ ಈ ಯುವತಿ ಕಳೆದ 5ವರ್ಷಗಳಿಂದ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದಾಳೆ
ಡಿಸೆಂಬರ್ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 22.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.3 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಇದು ತುಂಬಾ ಕ್ರೇಜಿಯಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಶ್ವಾನ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಎಂದು ಕಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: