Viral News: 24 ವರ್ಷದ ಈ ಯುವತಿ ಕಳೆದ 5ವರ್ಷಗಳಿಂದ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದಾಳೆ
ತನ್ನ 19ನೇ ವಯಸ್ಸಿನಿಂದಲೇ ಯುವತಿಯೊಬ್ಬಳು ಶವಗಳ ಮಧ್ಯೆಯೇ ಕೆಲಸ ಮಾಡುತ್ತಿದ್ದಾಳೆ. ಶವಾಗಾರದಲ್ಲಿ ‘ಎಂಬಾಲ್ಮರ್’ ಆಗಿ ಕೆಲಸ ಮಾಡುತ್ತಿರುವ ಈ ಹೆಣ್ಣಿನ ಧೈರ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜನರು ಸಾಮಾನ್ಯವಾಗಿ ವಿಚಿತ್ರವೆಂದು ಪರಿಗಣಿಸುವ ಕೆಲವು ಕೆಲಸಗಳಿವೆ, ಉದಾಹರಣೆಗೆ ಮೃತ ದೇಹಗಳ ನಡುವೆ ಶವಾಗಾರದಲ್ಲಿ ಎಂಬಾಲ್ಮರ್ ಆಗಿ ಕೆಲಸ ಮಾಡುವುದು. ಇವರನ್ನು ಕಾಸ್ಮೆಟಾಲಜಿಸ್ಟ್ ಎಂದು ಕೂಡ ಕರೆಯುತ್ತಾರೆ. ಅಂದರೆ ಅಂತ್ಯಕ್ರಿಯೆಗೂ ಮುನ್ನ ಶವಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸುವವರು. ಸಾಮಾನ್ಯವಾಗಿ ಶವಾಗಾರದಲ್ಲಿ ಗಂಡಸರು ಕೆಲಸ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ 24ರ ಹರೆಯದ ಯವತಿಯೊಬ್ಬಳು ಕಳೆದ 5ವರ್ಷಗಳಿಂದ ಶವಗಳನ್ನು ಕಾಯುವುದರ ಜೊತೆಗೆ, ಶವ ಸಂಸ್ಕಾರದ ಸಮಯದಲ್ಲಿ ಶವಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ. ಕೇವಲ 24 ವರ್ಷದ ಸುಂದರ ಯುವತಿ ಶವಗಾರದಲ್ಲಿ ಕೆಲಸ ಮಾಡುವುದನ್ನು ಕಂಡು ಸಾಕಷ್ಟು ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದೀಗಾ ಈಕೆಯ ಧೈರ್ಯ ಸಾಹಸದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಯುವತಿಯ ಹೆಸರು ಇಸಾಬೆಲ್ ವಾಲ್ಟನ್ . ಆಕೆಗೆ ಕೇವಲ 24 ವರ್ಷ. ಮಿರರ್‌ನ ವರದಿಯ ಪ್ರಕಾರ, ಇಸಾಬೆಲ್ ಕೇವಲ 19 ನೇ ವಯಸ್ಸಿನಲ್ಲಿ ಶವಸಂಸ್ಕಾರದ ಕೆಲಸ ಮಾಡಲು ಪ್ರಾರಂಭಿಸಿದ್ದು, ಈಗ 5 ವರ್ಷಗಳು ಕಳೆದಿವೆ. ಈಕೆ ತನ್ನ 21 ನೇ ವಯಸ್ಸಿನಲ್ಲಿಯೇ ಶವಗಳನ್ನು ಕಾಯುವಿಕೆಯಿಂದ, ದಹನ ಮಾಡುವ ವರೆಗೆ ಸಂಪೂರ್ಣ ಕೆಲಸವನ್ನು ಕಲಿತುಕೊಂಡಿದ್ದಾಳೆ. ಮೃತದೇಹಗಳನ್ನು ಸಂರಕ್ಷಿಸಿಡುವುದರ ಜೊತೆಗೆ ಅವುಗಳನ್ನು ಸ್ವಚ್ಛಗೊಳಿಸಿ ಅವರ ಕುಟುಂಬದ ಸದಸ್ಯರಿಗೆ ಮೃತದೇಹ ಹಸ್ತಾಂತರಿಸುವ ವರೆಗೆ ತನ್ನ ಕಾರ್ಯವನ್ನು ಧೈರ್ಯದಿಂದ ನಿರ್ವಹಿಸುತ್ತಾಳೆ.
ಇದನ್ನೂ ಓದಿ: ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ, ಏನಿದು ವಿಚಿತ್ರ ಕಾಯಿಲೆ?
ನಾಟಿಂಗ್‌ಹ್ಯಾಮ್ ಸಿಟಿ ಸೆಂಟರ್‌ನಲ್ಲಿ ವಾಸಿಸುವ ಇಸಾಬೆಲ್, ತನ್ನ ಕೆಲಸ ಏನು ಎಂದು ಜನರಿಗೆ ಹೇಳಿದಾಗ ಯಾರು ನಂಬುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಅವರ ಸ್ನೇಹಿತರು ಕೂಡ ಆಶ್ಚರ್ಯಚಕಿತರಾಗಿದ್ದರಂತೆ. ಶವಗಾರದಲ್ಲಿ ಸಾಮಾನ್ಯವಾಗಿ ಗಂಡಸರೇ ಕೆಲಸ ಮಾಡುವುದರಿಂದ ನನ್ನನ್ನು ನೋಡಿದಾಗ ಜನರು ಆಶ್ಚರ್ಯ ಪಡುತ್ತಾರೆ ಎಂದು ಇಸಾಬೆಲ್ ಹೇಳುತ್ತಾಳೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ:
Published On - 3:30 pm, Sat, 9 December 23