ಸ್ವಲ್ಪ ಮಿಸ್ ಆಗಿದ್ರೂ ಈ ವ್ಯಕ್ತಿ ಹುಲಿಗೆ ಆಹಾರ, ಎದೆ ಝಲ್ ಎನಿಸುವ ವಿಡಿಯೋ
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಪ್ರದೇಶದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಅದೇ ರಸ್ತೆಯಲ್ಲಿ ಬೃಹತ್ ಗಾತ್ರದ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ವಲ್ಪ ಮಿಸ್ ಆಗಿದ್ರೂ ಈ ವ್ಯಕ್ತಿ ಹುಲಿಗೆ ಆಹಾರವಾಗುತ್ತಿದ್ದ.
ಕಾಡುಗಳ ವಿನಾಶದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಕಾಡುಗಳಲ್ಲಿರುವ ಪ್ರಾಣಿಗಳೆಲ್ಲವೂ ಆಹಾರವನ್ನು ಅರಸುತ್ತಾ ನಾಡಿನೆಡೆಗೆ ಬರಲಾರಂಭಿಸಿವೆ. ಈ ರೀತಿಯ ಹಲವು ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ರೈತರ ಜಮೀನಿಗೆ ನುಗ್ಗಿದ ಆನೆ, ಮನೆಗೆ ನುಗ್ಗಿ ಸಾಕು ನಾಯಿಯನ್ನು ತಿಂದು ತೇಗಿದ ಹುಲಿ ಹೀಗೆ ಕಾಡು ಪ್ರಾಣಿಗಳ ಕುರಿತ ಹಲವಾರು ಸುದ್ದಿಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೇ ರೀತಿಯ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ಪ್ರಶಾಂತವಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅದೇ ರಸ್ತೆಯಲ್ಲಿ ಹುಲಿಯೊಂದು ರಸ್ತೆ ದಾಟುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ಮಿಸ್ ಆಗಿದ್ರೂ ಆ ವ್ಯಕ್ತಿ ಮಾತ್ರ ಹುಲಿಯ ಬಾಯಿಗೆ ಆಹಾರವಾಗುತ್ತಿದ್ದ ಎಂದು ಹಲವರು ಹೇಳಿದ್ದಾರೆ.
ಈ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾವನದ ಬಳಿ ನಡೆದಿದೆ. ಪ್ರಸ್ತುತ ಉತ್ತರಾಖಂಡದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಇದು ಸಂತಸದ ವಿಷಯವಾದರೂ, ಅಲ್ಲಿನ ಜನಸಾಮಾನ್ಯರಿಗೆ ಸ್ವಲ್ಪ ಅಪಾಯದ ಸಂಕೇತ ಅಂತಾನೇ ಹೇಳಬಹುದು. ಏಕೆಂದರೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ಹುಲಿಗಳ ಓಡಾಟ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಜನಸಾಮಾನ್ಯರ ಮೇಲೆ ಹುಲಿಗಳು ದಾಳಿ ಮಾಡಿರುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಅಂತಹದ್ದೇ ಘಟನೆ ಇದೇ ಸ್ಥಳದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬೃಹದಾಕಾರದ ಹುಲಿಯೊಂದು ಆತನ ಪಕ್ಕದಲ್ಲಿಯೇ ರಸ್ತೆ ದಾಟಿದ್ದು, ಆ ವ್ಯಕ್ತಿ ಕೂದಲೆಳೆಯುವ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಈ ಘಟನೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ತನ್ನ ನೆಚ್ಚಿನ ಹಾಡನ್ನು ಕೇಳಿದಾಗ ಈ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ನೋಡಿ
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
Watch: #Uttarakhand: Man has a close shave during his walk as a tiger jumps past him in Jim Corbett
Video courtesy: @ParveenKaswan on X pic.twitter.com/MdIC2nYZg9
— Deccan Chronicle (@DeccanChronicle) December 8, 2023
ಈ ವಿಡಿಯೋವನ್ನು @DeccanChronicle ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಉತ್ತರಾಖಂಡದ ಜಿಮ್ ಕಾರ್ಬೆಟ್ ಪ್ರದೇಶದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಲೆಂದು ವ್ಯಕ್ತಿಯೊಬ್ಬ ಅಲ್ಲಿನ ರಸ್ತೆಯ ಪಕ್ಕದಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿರುತ್ತಾನೆ, ಆ ವೇಳೆಯನ್ನು ಆ ವ್ಯಕ್ತಿ ಒಮ್ಮೆಲೆ ಬೆಚ್ಚಿ ಬಿದ್ದು, ಹಿಂದೆ ಸರಿದು ಓಡಿ ಬರುತ್ತಾನೆ. ಏಕೆಂದರೆ ಬೃಹದಾಕಾರದ ಹುಲಿಯೊಂದು ಒಂದು ಬದಿಯ ಕಾಡಿನಿಂದ ಇನ್ನೊಂದು ಬದಿಯ ಅರಣ್ಯ ಪ್ರದೇಶಕ್ಕೆ ಹೋಗಲೆಂದು ರಸ್ತೆ ದಾಟಲು ಬರುತ್ತೆ. ಮತ್ತು ಆ ಹುಲಿ ಈ ವ್ಯಕ್ತಿಯ ಮೇಲೆ ಯಾವುದೇ ದಾಳಿಯನ್ನು ಮಾಡದೆ ಥಟ್ಟನೆ ರಸ್ತೆ ದಾಟಿ ಹೋಗಿಬಿಡುತ್ತದೆ. ಈ ದೃಶ್ಯವನ್ನು ಕಂಡ ಇತರರು ಈ ಹುಲಿ ವಾಪಸ್ ಬಂದು ದಾಳಿ ಮಾಡಿದರೆ ತುಂಬಾ ಕಷ್ಟ, ಪ್ರಾಣ ಉಳಿದರೆ ಸಾಕು ಎಂದು ಅಲ್ಲಿಂದ ಓಡಿ ಹೋಗುವ ದೃಶ್ಯಾವಳಿಯನ್ನು ವಿಡಿಯೋದಲ್ಲಿ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: