AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ನೆಚ್ಚಿನ ಹಾಡನ್ನು ಕೇಳಿದಾಗ ಈ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ನೋಡಿ

ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ನೆಚ್ಚಿನ ಹಾಡನ್ನು ಕೇಳಿದ ತಕ್ಷಣ   ನಾವು ಕೂಡಾ  ಆ ಹಾಡಿಗೆ ಧ್ವನಿ ಗೂಡಿಸುತ್ತೇವೆ. ಆದರೆ ನಾಯಿಗೂ ಕೂಡಾ ಒಂದು ನೆಚ್ಚಿನ ಹಾಡು ಇದೆ ಎಂಬ ಸಂಗತಿ ನಿಮಗೆ ಗೊತ್ತಾ? ಹೌದು ಇಲ್ಲೊಂದು ನಾಯಿಗೆ ಕಬೀರ್ ಸಿಂಗ್ ಚಿತ್ರದ ʼದಿಲ್ ಕಾ ದರಿಯಾʼ ಹಾಡು ಎಂದರೆ ಬಲು ಇಷ್ಟವಂತೆ. ಆ ಹಾಡನ್ನು ಕೇಳಿದ ತಕ್ಷಣ ಈ ಮುದ್ದಾದ ಶ್ವಾನವು ತನ್ನದೇ ಭಾಷೆಯಲ್ಲಿ ಆ ಹಾಡಿನ ಜೊತೆಗೆ ಧ್ವನಿಗೂಡಿಸಿದ್ದು,  ಈ ವಿಡಿಯೋ ಇದೀಗ ಎಲ್ಲೆಡ ವೈರಲ್ ಆಗಿದೆ. 

Viral Video: ತನ್ನ ನೆಚ್ಚಿನ ಹಾಡನ್ನು ಕೇಳಿದಾಗ ಈ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ನೋಡಿ
ವೈರಲ್​​ ವಿಡಿಯೋ ಇಲ್ಲಿದೆ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 07, 2023 | 6:16 PM

Share

ಸಾಮಾನ್ಯವಾಗಿ ಮನುಷ್ಯರಾದ ನಮಗೆಲ್ಲರಿಗೂ ನೆಚ್ಚಿನ ತಾಣ, ಆಹಾರ, ಸೇರಿದಂತೆ ನೆಚ್ಚಿನ ಹಾಡು ಕೂಡಾ ಇರುತ್ತದೆ. ಆ ಹಾಡನ್ನು ಕೇಳಿದ ತಕ್ಷಣ ಆ ಹಾಡಿನ ಜೊತೆಗೆ ನಾವು ಕೂಡಾ ಧ್ವನಿಗೂಡಿಸುತ್ತೇವೆ. ಮನುಷ್ಯರಾದ ನಮಗೆ ಇರುವಂತೆ  ಶ್ವಾನ, ಬೆಕ್ಕು ಸೇರಿದಂತೆ ಇತರ ಪ್ರಾಣಿಗಳಿಗೆ  ಹಾಡು, ಸಂಗೀತ ಎಂದರೆ ಇಷ್ಟವಿರಲು ಸಾಧ್ಯವಿಲ್ಲ ಮತ್ತು  ಪ್ರಾಣಿಗಳಿಗೆ ಸಂಗೀತ ಹಾಗೂ  ಹಾಡಿನ ಗಂಧಗಾಳಿ ತಿಳಿಯದು ಎಂದು ನಾವೆಲ್ಲರೂ ಭಾವಿಸುತ್ತೇವೆ.   ಆದರೆ ನಾಯಿಗೂ ಕೂಡಾ ಒಂದು ನೆಚ್ಚಿನ ಹಾಡು ಇದೆ ಎಂದರೆ  ನೀವು ನಂಬುತ್ತೀರಾ? ಖಂಡಿತವಾಗಿಯೂ ನಂಬಲೇಬೇಕು. ಹೌದು ಇಲ್ಲೊಂದು ನಾಯಿಗೆ ಕಬೀರ್ ಸಿಂಗ್ ಚಿತ್ರದ ʼದಿಲ್ ಕ ದರಿಯಾ  ತುಜೆ ಕಿತ್ನಾ ಚಾಹ್ನೆ ಲಗೇʼ ಹಾಡೆಂದರೆ ಬಲು ಇಷ್ಟವಂತೆ.  ಈ ಹಾಡನ್ನು ಕೇಳಿದ ತಕ್ಷಣ ಈ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಈ ವೈರಲ್ ವಿಡಿಯೋದಲ್ಲಿ ನೋಡಿ.

@sachkadwahai ಎಂಬ   ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ʼತನ್ನ ನೆಚ್ಚಿನ ಹಾಡು ದಿಲ್ ಕಾ ದರಿಯಾ ಹಾಡನ್ನು ಕೇಳಿದಾಗ ಶ್ವಾನದ  ಪ್ರತಿಕ್ರಿಯೆ ನೋಡಿʼ ಎಂಬ ಶೀರ್ಷಿಕೆಯನ್ನು ಕೂಡಾ ಬರೆಯಲಾಗಿದೆ. . ವಿಡಿಯೋದಲ್ಲಿ ಸಾಕು ನಾಯಿಯೊಂದು ಟಿವಿಯಲ್ಲಿ ತನ್ನ ನೆಚ್ಚಿನ ಹಾಡು ಪ್ಲೇ ಆದಾಗ ಉತ್ಸಾಹದಿಂದ ಆ ಹಾಡಿಗೆ  ತನ್ನದೇ ಭಾಷೆಯಲ್ಲಿ ಈ ಶ್ವಾನ  ಧ್ವನಿಗೂಡಿಸುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋದಲ್ಲಿ ಬಿಳಿ ಬಣ್ಣದ ನಾಯಿಯೊಂದ ಮನೆಯ ಸೋಫಾದ ಮೇಲೆ ಹಾಯಾಗಿ ಕುಳಿತುಕೊಂಡಿರುತ್ತದೆ. ಮತ್ತು ಮನೆಯವರು ಟಿವಿಯಲ್ಲಿ ಬೇರೆ ಬೇರೆ ಚಿತ್ರಗಳ ಹಾಡುಗಳನ್ನು ಪ್ಲೇ ಮಾಡುತ್ತಿರುತ್ತಾರೆ.  ಈ ಶ್ವಾನ ಆ ಹಾಡುಗಳನ್ನು ಕೇಳಿಸಿಕೊಂಡು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಆದರೆ  ಅರಿಜಿತ್ ಸಿಂಗ್ ಅವರು ಹಾಡಿರುವ ಕಬೀರ್ ಸಿಂಗ್ ಚಿತ್ರದ ʼದಿಲ್ ಕಾ ದರಿಯಾ ತುಜೆ ಕಿತ್ನಾ ಚಾಹ್ನೆ ಲಗೇ ʼಹಾಡು ಪ್ಲೇ ಆಗುತ್ತಿದ್ದಂತೆ, ಈ ಶ್ವಾನ ಖುಷಿಯಿಂದ ಎದ್ದು ಕುಳಿತು, ಅದು ತನ್ನದೇ ಭಾಷೆಯಲ್ಲಿ ಆ ಹಾಡಿಗೆ ಧ್ವನಿ ಸೇರಿಸುವ ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ರೆಸ್ಟೋರೆಂಟ್​​ನಲ್ಲಿ ಕಪಾಳಮೋಕ್ಷ ಸ್ಪೆಷಲ್​​ ಮೆನು

ಈ ಪೋಸ್ಟ್ ಅನ್ನು ಅಕ್ಟೋಬರ್ 07 ರಂದು ಹಂಚಿಕೊಳ್ಳಲಾಗಿದ್ದು 4.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 3 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಅನೇಕ ಈ ವಿಡಿಯೋ ನೋಡಿ ಕಮೆಂಟ್​​ ಮಾಡಿದ್ದಾರೆ. ಕೆಲವರು ʼಈ ನಾಯಿಗೆ ಕಬೀರ್ ಸಿಂಗ್ ಸಿನಿಮಾದಲ್ಲಿ ಹಿರೋಗೆ ಆಗಿರುವಂತೆ ಬ್ರೇಕ್ಅಪ್ ಆಗಿರಬಹುದು ಅದಕ್ಕೆ ಫೀಲಿಂಗ್ ಸಾಂಗ್ ಹಾಡುತ್ತಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಶ್ವಾನದ ಪ್ರತಿಕ್ರಿಯೆ ತುಂಬಾ ಮುದ್ದಾಗಿದೆ ಕಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?