Viral Video: ಈ ಮಹಿಳೆ ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ಕೊರೆದು ತಿನ್ನುತ್ತಾಳೆ

ಪ್ರಪಂಚದಲ್ಲಿ ಅನೇಕ ರೀತಿಯ ಆಹಾರಪ್ರೇಮಿಗಳನ್ನು ನೀವು ನೋಡಿರಬಹುದು, ಆದರೆ ಹಸಿವಾದಾಗಲೆಲ್ಲ ತನ್ನ ಮನೆಯ ಗೋಡೆಯನ್ನು ತಿನ್ನುವ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಅಂತಹ ಮಹಿಳೆಯ ಕಥೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ.

Viral Video: ಈ ಮಹಿಳೆ ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ಕೊರೆದು ತಿನ್ನುತ್ತಾಳೆ
Viral
Follow us
ಅಕ್ಷತಾ ವರ್ಕಾಡಿ
|

Updated on: Dec 08, 2023 | 12:38 PM

ಪ್ರತಿದಿನವೂ ವಿವಿಧ ಬಗೆಯ ಆಹಾರವನ್ನು ಪ್ರಯತ್ನಿಸುವ ಅನೇಕ ಆಹಾರಪ್ರೇಮಿಗಳನ್ನು ನೀವು ನೋಡಿರಬಹುದು. ಆಹಾರಪ್ರೇಮಿಗಳದ್ದೇ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ವಿಚಿತ್ರ ಆಹಾರ ಕ್ರಮದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಈ ಮಹಿಳೆ ತಾನು ಹಸಿವಾದಾಗಲೆಲ್ಲ ತನ್ನ ಮನೆಯ ಗೋಡೆಯನ್ನು ಕೊರೆದು ಕೊರೆದು ತಿನ್ನುತ್ತಾಳೆ. ಇದೀಗಾಗಲೇ ಅವಳ ಮನೆಯ ಅರ್ಧದಷ್ಟು ಗೋಡೆಯನ್ನು ತಿಂದಿದ್ದಾಳೆ. ಈಕೆಯ ಈ ವಿಚಿತ್ರ ಅಭ್ಯಾಸ ತಿಳಿದ ಅಕ್ಕ ಪಕ್ಕದ ಮನೆಯವರು ಆಕೆಯನ್ನು ತಮ್ಮ ಮನೆಯೊಳಗೆ ಬರದಂತೆ ವಿನಂತಿಸಿದ್ದಾರೆ.

ಅಮೆರಿಕದ ಮಿಚಿಗನ್ ನಿವಾಸಿಯಾಗಿರುವ ನಿಕೋಲ್ ಎಂಬಾಕೆಯೇ ಗೋಡೆ ತಿನ್ನುವ ಮಹಿಳೆ. ಈಕೆಗೆ ಯಾವುದೇ ಚೈನೀಸ್ ಅಥವಾ ಇಟಾಲಿಯನ್ ಆಹಾರ ಇಷ್ಟವಿಲ್ಲವಂತೆ. ತಾನು ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ತಿನ್ನುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಇದಲ್ಲದೇ ಹೋದಲ್ಲೆಲ್ಲಾ ತನ್ನ ಮನೆಯ ಗೋಡೆ ಮಾತ್ರವಲ್ಲದೆ ಅವರಿವರ ಮನೆಗಳ ಗೋಡೆಗಳನ್ನೂ ತಿನ್ನುತ್ತಾಳೆ. ಇದರಿಂದಾಗಿ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಆಕೆ ಇನ್ನು ಮುಂದೆ ಮನೆಗೆ ಬರದಂತೆ ವಿನಂತಿಯನ್ನೂ ಮಾಡಿದ್ದಾರೆ.

ಇದನ್ನೂ ಓದಿ: ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ, ಏನಿದು ವಿಚಿತ್ರ ಕಾಯಿಲೆ?

ನಿಕೋಲ್​​​ನ ಈ ಅಭ್ಯಾಸದಿಂದ ಹೊರಬರದಿದ್ದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವೈದ್ಯರು ಆಕೆಗೆ ಎಚ್ಚರಿಸಿದ್ದಾರೆ. ಇದೀಗಾ ಈಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ