Weight Loss Tips: ಮಧ್ಯರಾತ್ರಿ ಹಸಿವು ತಡೆಯಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ರಾತ್ರಿಯಲ್ಲಿ ನಿಮಗೆ ಆಗಾಗ ಹಸಿವಾಗುವುದಕ್ಕೆ ಕಾರಣವೇನು? ಹಗಲಿನಲ್ಲಿ ಸಾಕಷ್ಟು ಪ್ರಮಾಣದ ಆಹಾರ ತಿನ್ನದೇ ಇರುವುದು ಇದಕ್ಕೆ ಕಾರಣವಾಗಿರಬಹುದಾ? ಇದನ್ನು ತಪ್ಪಿಸಲು ಏನು ಮಾಡಬಹುದು? ಪೌಷ್ಟಿಕತಜ್ಞರು ಈ ಬಗ್ಗೆ ಏನನ್ನುತ್ತಾರೆ? ಇಲ್ಲಿದೆ ಮಾಹಿತಿ.

Weight Loss Tips: ಮಧ್ಯರಾತ್ರಿ ಹಸಿವು ತಡೆಯಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2023 | 12:57 PM

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದಾಗಿ ಊಟ, ತಿಂಡಿ, ನಿದ್ರೆ ಎಲ್ಲವನ್ನೂ ಸರಿಯಾಗಿ ಮಾಡದೇ ಇರುವುದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ ಇದರಿಂದ ರಾತ್ರಿ ಸಮಯದಲ್ಲಿ ಹಠಾತ್ ಹಸಿವಾಗುತ್ತದೆ. ಕೆಲವೊಮ್ಮೆ ದೀರ್ಘ ದಿನವನ್ನು ಮುಗಿಸಿದ ಬಳಿಕ ಊಟ ಮಾಡುವಾಗ ಹಸಿವಾಗುವುದಿಲ್ಲ ಬದಲಾಗಿ ಮಧ್ಯರಾತ್ರಿ ಹಸಿವಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ಖಂಡಿತವಾಗಿಯೂ ಇದಕ್ಕೆ ಸಂಬಂಧಿಸಬಲ್ಲರು. ಮಧ್ಯರಾತ್ರಿ ಕಡುಬಯಕೆ ಆಗುವುದು ಹಸಿವಿದ್ದಾಗ ಮಾತ್ರವಲ್ಲ. ಊಟ ಮಾಡಿದ ನಂತರವೂ ಆಗಬಹುದು. ರಾತ್ರಿಯಲ್ಲಿ ಸಾಮಾನ್ಯವಾಗಿ ನಮ್ಮ ಹಸಿವನ್ನು ನೀಗಿಸಲು ಬಿಸ್ಕತ್ತುಗಳು, ನಾಮ್ಕೀನ್, ಚಾಕೊಲೇಟ್ಗಳ ಪ್ಯಾಕ್​​ಗಳು ಅಥವಾ ಐಸ್ಕ್ರೀಮ್​​ಗಳಂತಹ ಏನನ್ನಾದರೂ ತಿನ್ನುತ್ತೇವೆ. ಆದರೆ ಈ ಅನಾರೋಗ್ಯಕರ ಆಹಾರಗಳು ಮಧ್ಯರಾತ್ರಿ ಹಸಿವನ್ನು ನಿಭಾಯಿಸುವ ಏಕೈಕ ಮಾರ್ಗವಲ್ಲ. ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಇನ್ಸ್ಟಾಗ್ರಾಮ್ ಪೋಸ್ಟ್​​ನಲ್ಲಿ ತಡರಾತ್ರಿಯಲ್ಲಿ ನೀವು ಆನಂದಿಸಬಹುದಾದ ಕೆಲವು ಆರೋಗ್ಯಕರ ತಿಂಡಿಗಳನ್ನು ಹಂಚಿಕೊಂಡಿದ್ದಾರೆ.

ಆದರೆ ಮಧ್ಯರಾತ್ರಿಯಲ್ಲಿ ನೀವು ಏನು ತಿನ್ನಬಹುದು ಎಂದು ನಾವು ಚರ್ಚಿಸುವ ಮೊದಲು, ಕಡುಬಯಕೆಗಳು ನಮ್ಮ ನಿದ್ರೆಗೆ ಏಕೆ ಅಡ್ಡಿಪಡಿಸುತ್ತವೆ ಎಂಬುದರ ಬಗ್ಗೆ ತಿಳಿಸಿದ್ದಾರೆ. ಪೌಷ್ಟಿಕ ತಜ್ಞರ ಪ್ರಕಾರ, ರಾತ್ರಿ ತಡವಾಗಿ ಏನನ್ನಾದರೂ ತಿನ್ನುವ ಹಂಬಲವು ಅನೇಕ ಕಾರಣಗಳಿಂದಾಗಿರಬಹುದು. ಇವುಗಳಲ್ಲಿ ಅಸಮತೋಲಿತ ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಅನಿಯಮಿತ ಊಟದ ಮಾದರಿಗಳು ಮತ್ತು ರಾತ್ರಿ ತಿನ್ನುವ ಅಸ್ವಸ್ಥ ಆಹಾರಗಳು ಸೇರಿವೆ. ರಾತ್ರಿಯಲ್ಲಿ ಹಸಿವಿನಿಂದ ಬಳಲುತ್ತಿದ್ದರೆ ಅದು ಹಗಲಿನಲ್ಲಿ ನೀವು ಸಾಕಷ್ಟು ಪ್ರಮಾಣ ಆಹಾರ ತಿನ್ನದೇ ಇರಬಹುದರಿಂದಲೂ ಆಗಬಹುದು ಎಂದು ಅವರು ಹೇಳುತ್ತಾರೆ. ರಾತ್ರಿಯಲ್ಲಿ ಆಹಾರದ ಕಡುಬಯಕೆಯನ್ನು ಪ್ರಚೋದಿಸುವ ಇತರ ಅಂಶಗಳು ಬದಲಾದ ಸಿರ್ಕಾಡಿಯನ್ ಲಯ ಮತ್ತು ಒತ್ತಡ.

ರಾತ್ರಿಯಲ್ಲಿ ಜಂಕ್ ತಿನ್ನುವುದರಿಂದ ಬೆಳಿಗ್ಗೆ ನಿಮಗೆ ಗ್ಯಾಸ್ಟ್ರಿಕ್ ಅನುಭವವಾಗುತ್ತದೆ ಮತ್ತು ನೀವು ಕಿರಿಕಿರಿಯಿಂದ ಎಚ್ಚರಗೊಳ್ಳಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆದ್ದರಿಂದ, ನೀವು ನಿಜವಾಗಿಯೂ ಏನನ್ನಾದರೂ ತಿನ್ನಲು ಬಯಸಿದರೆ ಆರೋಗ್ಯಕರವಾದದನ್ನು ಆರಿಸಿಕೊಳ್ಳುವುದು ಉತ್ತಮ. ಇದರಿಂದ ಆರೋಗ್ಯಕರವಾಗಿ ತೂಕ ಇಳಿಕೆಯೂ ಸಾಧ್ಯವಾಗುತ್ತದೆ.

ಇದನ್ನೂ ಓದಿ: White Jamun Fruit: ಜಂಬು ನೇರಳೆ ಹಣ್ಣು ಈ ಆರೋಗ್ಯ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಗುಣ ಮಾಡುತ್ತೆ

ಹಸಿವಿನ ಯಾತನೆಗಳು ಬಂದಾಗ ನೀವು ತಿನ್ನಬಹುದಾದ ಐದು ತಿಂಡಿಗಳು ಯಾವುದು? ಇಲ್ಲಿದೆ ಮಾಹಿತಿ

-ಹಬೆಯಲ್ಲಿ ಬೇಯಿಸಿದ ತರಕಾರಿ, ಹಮ್ಮಸ್ ಟೋಸ್ಟ್.

-ಕೆಲವು ಆರೋಗ್ಯಕ ಬೀಜಗಳು.

-ಮಖಾನಾ.

-ಹಾಲು.

-ಅಮರಂತ್ ಪಫ್ಸ್ (ಅಂಗಡಿಗಳಲ್ಲಿ ಲಭ್ಯವಿದೆ).

ಪೌಷ್ಟಿಕತಜ್ಞರು ಈ ಆಹಾರಗಳನ್ನು ಸ್ಟಾಕ್ ನಲ್ಲಿ ಇರಿಸಿಕೊಳ್ಳಿ ಮತ್ತು ಅಗತ್ಯವಿದ್ದಾಗ ಅವುಗಳನ್ನು ಬಳಸಿಕೊಳ್ಳಿ ಇವೆಲ್ಲವೂ ಆರೋಗ್ಯಕ್ಕೂ ಒಳ್ಳೆಯದು ಅಲ್ಲದೆ ಇವುಗಳಿಂದ ತೂಕ ಇಳಿಕೆಗೂ ಸಹಾಯವಾಗುತ್ತದೆ ಎಂದು ಸೂಚಿಸುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ