Weight loss tips: ತೂಕ ಇಳಿಸಿಕೊಳ್ಳಲು ಈ ಹಣ್ಣಿನ ಜ್ಯೂಸ್ ಕುಡಿಯಿರಿ? ಇಲ್ಲಿದೆ ತಜ್ಞರ ಸಲಹೆ

ಆರೋಗ್ಯಕರ ಆಹಾರವನ್ನು ಸೇವಿಸುತ್ತಾ ತೂಕ ಕಳೆದುಕೊಳ್ಳಬೇಕೆಂದು ನೀವು ಬಯಸುತ್ತಿದ್ದೀರಾ? ಈ ನಿಮ್ಮ ತೂಕ ಇಳಿಕೆಯ ಪ್ರಯಾಣಕ್ಕೆ ದಾಳಿಂಬೆ ಜ್ಯೂಸ್ ಸಹಾಯಕಾರಿಯಾಗಬಹುದು.

Weight loss tips: ತೂಕ ಇಳಿಸಿಕೊಳ್ಳಲು ಈ ಹಣ್ಣಿನ ಜ್ಯೂಸ್ ಕುಡಿಯಿರಿ? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 25, 2023 | 6:35 PM

ಹೆಚ್ಚಿನ ಜನರ ಗೋಳು ನನ್ನ ದೇಹ ತೂಕ ಕಡಿಮೆ ಮಾಡಬೇಕು, ಬೊಜ್ಜು ಕರಗಿಸಬೇಕು ಎಂಬುದು. ಇಂದಿನ ಅನಾರೋಗ್ಯಕರ ಜೀವನ ಶೈಲಿ, ಅನಾರೋಗ್ಯಕರ ಆಹಾರಪದ್ಧತಿ ಇವೆಲ್ಲವೂ ದೇಹದ ತೂಕ ಹೆಚ್ಚಾಗಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಹೆಚ್ಚುವರಿ ತೂಕವನ್ನು ಕಳೆಯುವ ಸಲುವಾಗಿ ಹೆಚ್ಚಿನವರು ಜಿಮ್ ಹಾಗೂ ವ್ಯಾಯಾಮದ ಮೊರೆ ಹೋಗುತ್ತಾರೆ. ಮತ್ತು ತೂಕ ಕಳೆದುಕೊಳ್ಳಲು ಸಹಕಾರಿಯಾಗುವ ಆಹಾರಗಳ ಹುಡುಕಾಟದಲ್ಲಿರುತ್ತಾರೆ. ನಿಮಗೆ ಗೊತ್ತೆ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಆರೋಗ್ಯಕರ ಆಹಾರವನ್ನು ಸೇವಿಸುತ್ತಾ ತೂಕ ಕಳೆದುಕೊಳ್ಳಬೇಕೆಂದು ನೀವು ಬಯಸುತ್ತಿದ್ದೀರಾ? ಈ ನಿಮ್ಮ ತೂಕ ಇಳಿಕೆಯ ಪ್ರಯಾಣಕ್ಕೆ ದಾಳಿಂಬೆ ಜ್ಯೂಸ್ ಸಹಾಯಕಾರಿಯಾಗಬಹುದು. ಹೌದು ದಾಳಿಂಬೆ ರಸವು ತೂಕ ನಷ್ಟಕ್ಕೆ ಸಹಾಯ ಮಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಾಲಿಫಿನಾಲ್, ನಾರಿನಾಂಶ ಮತ್ತು ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ದಾಳಿಂಬೆ ರಸವು ಆರೋಗ್ಯಕರ ಆಹಾರ ಪದ್ಧತಿಗೆ ಉತ್ತಮ ಸೇರ್ಪಡೆಯಾಗಿದೆ. ಈ ಜ್ಯೂಸ್ ನಿಮ್ಮ ಬಾಯಾರಿಕೆಯನ್ನು ತಣಿಸುವುದರ ಜೊತೆಗೆ ತೂಕನಷ್ಟಕ್ಕೂ ಸಹಕಾರಿಯಾಗಿದೆ. ಆದ್ದರಿಂದ ಜಿಮ್ ಮತ್ತು ವ್ಯಾಯಾಮ ಮಾಡುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸಲು ಮುಂದಾಗಿದ್ದರೆ, ಪ್ರತಿನಿತ್ಯ ದಾಳಿಂಬೆ ರಸವನ್ನು ಸೇವನೆ ಮಾಡಲು ಮರೆಯದಿರಿ.

ಪೌಷ್ಟಿಕತಜ್ಞೆ ಹಾಗೂ ಲೀಡ್ ಹೆಲ್ತ್ ಕೋಚ್ ಪ್ರೀತಿ ತ್ಯಾಗಿ ಅವರು ತೂಕನಷ್ಟಕ್ಕೆ ಸಹಕಾರಿಯಾಗುವ ದಾಳಿಂಬೆ ರಸದ ಅದ್ಭುತ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದಾರೆ.

ನಿಮ್ಮನ್ನು ತೃಪ್ತಪಡಿಸುತ್ತದೆ: ದಾಳಿಂಬೆ ಜ್ಯೂಸ್ ಹೆಚಿನ ಸಕ್ಕರೆ ಮತ್ತು ಹೆಚ್ಚಿನ ವಿಟಮಿನ್ ಅಂಶವಿರುವ ಪಾನೀಯವಾಗಿದ್ದು, ಅದು ನಿಮ್ಮ ಹಸಿವಿನ ಭಾವನೆಯನ್ನು ನೀಗಿಸುವ ಪ್ರವೃತ್ತಿಯನ್ನು ಹೊಂದಿದೆ. ದಾಳಿಂಬೆ ರಸ ಕುಡಿಯುವ ಮೂಲಕ ಹೆಚ್ಚಿನ ಕ್ಯಾಲೋರಿಗಳನ್ನು ಸೇವಿಸದೆಯೇ ಹೊಟ್ಟೆ ತುಂಬುತ್ತದೆ. ದಾಳಿಂಬೆ ಜ್ಯೂಸ್‌ನಲ್ಲಿರುವ ಸಕ್ಕರೆಯು ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಸಂಯೋಜನೆಯಾಗಿರುವುದರಿಂದ, ಇದು ಸುಲಭವಾಗಿ ಜೀರ್ಣವಾಗುತ್ತದೆ. ಮತ್ತು ಇತರ ಆಹಾರಗಳನ್ನು ಮತ್ತು ತಿಂಡಿಗಳನ್ನು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಇದು ಸಹಕಾರಿಯಾಗಿದೆ. ಅದರ ಮೂಲಕ ತೂಕ ನಷ್ಟಕ್ಕೆ ಸಹಾಯಕವಾಗುತ್ತದೆ.

ಬಹಳಷ್ಟು ಫೈಬರ್‌ನ್ನು ಹೊಂದಿದೆ: ಫ್ರೆಶ್ ದಾಳಿಂಬೆ ರಸದಲ್ಲಿ ಇರುವ ಫೈಬರ್ ದೇಹದಲ್ಲಿನ ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಇದು ಕ್ಯಾಲೋರಿಗಳನ್ನು ವೇಗವಾಗಿ ಮತ್ತು ಸುಲಭವಾಗಿ ಸುಡಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ: ಬರಿ ಹಣ್ಣುಗಳಂತೆ ದಾಳಿಂಬೆ ಸಂಪೂರ್ಣವಾಗಿ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಕೂಡಾ ಸಹಕಾರಿಯಾಗಿದೆ.

ಇದನ್ನೂ ಓದಿ: Weight Loss Tips: ಈ 10 ಹಣ್ಣುಗಳನ್ನು ಸೇವಿಸಿ, ಸುಲಭವಾಗಿ ತೂಕ ಇಳಿಸಿಕೊಳ್ಳಿ!

ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ: ಇದು ಕಡಿಮೆ ಕ್ಯಾಲೋರಿ ಪಾನೀಯವಾಗಿದ್ದು, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ. ಇದು ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಒಳಗಿನಿಂದ ಬಲವಾಗಿರಿಸುವಂತೆ ಮಾಡುತ್ತದೆ.

Published On - 6:33 pm, Sat, 25 March 23

ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ