AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mouth Ulcers: ಬಾಯಿ ಹುಣ್ಣು ಸಮಸ್ಯೆಗೆ ಈ ಆಹಾರಗಳು ಕಾರಣ

ಈ ಬಾಯಿ ಹುಣ್ಣು ಎನ್ನುವಂತಹದ್ದು ತುಂಬಾ ನೋವಿನಿಂದ ಕೂಡಿರುತ್ತದೆ. ತಿನ್ನಲು, ಕುಡಿಯಲು ಅಲ್ಲದೆ ಸರಿಯಾಗಿ ಮಾತನಾಡಲು ಕೂಡಾ ಕಷ್ಟಕರವಾಗುವಂತಹ ಪರಿಸ್ಥಿತಿ ಇದರಿಂದ ಉಂಟಾಗುತ್ತದೆ.

Mouth Ulcers: ಬಾಯಿ ಹುಣ್ಣು ಸಮಸ್ಯೆಗೆ ಈ ಆಹಾರಗಳು ಕಾರಣ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 25, 2023 | 3:10 PM

Share

ಹಲವಾರು ಕಾರಣಗಳಿಂದ ಬಾಯಿ ಹುಣ್ಣು (Mouth Ulcers) ಉಂಟಾಗುತ್ತದೆ. ಪ್ರತಿಯೊಬ್ಬರಿಗೂ ಈ ಬಾಯಿ ಹುಣ್ಣು ಆಗಿರುವ ಅನುಭವ ಇದ್ದೇ ಇರುತ್ತದೆ. ಈ ನೋವಿನಿಂದ ಆಹಾರ ತಿನ್ನಲು ಪರದಾಡುವ ಸ್ಥಿತಿ ಉಂಟಾಗುತ್ತದೆ. ಸದ್ಯಕ್ಕೆ ನಿಮಗೆ ಈ ಬಾಯಿ ಹುಣ್ಣಿನ ಸಮಸ್ಯೆ ಇದ್ದರೆ ಕೆಲವೊಂದು ಆಹಾರಗಳನ್ನು ತಿನ್ನದೆ ದೂರವಿರುವ ಮೂಲಕ ಆ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು. ಈ ಬಾಯಿ ಹುಣ್ಣು ಎನ್ನುವಂತಹದ್ದು ತುಂಬಾ ನೋವಿನಿಂದ ಕೂಡಿರುತ್ತದೆ. ತಿನ್ನಲು, ಕುಡಿಯಲು ಅಲ್ಲದೆ ಸರಿಯಾಗಿ ಮಾತನಾಡಲು ಕೂಡಾ ಕಷ್ಟಕರವಾಗುವಂತಹ ಪರಿಸ್ಥಿತಿ ಇದರಿಂದ ಉಂಟಾಗುತ್ತದೆ. ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ಬಾಯಿ ಹುಣ್ಣುಗಳನ್ನು ಉಲ್ಬಣಗೊಳಿಸುವ ಕೆಲವೊಂದು ಆಹಾರಗಳಿವೆ. ಆದಷ್ಟು ಅವುಗಳನ್ನು ಸೇವನೆ ಮಾಡುವುದನ್ನು ಕಡಿತಗೊಳಿಸಬೇಕು.

ನ್ಯೂಟ್ರಿಷನಿಸ್ಟ್ ರೂಪಾಲಿ ದತ್ತಾ ಅವರ ಪ್ರಕಾರ, ನೀವು ಯಾವ ಆಹಾರವನ್ನು ತಿನ್ನಲು ಆರಾಮದಾಯಕವಾಗಿದೆ ಎಂಬುದನ್ನು ಲೆಕ್ಕಚಾರ ಮುಖ್ಯವಾಗಿದೆ. ನಾವು ಅನೇಕ ಬಾರಿ ಬಾಯಿ ನೋವನ್ನು ಉಲ್ಬಣಗೊಳಿಸುವ ಆಹಾರ ಪದಾರ್ಥವನ್ನು ತಿನ್ನುತ್ತೇವೆ. ಆದ್ದರಿಂದ ಬಾಯಿ ಹುಣ್ಣು ಇರುವ ಸಮಯದಲ್ಲಿ ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಬಾಯಿ ಹುಣ್ಣು ಇರುವ ಸಂದರ್ಭದಲ್ಲಿ ತ್ಯಜಿಸಬೇಕಾದ ಆಹಾರಗಳ ಪಟ್ಟಿ

ಮಸಾಲೆಯುಕ್ತ ಆಹಾರಗಳು: ಹೆಚ್ಚಿನ ಪ್ರಮಾಣದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಕೂಡಾ ಬಾಯಿ ಹುಣ್ಣು ಉಂಟಾಗಬಹುದು. ಮತ್ತು ಬಾಯಿ ಹುಣ್ಣು ಇರುವ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಅದು ಕಿರಿಕಿರಿ ಮತ್ತು ಉರಿಯೂತವನ್ನು ಉಂಟುಮಾಡಬಹುದು. ಜೊತೆಗೆ ಹುಣ್ಣನ್ನು ಉಲ್ಬಣಗೊಳಿಸಬಹುದು. ಆದ್ದರಿಂದ ಕೆಂಪು ಮೆಣಸಿನಕಾಯಿ, ಚಟ್ನಿ ಇತರ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವ ಬದಲು ಮೊಸರನ್ನದಂತಹ ದೇಹಕ್ಕೆ ತಂಪನ್ನು ಮಾಡುವ ಆಹಾರವನ್ನು ಸೇವನೆ ಮಾಡುವುದು ಉತ್ತಮ.

ಸಿಟ್ರಸ್ ಹಣ್ಣುಗಳು: ಕಿತ್ತಳೆ, ದ್ರಾಕ್ಷಿ, ನಿಂಬೆ ಇವೆಲ್ಲವೂ ಸಿಟ್ರಸ್ ಹಣ್ಣುಗಳಾಗಿವೆ. ಈ ಹಣ್ಣುಗಳಲ್ಲಿ ಸಿಟ್ರಿಸ್ ಆಮ್ಲ ಇರುವುದರಿಂದ ಇದು ಬಾಯಿ ಹುಣ್ಣನ್ನು ಇನ್ನಷ್ಟು ಉಲ್ಬಣಗೊಳಿಸಲು ಕಾರಣವಾಗುತ್ತದೆ. ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ಕಾರ್ಬೊನೇಟೆಡ್ ಪಾನೀಯಗಳು: ಫಿಜ್ಜಿ, ಕೊಕಕೋಲಾ ಸೋಡಾ ಇತ್ಯಾದಿ ಕಾರ್ಬೊನೇಟೆಡ್ ಪಾನೀಯಗಳು ಆಮ್ಲ ಅಂಶವನ್ನು ಹೊಂದಿದ್ದು, ಅದು ನಿಮ್ಮ ಬಾಯಿಯ ಮೃದು ಅಂಗಾಶವನ್ನು ಕೆಡಿಸಬಹುದು. ಮತ್ತು ಬಾಯಿ ಹುಣ್ಣುಗಳನ್ನು ಇನ್ನಷ್ಟು ಹೆಚ್ಚು ಮಾಡಬಹುದು. ಅಲ್ಲದೆ ಅವುಗಳಲ್ಲಿ ಇರುವ ಹೆಚಿನ ಸಕ್ಕರೆ ಅಂಶವು ಸೋಂಕುಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಈ ಪಾನೀಯಗಳ ಸೇವನೆಯನ್ನು ಕಡಿತಗೊಳಿಸಬೇಕು.

ಇದನ್ನೂ ಓದಿ: Mouth Ulcers issue: ಬಾಯಿಯಲ್ಲಿ ಆಗಾಗ ಹುಣ್ಣಾಗುತ್ತಿದೆಯೇ? ಇಲ್ಲಿದೆ ಪರಿಹಾರ ಗಮನಿಸಿ

ಕೆಫೀನ್ ಪಾನೀಯಗಳು: ಕೆಫೀನ್ ಅಂಶವನ್ನು ಹೊಂದಿರುವ ಪಾನೀಯಗಳಾದ ಟೀ, ಕಾಫಿಯ ಸೇವನೆಯನ್ನು ಬಾಯಿ ಹುಣ್ಣು ಇರುವವರು ಸೇವನೆ ಮಾಡಬಾರದು. ಕಾಫಿಯಲ್ಲಿ ಸ್ಯಾಲಿಸಿಲೇಟ್‌ಗಳು ಹೆಚ್ಚಿರುವುದರಿಂದ ಇದು ನಿಮ್ಮ ಒಸಡು ಮತ್ತು ನಾಲಿಗೆಯನ್ನು ಕೆಡಿಸಬಹುದು. ಆದ್ದರಿಂದ ಕಾಫಿ ಟೀ ಸೇವನೆಯನ್ನು ಮಿತಿಗೊಳಿಸಿ.

ಆಲ್ಕೋಹಾಲ್: ಅತಿಯಾದ ಆಲ್ಕೋಹಾಲ್ ಸೇವನೆಯು ನಮ್ಮ ಬಾಯಿಯನ್ನು ಒಣಗುವಂತೆ ಮಾಡುತ್ತದೆ ಮತ್ತು ನಮ್ಮ ಬಾಯಿಯಲ್ಲಿರುವ ರಕ್ಷನಾತ್ಮಕ ಒಳಪದರವನ್ನು ಹಾನಿಗೊಳಿಸುತ್ತದೆ. ಇದು ಬಾಯಿ ಹುಣ್ಣನ್ನು ಗುಣಪಡಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಆಲ್ಕೋಹಾಲ್ ಸೇವನೆಯನ್ನು ಮಾಡುವುದನ್ನು ನಿಲ್ಲಿಸಿದರೆ ಬಾಯಿ ಹುಣ್ಣನ್ನು ವೇಗವಾಗಿ ಗುಣಪಡಿಸಬಹುದು.

ಅತ್ಯಂತ ಬಿಸಿಯಾದ ಮತ್ತು ತಣ್ಣನೆಯ ಆಹಾರಗಳು: ಈ ಆಹಾರಗಳು ಬಾಯಿ ಹುಣ್ಣಿಗೆ ಸೂಕ್ತವಲ್ಲ. ಏಕೆಂದರೆ ಅವುಗಳು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಸೌಮ್ಯವಾದ ತಾಪಮಾನದಲ್ಲಿರುವ ಆಹಾರವನ್ನು ಸೇವಿಸುವುದು ಉತ್ತಮ. ಐಸ್‌ಕ್ರೀಮ್, ಬಿಸಿಯಾದ ಸೂಪ್ ಇತ್ಯಾದಿ ಆಹಾರಗಳನ್ನು ಬಾಯಿ ಹುಣ್ಣು ಇರುವಂತಹ ಸಂದರ್ಭದಲ್ಲಿ ಸೇವಿಸುವುದನ್ನು ತಪ್ಪಿಸಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ