- Kannada News Photo gallery The Facts on Tampons: How To Use, Better than pads and how to Remove Tampons?Check out the details here
Women Health: ಟ್ಯಾಂಪೂನ್ ಬಳಸುವ ವಿಧಾನ, ಇದು ಸ್ಯಾನಿಟರ್ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ? ಇಲ್ಲಿದೆ ಮಾಹಿತಿ
ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್, Menstrual Cups ಮುಂತಾದಗಳು ಕಂಡುಬರುತ್ತಿದೆ.
Updated on: Mar 25, 2023 | 5:35 PM

ಸ್ಯಾನಿಟರಿ ಪ್ಯಾಡ್‌ನ ಬದಲಿಗೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌ಗಳು ಹೆಚ್ಚಾಗಿ ಸುದ್ದಿಯಲ್ಲಿವೆ. ಆದರೆ ಇದು ಸ್ಯಾನಿಟರ್ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಿ.

ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್, Menstrual Cups ಮುಂತಾದಗಳು ಕಂಡುಬರುತ್ತಿದೆ.

ನೀವು ಕೂಡ ಸ್ಯಾನಿಟರಿ ಪ್ಯಾಡ್ ಬದಲಾಗಿ ಟ್ಯಾಂಪೂನ್ ಬಳಸಲು ಯೋಚಿಸಿದ್ದರೆ, ಟ್ಯಾಂಪೂನ್ ಎಂದರೇನು, ಇದನ್ನು ಬಳಸುವ ಸರಿಯಾದ ಕ್ರಮ ಹಾಗೂ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಿ.

ಟ್ಯಾಂಪೂನ್ ಮುಟ್ಟಿನ ಸಮಯದಲ್ಲಿ ಯೋನಿಯೊಳಗೆ ಸೇರಿಸುವ ಮೂಲಕ ರಕ್ತ ಮತ್ತು ಯೋನಿ ಸ್ರವಿಸುವಿಕೆಯನ್ನು ಹೀರಿಕೊಳ್ಳಲು ವಿನ್ಯಾಸಗೊಳಿಸಲಾದ ಮುಟ್ಟಿನ ಉತ್ಪನ್ನವಾಗಿದೆ. ಪ್ಯಾಡ್‌ಗಿಂತ ಭಿನ್ನವಾಗಿ, ಇದನ್ನು ಯೋನಿ ಕಾಲುವೆಯ ಒಳಗೆ ಆಂತರಿಕವಾಗಿ ಇರಿಸಲಾಗುತ್ತದೆ.

ಬಹುಪಾಲು ಟ್ಯಾಂಪೂನ್‌ಗಳನ್ನು ರೇಯಾನ್‌ನಿಂದ ಅಥವಾ ಸಿಂಥೆಟಿಕ್ ಫೈಬರ್‌ಗಳ ಜೊತೆಗೆ ರೇಯಾನ್ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಕೆಲವು ಟ್ಯಾಂಪೂನ್‌ಗಳನ್ನು ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ.

ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒಳ ಉಡುಪಿಗೆ ಅಂಟಿಸಿ ಬಳಸುತ್ತೀರಿ. ಆದರೆ ಟ್ಯಾಂಪೂನ್‌ನನ್ನು ಜಾಗರೂಕತೆಯಿಂದ ಮುಟ್ಟಿನ ಸಮಯದಲ್ಲಿ ಯೋನಿ ಕಾಲುವೆಯ ಒಳಗೆ ಇರಿಸಲಾಗುತ್ತದೆ. ಇದು ರಕ್ತಸಾವ್ರ ಹೆಚ್ಚಾಗುತ್ತಾ ಹೋದ ಹಾಗೆ ಹಿಗ್ಗುತ್ತಾ ಹೋಗುತ್ತದೆ.

ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ರೀತಿಯಲ್ಲಿಯೇ ಇದನ್ನು 5ರಿಂದ 6 ಗಂಟೆಗಳ ಒಳಗಾಗಿ ಬದಲಾಯಿಸಬೇಕು. ಇಲ್ಲದಿದ್ದರೆ ಇದು ಸೋಂಕಿಗೆ ಕಾರಣವಾಗಬಹುದು.



















