AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಹೀಗೆ ಕಂಡು ಹಿಡಿಯಿರಿ

ಸಾಮಾನ್ಯವಾಗಿ ಕೆಲವರ ಬಳಿ ಮೂರು ನಾಲ್ಕು ಸಿಮ್ ಕಾರ್ಡ್ ಗಳಿರುತ್ತವೆ. ಕೆಲವರು ಇದನ್ನೇ ಬಂಡವಾಳವನ್ನಾಗಿಸಿಕೊಂಡು ಆನ್ಲೈನ್ ವಂಚನೆ ಮಾಡುತ್ತಾರೆ. ಇದೀಗ ದೂರಸಂಪರ್ಕ ಇಲಾಖೆಯ ಭಾರತ ಸರ್ಕಾರದ ಅಧಿಕೃತ ಸಂಚಾರ್ ಸಾಥಿ ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಸಿಮ್ ಕಾರ್ಡ್ ಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಹೀಗೆ ಕಂಡು ಹಿಡಿಯಿರಿ
ಸಿಮ್‌ ಕಾರ್ಡ್‌ Image Credit source: Jobalou/DigitalVision Vectors/Getty Images
ಸಾಯಿನಂದಾ
|

Updated on:Jul 14, 2026 | 3:20 PM

Share

ಮುಖ್ಯಾಂಶಗಳು

  • ಸೈಬರ್ ವಂಚಕರು ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿ ಆನ್‌ಲೈನ್ ವಂಚನೆ ಮಾಡುತ್ತಿದ್ದಾರೆ
  • ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂದು ಸಂಚಾರಿ ಸಾಥಿ ವೆಬ್‌ಸೈಟ್‌ನಲ್ಲಿ ನೋಡಬಹುದು
  • ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಪಡೆಯಲು ಅವಕಾಶವಿದೆ

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ನಕಲಿ ಸಿಮ್ ಕಾರ್ಡ್‌ಗಳನ್ನು (SIM Swap Fraud) ಬಳಸಿ ಆನ್‌ಲೈನ್ ವಂಚನೆ ಮಾಡುತ್ತಿದ್ದಾರೆ. ಇಂತಹ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ನೀವು ಹೆಸರಿನಲ್ಲಿ ಬೇರೆಯವರು ಸಿಮ್‌ ಕಾರ್ಡ್‌ ಪಡೆದಿರುವುದರ ಬಗ್ಗೆ ನಿಮಗೆ ಸಂದೇಹವಿರಬಹುದು. ಹೀಗಾಗಿ ನಿಮ್ಮ  ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂದು ಸುಲಭವಾಗಿ ಪತ್ತೆ ಹಚ್ಚಬಹುದು. ದೂರಸಂಪರ್ಕ ಇಲಾಖೆಯ ಭಾರತ ಸರ್ಕಾರದ ಅಧಿಕೃತ ವೆಬ್ ಸೈಟ್ ಆದ ಸಂಚಾರ್ ಸಾಥಿಗೆ (Sanchar Saathi) ಭೇಟಿ ನೀಡಿದ್ರೆ ಎಲ್ಲಾ ಮಾಹಿತಿಗಳು ನಿಮ್ಮ ಕೈ ಸೇರುತ್ತದೆ.

ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಹೊಂದಬಹುದು?

ಭಾರತದಲ್ಲಿ, ದೂರಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರವಾಗಿ, ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಅಥವಾ ಆಧಾರ್ ಕಾರ್ಡ್‌ನಲ್ಲಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಪಡೆಯಲು ಅವಕಾಶವಿದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪರವಾನಗಿ ಪಡೆದ ಸೇನಾ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿ 6 ಸಿಮ್ ಕಾರ್ಡ್‌ಗಳು ಪಡೆಯಲು ಅವಕಾಶ ನೀಡಲಾಗಿದೆ.

ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳನ್ನು ಪತ್ತೆ ಹಚ್ಚುವುದು ಹೇಗೆ?

ಹಂತ 1: ದೂರಸಂಪರ್ಕ ಇಲಾಖೆಯ ಅಧಿಕೃತ ಸಂಚಾರ್ ಸಾಥಿ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ ಕಾಣುವ ಸಿಟಿಜನ್ ಸೆಂಟ್ರಿಂಕ್ ಸರ್ವಿಸಸ್ ಆಯ್ಕೆಯಲ್ಲಿ ನೋ ಯುವರ್ ಮೊಬೈಲ್ ಕನೆಕ್ಷನ್ಸ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಸ್ಕ್ರೀನ್ ಮೇಲೆ ಕಾಣುವ ಕ್ಯಾಪ್ಚಾ ಕೋಡ್ ನಮೂದಿಸಿ.

ಹಂತ 4: ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಹಾಕಿ ಹಾಕಿ ಲಾಗಿನ್ ಆಗಿ.

ಹಂತ 5: ನಿಮ್ಮ ಆಧಾರ್ ಸಂಖ್ಯೆಯ ಮೂಲಕ ಸಕ್ರಿಯವಾಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಕಾಣಿಸುತ್ತದೆ.

ಹಂತ 6: ಈ ಲಿಸ್ಟ್ ನಲ್ಲಿ ನೀವು ಬಳಸದ ನಂಬರ್‌ಗಳು ಇದ್ದರೆ, ದಿಸ್ ಇಸ್ ನಾಟ್ ಮೈ ನಂಬರ್ ಅಥವಾ ನಾಟ್ ರಿಕ್ವಾಯಿಡ್ ಎಂಬ ಆಯ್ಕೆಗಳನ್ನು ಕ್ಲಿಕ್ ಮಾಡಿ ದೂರನ್ನು ದಾಖಲಿಸಿ.

ಇದನ್ನೂ ಓದಿ: SIM Card: ಸಿಮ್ ಕಾರ್ಡ್ ನಿಮ್ಮ ಹೆಸರಿನಲ್ಲಿ ಇಲ್ಲವೇ, ಹಾಗಾದ್ರೆ ಹೀಗೆ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆಯಬಹುದು?

ಉತ್ತರ: ನಿಮ್ಮ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಪಡೆಯಲು ಅವಕಾಶವಿದೆ. ಕೆಲವು ಪ್ರದೇಶಗಳಲ್ಲಿ 6 ಸಿಮ್ ಕಾರ್ಡ್ ಗಳನ್ನು ಪಡೆಯಬಹುದು.

ಪ್ರಶ್ನೆ: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂದು ಪತ್ತೆ ಹಚ್ಚುವುದು ಹೇಗೆ?

ಉತ್ತರ: ದೂರಸಂಪರ್ಕ ಇಲಾಖೆಯ ಭಾರತ ಸರ್ಕಾರದ ಅಧಿಕೃತ ಸಂಚಾರ್ ಸಾಥಿ ವೆಬ್ ಸೈಟ್ ಗೆ ಭೇಟಿ ಸಿಮ್ ಕಾರ್ಡ್ ಗಳ ಬಗ್ಗೆ ಮಾಹಿತಿ ಪಡೆಯಬಹುದು.

ಪ್ರಶ್ನೆ: ಒಬ್ಬ ವ್ಯಕ್ತಿ ಯಾವ ಪ್ರದೇಶಗಳಲ್ಲಿ ಗರಿಷ್ಠ 6 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುವಂತಿಲ್ಲ?

ಉತ್ತರ: ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪರವಾನಗಿ ಪಡೆದ ಸೇನಾ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿ 6 ಸಿಮ್ ಕಾರ್ಡ್ ಬಳಸಲು ಮಾತ್ರ ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Tue, 14 July 26

Follow Us