
ಇತ್ತೀಚಿನ ದಿನಗಳಲ್ಲಿ ಬೈಕ್ ವೀಲಿಂಗ್ ಹೆಚ್ಚಾಗಿ ಕಂಡುಬರುತ್ತಿದ್ದು, ತಮ್ಮ ಜೀವದ ಆಸೆಯನ್ನು ತೊರೆದು ಇಂತಹ ಕೆಟ್ಟ ಸಾಹಸಕ್ಕೆ ಇಳಿದು ಪ್ರಾಣ ಕಳೆದುಕೊಂಡ ಅದೆಷ್ಟೋ ಪ್ರಕರಣಗಳಿವೆ. ಆದರೆ ಇಲ್ಲೊಬ್ಬ ಒಂದಲ್ಲ, ಇಬ್ಬರು ಹುಡುಗಿಯರನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ವೀಲಿಂಗ್ ಮಾಡಿದ್ದಾನೆ. ಇದಲ್ಲದೇ ಈ ಹುಡುಗಿಯರೂ ಕೂಡ ಯಾವುದೇ ಭಯ ಇಲ್ಲದೇ ವಿಡಿಯೋಗೆ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.
ಈ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ @PotholeWarriors ಬಳಕೆದಾರರು ಹಂಚಿಕೊಂಡಿದ್ದು, ಈ ಟ್ವೀಟ್ಗೆ ಮುಂಬೈನ ಟ್ರಾಫಿಕ್ ಪೊಲೀಸರ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ಮೂರು ಜನರ ವಿರುದ್ಧ ಇದೀಗಾಗಲೇ ಕೇಸು ದಾಖಲಾಗಿದೆ. ಈ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಈ ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279, 336 ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ಎಫ್ಐಆರ್ನಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 114 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ವಿಶ್ವ ದಾಖಲೆ ನಿರ್ಮಿಸಲು ಹಿಮದ ಮೇಲೆ ವಾಸ ಮಾಡುತ್ತಿರುವ ಮಹಿಳೆ
ಮುಂಬೈ ಪೊಲೀಸರು ಮತ್ತೊಂದು ಟ್ವೀಟ್ನಲ್ಲಿ, “ಕೇವಲ ದಂಡ ಮಾತ್ರವಲ್ಲ, ಈ ವೀಡಿಯೊದಲ್ಲಿ ಕಂಡುಬರುವ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ ಮತ್ತು ಅವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಉಲ್ಲೇಖಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:57 pm, Sat, 1 April 23