ಕೇರಳದ ಈ ಪ್ರದೇಶ ಯಾವುದು ಎಂದು ಕಂಡುಹಿಡಿಯುವಿರಾ? ಇದೀಗ ಸಖತ್ ವೈರಲ್​​

|

Updated on: Apr 22, 2023 | 11:47 AM

ಹಚ್ಚ ಹಸಿರಿನ ಸುಂದರವಾದ ತಾಣವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ತಾಣವನ್ನು ಕಣ್ತುಂಬಿಸಿಕೊಂಡಾಗ ದೇವರ ಸೃಷ್ಟಿ ಎಷ್ಟು ಅದ್ಭುತ ಎಂದೆನಿಸುವುದಂತೂ ಖಂಡಿತಾ.

ಕೇರಳದ ಈ ಪ್ರದೇಶ ಯಾವುದು ಎಂದು ಕಂಡುಹಿಡಿಯುವಿರಾ? ಇದೀಗ ಸಖತ್ ವೈರಲ್​​
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌
Image Credit source: Pinterest
Follow us on

ಬಿತ್ತರದಾಗಸ ಹಿನ್ನೆಲೆಯಾಗಿರೆ, ಪರ್ವತದೆತ್ತರ ಸಾಲಾಗೆಸೆದಿರೆ, ಕಿಕ್ಕಿರದಡವಿಗಳಂಚಿನ ನಡುವೆ, ಮೆರೆದಿರೆ ಜಲಸುಂದರಿ ತುಂಗೆ,ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು! ಕುವೆಂಪುರವರ ಸಾಲುಗಳು ಮತ್ತೆ ಮತ್ತೆ ನೆನಪಾಗುವುದೇ ಕೆಲವೊಂದು ಅದ್ಭುತ ತಾಣಗಳನ್ನುಕಣ್ತುಂಬಿಸಿಕೊಂಡಾಗ. ಹೌದು ಇದೀಗಾ ಹಚ್ಚ ಹಸಿರಿನ ಸುಂದರವಾದ ತಾಣವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ತಾಣವನ್ನು ಕಣ್ತುಂಬಿಸಿಕೊಂಡಾಗ ದೇವರ ಸೃಷ್ಟಿ ಎಷ್ಟು ಅದ್ಭುತ ಎಂದೆನಿಸುವುದಂತೂ ಖಂಡಿತಾ.

ಇಲ್ಲಿದೆ ನೋಡಿ ವೈರಲ್​ ವಿಡಿಯೋ: 

ಈ ವಿಡಿಯೋವನ್ನು ಛಾಯಾಗ್ರಾಹಕರಾಗಿರುವ ಅನೀಶ್ ಕೆಕೆ ಅವರು _the_exxplorer_ ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಸ್ಸಂಜೆಯ ಸೂರ್ಯಾಸ್ತವೂ ಕೂಡ ವಿಡಿಯೋದಲ್ಲಿ ಸರೆಯಾಗಿದೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಇದು ಯಾವ ಪ್ರದೇಶ ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. ಇದು ‘ದಕ್ಷಿಣದ ಕಾಶ್ಮೀರ ಎಂದೇ ಕರೆಯಲ್ಪಡುವ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌.

ಇದನ್ನೂ ಓದಿ: ಗೋವಾದಲ್ಲಿ ಏ.21 ರಿಂದ 23ರವರೆಗೆ ನಡೆಯಲಿದೆ ‘ಸ್ಪಿರಿಟ್ ಆಫ್ ಗೋವಾ’ ಉತ್ಸವ

ವೀಡಿಯೋದಲ್ಲಿ , ಬೆಟ್ಟಗಳ ಅದ್ಭುತ ನೋಟವನ್ನು ಕ್ಯಾಮೆರಾ ಪ್ಯಾನ್ ಮಾಡುವಾಗ ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಕಾಣಬಹುದು. ಚಹಾದ ತೋಟದ ಹಚ್ಚ ಹಸುರಿನ ಮಧ್ಯದಲ್ಲಿರುವ ರಸ್ತೆಯಲ್ಲಿ ನೀವೂ ಸಂಚರಿಸುತ್ತಿದ್ದರೆ, ನಿಮ್ಮನ್ನು ಯಾವುದೇ ಸ್ವರ್ಗದಲ್ಲಿರುವಂತೆ ಭಾಸವಾಗುವುದು.ಈ ಸೌಂದರ್ಯವನ್ನು ವ್ಯಾಖ್ಯಾನಿಸಲು ಪದಗಳಿಲ್ಲ. ಇದು ಯಾವ ಸ್ಥಳ ಎಂದು ಊಹಿಸಬಲ್ಲಿರಾ? ” ಎಂದು ಪೋಸ್ಟ್‌ಗೆ ಕ್ಯಾಪ್ಷನ್​​ ಹಾಕಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 11:44 am, Sat, 22 April 23