Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಅಳುತ್ತಿರುವುದಕ್ಕೆ ವಿಮಾನದಲ್ಲಿನ ಪ್ರಯಾಣಿಕ ಸಿಡಿಮಿಡಿ; ಕೋಪಗೊಂಡು ವ್ಯಕ್ತಿ ಮಾಡಿದ್ದೇನು ಗೊತ್ತಾ?

ಅಳುತ್ತಿರುವ ಮಗುವಿನ ಮೇಲೆ ಕೋಪ ಮಾಡಿಕೊಂಡ ನಂತರ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ವಿಮಾನದಿಂದ ಹೊರಕ್ಕೆ ಕರೆದೊಯ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಗು ಅಳುತ್ತಿರುವುದಕ್ಕೆ ವಿಮಾನದಲ್ಲಿನ ಪ್ರಯಾಣಿಕ ಸಿಡಿಮಿಡಿ; ಕೋಪಗೊಂಡು ವ್ಯಕ್ತಿ ಮಾಡಿದ್ದೇನು ಗೊತ್ತಾ?
Follow us
ನಯನಾ ಎಸ್​ಪಿ
|

Updated on:Apr 22, 2023 | 9:36 AM

ಸಣ್ಣ ಮಕ್ಕಳೊಂದಿಗೆ (Kids/babies) ಪ್ರಯಾಣ ಮಾಡುವುದು ಒಂದು ದೊಡ್ಡ ಕಷ್ಟದ ಕೆಲಸ, ಈ ಸತ್ಯವನ್ನು ನಿರಾಕರಿಸಲಾಗುವುದಿಲ್ಲ. ಕೆಲವು ಮಕ್ಕಳು ತಮ್ಮ ನಿಯಮಿತ ಪರಿಸರದಲ್ಲಿ ಕಂಡು ಬರುವ ಹಠಾತ್ ಬದಲಾವಣೆಗಳಿಂದ ಪ್ರಭಾವಿತರಾಗಬಹುದು ಮತ್ತು ಅದರಿಂದಾಗಿ ಉದ್ರೇಕಕ್ಕೆ ಒಳಗಾಗಯುವ ಸಾಧ್ಯತೆಗಳು ಹೆಚ್ಚು. ಫ್ಲೋರಿಡಾ (Florida) ತೆರಳುವ ಸೌತ್‌ವೆಸ್ಟ್ ಏರ್‌ಲೈನ್ಸ್ (Southwest Airlines) ವಿಮಾನದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ವಿಮ್ಮಾನದಲ್ಲಿ ಒಂದು ಮಗು ಅಳಲು ಪ್ರಾರಂಭಿಸಿತು ಇದರಿಂದ ಅಲ್ಲಿದ್ದ ಪ್ರಯಾಣಿಕರೊಬ್ಬರು ಕೋಪಗೊಂಡು ವಿಮಾನದ ಸಿಬ್ಬಂದಿಯ ಮೇಲೆ ಕಿರುಚಾಡಲು ಪ್ರಾರಂಭಿಸಿದರು.

ಈ ವೀಡಿಯೊವನ್ನು ಡೆಲ್ 2000 ಎಂಬ ಟ್ವಿಟ್ಟರ್ ಖಾತೆ ಹಂಚಿಕೊಂಡಿದೆ. ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಕೂಗುವುದನ್ನು ಕೇಳಬಹುದು, ಜೊತೆಗೆ ಮಗು ಅಳುತ್ತಿರುವುದನ್ನು ಸಹ ಕೇಳಬಹುದು.

“ದಯವಿಟ್ಟು ನೀವು ಮಗುವನ್ನು ಶಾಂತಗೊಳಿಸಬಹುದೇ? ನಾನು ಹೆಡ್‌ಫೋನ್‌ಗಳನ್ನು ಹಾಕಿದ್ದೆ. ನಾನು ಮಲಗಿದ್ದೆ” ಎಂದು ಹತಾಶೆಗೊಂಡ ವ್ಯಕ್ತಿ ಅಟೆಂಡೆಂಟ್‌ಗೆ ಹೇಳುವ ವಿಡಿಯೋವನ್ನು ಮಾರ್ಕ್ ಗ್ರಾಬೊವ್ಸ್ಕಿ ಎಂಬ ಪ್ರಯಾಣಿಕರು ರೆಕಾರ್ಡ್ ಮಾಡಿಕೊಂಡಿದ್ದಾರೆ. “ಮಗು ಏಕೆ ಕೂಗುತ್ತಿದೆ? ನಾನು ಕಿರುಚುತ್ತಿಲ್ಲ. ನಾನು ಕಿರುಚಲು ಬಯಸುತ್ತೇನೆ? ನಾನು ಕಿರುಚುತ್ತೇನೆ. ದಯವಿಟ್ಟು ಮಗು ಅಳುತ್ತಿರುವುದನ್ನು ನಿಲ್ಲಿಸಿ. ನಾವು ಟಿನ್ ಕ್ಯಾನ್‌ನಲ್ಲಿ ಎಕೋ ಚೇಂಬರ್‌ನಲ್ಲಿ ಮಗುವಿನೊಂದಿಗೆ ಇದ್ದೇವೆ. ನೀವು ಆ ಧ್ವನಿಯನ್ನು ಕಡಿಮೆ ಮಾಡಬಹುದೇ?” ಎಂದು ಪ್ರಯಾಣಿಕ ವಾದಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕೇಳಬಹುದು.

ಕ್ಯಾಬಿನ್ ಸಿಬ್ಬಂದಿ ಕೋಪಗೊಂಡ ಪ್ರಯಾಣಿಕನನ್ನು ಶತಗೊಳಿಸಲು ಪ್ರಯತ್ನಿಸಿದಾಗ, “ನಾನು ವಿಮಾನದಲ್ಲಿ ಆರಾಮದಾಯಕವಾದ ಪ್ರಯಾಣವನ್ನು ಹೊಂದಲು ಟಿಕೆಟ್‌ಗಾಗಿ ಹಣ ಪಾವತಿಸಿದ್ದೇನೆ. ಆದರೆ ಆ ಮಗು 40 ನಿಮಿಷಗಳಿಂದ ಅಳುತ್ತಿದೆ!” ಎಂದು ಅವರು ಹೇಳಿದರು.

ಕ್ಯಾಬಿನ್ ಸಿಬ್ಬಂದಿಯ ವಿನಂತಿಗಳ ನಂತರವೂ, ವ್ಯಕ್ತಿ ಕೂಗುವುದನ್ನು ನಿಲ್ಲಿಸಲು ನಿರಾಕರಿಸಿದರು. ವ್ಯಕ್ತಿಯ ಪಕ್ಕದಲ್ಲಿದ್ದ ಪ್ರಯಾಣಿಕನು ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಕ್ಲಿಪ್‌ನ ಕೊನೆಯಲ್ಲಿ, ವ್ಯಕ್ತಿ ಒರ್ಲ್ಯಾಂಡೊ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಸಸ್ಯಾಹಾರಿ ವ್ಯಕ್ತಿಗೆ ಮಾಂಸಾಹಾರ ಊಟ ಬಡಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ 1ಕೋಟಿ ಪರಿಹಾರ ಕೇಳಿದ ವ್ಯಕ್ತಿ

“ಮಗು ಅಳುತ್ತಿದ್ದಿದ್ದು ಎಲ್ಲರಿಗು ಕೊಂಚ ಅಸಮಾಧಾನವನ್ನು ತಂದಿದಿತ್ತು, ಆದರೆ ಹವಾಮಾನ ಕಾರಣಗಳಿಂದಾಗಿ ನಮಗ್ಯಾರಿಗೂ ನಿಮ್ಮ ಸೀಟ್ ಬಿಟ್ಟು ಏಳಲು ಅನುಮತಿ ನೀಡಿರಲಿಲ್ಲ. ಆದರೆ ಆ ಒಬ್ಬ ಪ್ರಯಾಣಿಕ ಹಠಾತ್ ಆಗಿ ಮಗು ಬಾಯಿ ಮುಚ್ಚಿ ಎಂದು ಜೋರಾಗಿ ಹೇಳಿದ ನಂತರ, ಸಂದರ್ಭ ಗಂಭೀರ ರೂಪಕ್ಕೆ ತಿರುಗಿತು”, ಎಂದು ಮಾರ್ಕ್ ಗ್ರಾಬೋವ್ಸ್ಕಿ FOX35 ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದರು.

ಮಾರ್ಕ್ ಪ್ರಕಾರ, ಮಹಿಳೆ ಮತ್ತು ಆಕೆಯ ಮಗುವನ್ನು ವಿಮಾನದೊಳಗೆ ಸ್ಥಳಾಂತರಿಸಲಾಯಿತು.

Published On - 9:36 am, Sat, 22 April 23