Viral News: ಸಸ್ಯಾಹಾರಿ ವ್ಯಕ್ತಿಗೆ ಮಾಂಸಾಹಾರ ಊಟ ಬಡಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ 1ಕೋಟಿ ಪರಿಹಾರ ಕೇಳಿದ ವ್ಯಕ್ತಿ
ಆಗ್ರಾದ ವ್ಯಕ್ತಿಯೊಬ್ಬರು ತನಗೆ ಮಾಂಸಾಹಾರ ಊಟವನ್ನು ಬಡಿಸಿದ ಐಷಾರಾಮಿ ಹೋಟೆಲ್ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಹೋಟೆಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಒಂದು ಸಣ್ಣ ಎಡವಟ್ಟಿನಿಂದ ದೊಡ್ಡ ಮಟ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಹೋಟೆಲ್ಗೆ ಊಟ ಮಾಡಲು ಬಂದ ಗ್ರಾಹಕನಿಗೆ ಸರಿಯಾದ ಊಟದ ಆರ್ಡರ್ ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ, ಆ ಗ್ರಾಹಕ ಹೋಟೆಲ್ ವಿರುದ್ಧ 1ಕೋಟಿ ಪರಿಹಾರವನ್ನು ನೀಡಬೇಕೆಂದು ಬೆಡಿಕೆಯಿಟ್ಟದ್ದಾರೆ. ಆಗ್ರಾದ ಈ ವ್ಯಕ್ತಿ ಸಸ್ಯಾಹಾರಿಯಾಗಿದ್ದು, ಅವರಿಗೆ ಮಾಂಸಾಹಾರ ಊಟವನ್ನು ಹೋಟೆಲ್ನಲ್ಲಿ ನೀಡಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಇದರಿಂದ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾದ್ದು ಮಾತ್ರವಲ್ಲದೆ ನನ್ನ ಆರೋಗ್ಯವೂ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಪ್ರತಿಷ್ಠಿತ ಅಂತರಾಷ್ಟ್ರೀಯ ಐಷಾರಾಮಿ ಹೋಟೇಲ್ ಆದ ಈ ಹೋಟೆಲ್, ಆಗ್ರಾದ ವ್ಯಕ್ತಿ ಆರ್ಡರ್ ಮಾಡಿದಂತೆ ಸಸ್ಯಹಾರವನ್ನು ನೀಡುವ ಬದಲಿಗೆ ಮಾಂಸಾಹಾರ ಭಕ್ಷ್ಯವನ್ನು ನೀಡಿದೆ. ಮತ್ತು ಆ ವ್ಯಕ್ತಿ ಅರಿವಿಲ್ಲದೆ ಹೋಟೆಲ್ ನೀಡಿದ ಮಾಂಸಹಾರವನ್ನು ಸೇವಿಸಿ ಆರೋಗ್ಯ ಹದಗೆಟ್ಟು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಅರ್ಪಿತ್ ಗುಪ್ತಾ ಎಂದು ಗುರುತಿಸಲಾದ ಈ ವ್ಯಕ್ತಿ ಈಗ ಹೋಟೆಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಹೋಟೆಲ್ ಆಡಳಿತ ಮಂಡಳಿಗೆ ನೋಟಿಸ್ ನೀಡಿ 1 ಕೋಟಿ ರೂಪಾಯಿ ಹಣವನ್ನು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಏನಾಯಿತು ಎಂಬ ಮಾಹಿತಿ ಇಲ್ಲಿದೆ:
ಅರ್ಪಿತ್ ಗುಪ್ತಾ ಅವರ ವಕೀಲ ನರೋತ್ತಮ್ ಸಿಂಗ್ ಅವರು ಹೇಳುತ್ತಾರೆ. ಅರ್ಪಿತ್ ತಮ್ಮ ಸ್ನೇಹಿತನೊಂದಿಗೆ ಏಪ್ರಿಲ್ 14 ರಂದು ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್ ಗೆ ಹೋಗಿದ್ದರು. ಅಲ್ಲಿ ಅರ್ಪಿತ್ ಸಸ್ಯಾಹಾರಿ ರೋಲ್ ಆರ್ಡರ್ ಮಾಡಿದ್ದರು. ಮತ್ತು ಆಹಾರ ಪದಾರ್ಥವನ್ನು ಅರ್ಪಿತ್ ಸೇವಿಸಿದಾಗ ಅವರಿಗೆ ಆ ರೊಲ್ನ ರುಚಿಯು ತುಂಬಾ ಭಿನ್ನವಾಗಿದೆ ಎಂದು ಅರಿವಿಗೆ ಬರುತ್ತದೆ. ನಂತರ ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರಿಗೆ ಬಡಿಸಿರುವುದು ವೆಜ್ ರೋಲ್ ಬದಲಿಗೆ ಚಿಕನ್ ರೋಲ್ ಎಂಬುವುದು ಗೊತ್ತಾಗಿದೆ. ಸಸ್ಯಾಹಾರಿಯಾಗಿರುವ ಅರ್ಪಿತ್ ಚಿಕಲ್ ಸೇವಿಸಿರುವುದನ್ನು ಅರಿತು ವಾಂತಿ ಮಾಡಲು ಪ್ರಾರಂಭಿಸಿದರು. ಮತ್ತು ಇದರಿಂದ ಅವರ ಆರೋಗ್ಯ ಹದಗೆಟ್ಟು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ:Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!
ಹೋಟೆಲ್ ತನ್ನ ತಪ್ಪನ್ನು ಮರೆಮಾಚುವ ಸಲುವಾಗಿ ಊಟದ ಬಿಲ್ ಕೂಡಾ ನೀಡಿಲ್ಲ ಎಂದು ವಕೀಲ ನರೋತ್ತಮ್ ಸಿಂಗ್ ಹೇಳಿದ್ದಾರೆ. ಹೋಟೆಲ್ ತಾನು ಮಾಡಿದ ತಪ್ಪಿಗೆ ಸರಳವಾಗಿ ಕ್ಷಮೆಯಾಚಿಸಿದರೆ ಸಾಕಾಗುವುದಿಲ್ಲ ಮತ್ತು ಅರ್ಪಿತ್ ಅವರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದಕ್ಕಾಗಿ, ಹೋಟೆಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದರು.
ಮತ್ತೊಂದೆಡೆ, ಹೋಟೆಲ್ ಆಡಳಿತವು ಇದು ತಾನು ಮಾಡಿದ ತಪ್ಪಿಗೆ ಅರ್ಪಿತ್ ಅವರಿಗೆ ಕ್ಷಮೆಯಾಚಿಸಿದೆ. ಕಾನೂನು ತಜ್ಞ ಮತ್ತು ಮಾಜಿ ಜಿಲ್ಲಾ ಸರ್ಕಾರಿ ವಕೀಲ ಅಶೋಕ್ ಗುಪ್ತಾ ಹೇಳುತ್ತಾರೆ, ಈ ರೀತಿಯ ಘಟನೆಗಳು ನಡೆದ ಸಂದರ್ಭಗಳಲ್ಲಿ, ಇದರಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಬಹುದು. ಹಾಗಾಗಿ ಆಹಾರ ಸುರಕ್ಷತಾ ಕಾಯ್ದೆ ಮತ್ತು ಕಲುಷಿತ ಆಹಾರವನ್ನು ಬಡಿಸುವ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು. ಇದು ಈ ತಪ್ಪಿಗಾಗಿ ಮೂರರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: