Viral video: ಸಾಕ್ಷಾತ್ ಯಮನ ಮುಂದೆ ನಡೆದ ಅದೃಷ್ಟದಾಟಕ್ಕೆ ಇವರು ಅಂಬಾಸಿಡರ್! ವಿಡಿಯೋ ನೋಡಿದರೆ ನಿಮ್ಮೆದೆಯೂ ಝಲ್ ಝಲ್!
Luck: ಬ್ರೇಕ್ ಹಾಕದಿದ್ದರೆ ಬೈಕ್ ಸವಾರ ಗ್ಯಾರಂಟಿ ಪ್ರಾಣ ಕಳೆದುಕೊಳ್ಳುತ್ತಿದ್ದ. ಆದರೆ ಅದೃಷ್ಟ ಆತನ ಕೈಹಿಡಿದಿದ್ದರಿಂದ ಕ್ಷಣ ಮಾತ್ರದಲ್ಲಿ ಯಮನ ಹಿಡಿತದಿಂದ ಪಾರಾಗಿದ್ದಾರೆ. ಇದನ್ನೆಲ್ಲಾ ಹಿಂದಿನ ಕಾರಿನಲ್ಲಿದ್ದ ಕ್ಯಾಮೆರಾ ರೆಕಾರ್ಡ್ ಮಾಡಿದೆ.

ಇಂತಹ ವೈರಲ್ ವೀಡಿಯೋವನ್ನು ನೋಡುವ ಮುನ್ನ ನೀವು ನಿಮ್ಮ ಪುಟ್ಟ ಹೃದಯವನ್ನು ಗಟ್ಟಿಮಾಡಿಕೊಳ್ಳಿ. ಅದೃಷ್ಟ ಕೈಕೊಟ್ಟರೆ ಯಾರು ಏನೂ ಮಾಡೋಕ್ಕೆ ಆಗೋಲ್ಲ; ಅದೇ ಅದೃಷ್ಟದ ಘಳಿಗೆ ಚೆನ್ನಾಗಿದ್ದುಬಿಟ್ಟರೆ ಯಾವುದೇ ದೊಡ್ಡ ಅಪಾಯ ಎದುರಿಗೇ ಇದ್ದರೂ ಅದರಿಂದ ಕೂಲ್ ಆಗಿ ಪಾರಾಗಬಹುದು. ದೊಡ್ಡ ಅಪಘಾತದಿಂದ ಪಾರಾದವರು (Death) ಅದೃಷ್ಟದಾಟಕ್ಕೆ (Luck) ಬ್ರಾಂಡ್ ಅಂಬಾಸಿಡರ್ ಎಂದು ಕರೆಯಿಸಿಕೊಳ್ಳುತ್ತಾರೆ. ಇದೆಲ್ಲಾ ಅವರವರ ಹಣೆಯ ಬರಹ, ಇವಾಗ ಯಾಕೆ ಹೇಳ್ತಾ ಇರೋದು ಎಂಬ ಸಣ್ಣ ಅಸಮಾಧಾನ/ ಅನುಮಾನ ನಿಮ್ಮದಾಗಿರಬಹುದು. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋ (Viral Video) ನೋಡಿದ್ರೆ ನೀವು ಮತ್ತೊಮ್ಮೆ ಇದನ್ನು ಓದುವುದು ಗ್ಯಾರಂಟಿ. ಏನದು ವಿಡಿಯೋ? ಅದರಲ್ಲಿ ಏನಿದೆ? ಎಂದು ತಿಳಿಯಬೇಕಾದರೆ ಈ ಸುದ್ದಿಯನ್ನು ಓದಲೇಬೇಕು ನೀವು.
ಹೆದ್ದಾರಿಯಲ್ಲಿ ಒಬ್ಬ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಮಯದಲ್ಲಿ ಅವರ ಕಾರಿನ ಡ್ಯಾಷ್ ಬೋರ್ಡ್ ಕ್ಯಾಮರಾ ಚಾಲನೆಯಲ್ಲಿದ್ದು ರಸ್ತೆಯಲ್ಲಿ ಕಾಣುವ ಅಷ್ಟೂ ದೃಸ್ಯಾವಳಿ ರೆಕಾರ್ಡ್ ಆಗುತ್ತಿತ್ತು. ಕಾರು ವೇಗವಾಗಿ ಚಲಿಸುತ್ತಿರುವಾಗ, ಅದು ಮೊದಲು ದೊಡ್ಡ ಟ್ರಕ್ ಅನ್ನು ದಾಟಿಕೊಂಡು ಮುಂದೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಈ ಮಧ್ಯೆ ಅದೆಲ್ಲಿದ್ದನೋ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬರು ಓವರ್ ಟೇಕ್ ಮಾಡುತ್ತಾ, ಕಾರನ್ನು ಹಿಂದಿಕ್ಕಿ ಮುಂದೆ ಸಾಗುತ್ತಾನೆ. ಸರಿಯಾಗಿ ಅದೇ ವೇಳೆಗೆ ಎಡಭಾಗದಲ್ಲಿ ಸಾಗುತ್ತಿದ್ದ ಭಾರೀ ಗಾತ್ರದ ಟ್ರಕ್ ಆಯತಪ್ಪಿದೆ. ಅಲ್ಲೊಂದು ದೊಡ್ಡ ತಿರುವು ಸಹ ಇತ್ತು.
Thou shall not pass! pic.twitter.com/63yTZSlcv0
— Vicious Videos (@ViciousVideos) April 18, 2023
ಆ ವೇಳೆ ಚಾಲಕನಿಗೆ ಭಾರೀ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಟ್ರಕ್ ಸ್ವಲ್ಪ ತಿರುಗಿದಾಗ, ಟ್ರಕ್ ಕಂಟೇನರ್ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಇಡೀ ಟ್ರಕ್ ದೊಪ್ಪಂತ ಬಲಕ್ಕೆ ಬಿದ್ದಿದೆ. ಕಂಟೈನರ್ ಬೀಳುತ್ತಿದ್ದಂತೆಯೇ ಬೈಕ್ ಸವಾರ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಇಲ್ಲದಿದ್ದರೆ ಆ ಟ್ರಕ್ ಸೀದಾ ಅವನು ಮತ್ತು ಅವನ ಬೈಕ್ ಮೇಲೆ ಉರುಳಿಬೀಳಬೇಕಿತ್ತು. ಹಾಗಾಗಿ ಬ್ರೇಕ್ ಹಾಕಿದ್ದರಿಂದ ಅವರ ಜೀವ ಕ್ಷಣಗಳ ಅಂತದಲ್ಲಿ ಉಳಿದಿದೆ.
ಬ್ರೇಕ್ ಹಾಕದಿದ್ದರೆ ಬೈಕ್ ಸವಾರ ಗ್ಯಾರಂಟಿ ಪ್ರಾಣ ಕಳೆದುಕೊಳ್ಳುತ್ತಿದ್ದ. ಆದರೆ ಅದೃಷ್ಟ ಆತನ ಕೈಹಿಡಿದಿದ್ದರಿಂದ ಕ್ಷಣ ಮಾತ್ರದಲ್ಲಿ ಯಮನ ಹಿಡಿತದಿಂದ ಪಾರಾಗಿದ್ದಾರೆ. ಇದನ್ನೆಲ್ಲಾ ಹಿಂದಿನ ಕಾರಿನಲ್ಲಿದ್ದ ಕ್ಯಾಮೆರಾ ರೆಕಾರ್ಡ್ ಮಾಡಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದು, ಇದೀಗ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಬೈಕ್ ಓಡಿಸುವಾತನ ಅದೃಷ್ಟಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ!
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:




