Viral Video: ಗಾರ್ಡನ್ನಲ್ಲಿ ಮೊಬೈಲ್ ನೋಡುತ್ತಾ ವ್ಯಕ್ತಿ ಮಲಗಿದ್ದಾಗ ಕರಡಿ ಎಂಟ್ರಿ, ಒಮ್ಮೆ ಜೀವವೇ ಬಾಯಿಗೆ ಬಂದಂಗಾಗಿರ್ಬೇಕು
ನೀವು ಮನೆಯ ಹೊರಗೆ ಕುಳಿತಿರುವಾಗ ಒಮ್ಮೆಲೆ ಕರಡಿಯೋ, ಆನೆಯೋ ಬಂದರೆ ಹೇಗಾಗುತ್ತೆ ಹೇಳಿ. ಅಟ್ಯಾಕ್ ಮಾಡೋಕೆ ಸುಪಾರಿ ತೆಗೆದುಕೊಂಡು ಬಂದು ಹೋಯ್ ಅದು ನೀನೇನಾ ಎಂದು ಕೇಳಿದಂಗಿರುತ್ತೆ.
ನೀವು ಮನೆಯ ಹೊರಗೆ ಕುಳಿತಿರುವಾಗ ಒಮ್ಮೆಲೆ ಕರಡಿಯೋ, ಆನೆಯೋ ಬಂದರೆ ಹೇಗಾಗುತ್ತೆ ಹೇಳಿ. ಅಟ್ಯಾಕ್ ಮಾಡೋಕೆ ಸುಪಾರಿ ತೆಗೆದುಕೊಂಡು ಬಂದು ಹೋಯ್ ಅದು ನೀನೇನಾ ಎಂದು ಕೇಳಿದಂಗಿರುತ್ತೆ. ಸಾಕು ಪ್ರಾಣಿಗಳೇ ಬೇರೆ ಕಾಡು ಪ್ರಾಣಿಗಳೇ ಬೇರೆ, ಪ್ರಾಣಿಗಳು ಎಂದರೆ ಎಷ್ಟೇ ಇಷ್ಟವಿದ್ದರೂ ಕಾಡು ಪ್ರಾಣಿಗಳೆಂದರೆ ತುಸು ಭಯ ಹೆಚ್ಚು. ಮನೆಯಲ್ಲಿ ಸಾಮಾನ್ಯವಾಗಿ, ನಾಯಿ, ಬೆಕ್ಕು, ಮೊಲ ಇನ್ನಿತರೆ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ವ್ಯಕ್ತಿಯೊಬ್ಬ ಆರಾಮ ಕುರ್ಚಿಯಲ್ಲಿ ತಮ್ಮ ಗಾರ್ಡನ್ ಅಲ್ಲಿ ಆರಾಮವಾಗಿ ಮಲಗಿರುವಾಗ ಕರಡಿಯೊಂದು ಎಂಟ್ರಿ ಕೊಟ್ಟೇ ಬಿಟ್ಟಿತ್ತು, ಕರಡಿ ಹಾಗೂ ವ್ಯಕ್ತಿ ಒಬ್ಬರನ್ನೊಬ್ಬರು ನೋಡಿದ್ದಾರೆ, ಇಬ್ಬರೂ ಹೆದರಿದ್ದಾರೆ.
Asheville, NC pic.twitter.com/4lRKRnuX54
— Chad Baker (@ChadBlue83) April 14, 2023
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. @ChadBlue83 ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ತನ್ನ ಮನೆಯ ಗಾರ್ಡನ್ನಲ್ಲಿ ಆರಾಮದಾಯಕವಾದ ಕುರ್ಚಿಯ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆ ಕರಡಿ ಅವರ ಪಕ್ಕದಲ್ಲಿ ಬಂದು ನಿಂತಿತ್ತು, ಒಂದು ಸಲ ವ್ಯಕ್ತಿಯನ್ನು ಗಾಬರಿಗೊಳಿಸಿತು, ಆದರೆ, ಸ್ವತಃ ಹೆದರಿದ ಕರಡಿ ವ್ಯಕ್ತಿಯನ್ನು ನೋಡಿ ಭಯದಿಂದ ಓಡಿ ಹೋಯಿತು. ವೈರಲ್ ಆಗಿರುವ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಮತ್ತಷ್ಟು ಓದಿ: Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?
ಗಾಬರಿಯಲ್ಲಿದ್ದ ವ್ಯಕ್ತಿಯನ್ನು ನೋಡಿ ಕರಡಿ ಓಡಿ ಹೋಗಿದ್ದು, ವೈರಲ್ ಆಗಿರುವ ವಿಡಿಯೋ ನೋಡಿದವರೆಲ್ಲ ಅಚ್ಚರಿಗೊಂಡಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಜನವಸತಿ ಪ್ರದೇಶದಲ್ಲಿನ ಯಾರೊಬ್ಬರ ಮನೆಗೆ ಕರಡಿ ಹೇಗೆ ಇದ್ದಕ್ಕಿದ್ದಂತೆ ಪ್ರವೇಶಿಸಿತು. ಮನೆಯ ಹೊರಗೆ ಸ್ವಲ್ಪ ಸಮಯ ಕಳೆಯುವುದೂ ಕಷ್ಟ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ