Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?
ಹಾವಿನಲ್ಲೂ ನೂರಾರು ರೀತಿಯ ಪ್ರಭೇದಗಳಿವೆ. ಆದರೆ ಅತ್ಯಂತ ಕಿರಿಯ ಹಾವು ಎನಿಸಿಕೊಂಡಿರುವ ಈ ಬ್ಲೈಂಡ್ ಸ್ನೇಕ್ ನೋಡಲು ಎರೆಹುಳುವಿನಂತೆ ಕಾಣುತ್ತೆ. ಪ್ರಪಂಚದಾದ್ಯಂತ ಸುಮಾರು 3000 ಜಾತಿಯ ಹಾವುಗಳು ಕಂಡುಬಡುತ್ತವೆ. ಅದರಲ್ಲಿ ಸುಮಾರು 200 ಹಾವುಗಳು ವಿಷಕಾರಿಯಾಗಿವೆ.
ಹಾವಿನಲ್ಲೂ ನೂರಾರು ರೀತಿಯ ಪ್ರಭೇದಗಳಿವೆ. ಆದರೆ ಅತ್ಯಂತ ಕಿರಿಯ ಹಾವು ಎನಿಸಿಕೊಂಡಿರುವ ಈ ಬ್ಲೈಂಡ್ ಸ್ನೇಕ್ ನೋಡಲು ಎರೆಹುಳುವಿನಂತೆ ಕಾಣುತ್ತೆ. ಪ್ರಪಂಚದಾದ್ಯಂತ ಸುಮಾರು 3000 ಜಾತಿಯ ಹಾವುಗಳು ಕಂಡುಬಡುತ್ತವೆ. ಅದರಲ್ಲಿ ಸುಮಾರು 200 ಹಾವುಗಳು ವಿಷಕಾರಿಯಾಗಿವೆ.
ಹಾವು ಎನ್ನುವ ಶಬ್ದ ಕೇಳಿದಾಕ್ಷಣ ಮೈಯಲ್ಲಿರುವ ರೋಮಗಳು ನೆಟ್ಟಗಾಗುತ್ತವೆ. ಒಂದು ರೀತಿಯ ಗಾಬರಿ. ಎಲ್ಲಾ ಹಾವುಗಳು ಕಚ್ಚುವುದಿಲ್ಲ, ಎಲ್ಲಾ ಹಾವುಗಳಲ್ಲಿ ವಿಷ ಇರುವುದೂ ಇಲ್ಲ. ಆದರೂ ಭಯ. ಎರೆಹುಳುವಿನಂತೆ ತೆಳ್ಳಗೆ ಹಾಗೂ ಅತ್ಯಂತ ಕಿರಿಯ ಕಿರಿಯ ಬ್ಲೈಂಡ್ ಸ್ನೇಕ್ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡಲಿದ್ದೇವೆ.
ಇದನ್ನು ಬ್ಲೈಂಡ್ ಸ್ನೇಕ್ ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಇಂಡೋಟೈಫ್ಲಾಪ್ಸ್ ಬ್ರಾಮಿನಿಯನ್ ಎಂದು ಕರೆಯಲಾಗುತ್ತದೆ. ಈ ಹಾವು ಎಲ್ಲಿಯಾದರೂ ಕಾಣಿಸಿದರೆ ಅದನ್ನು ಎರೆಹುಳು ಎಂದೇ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅದರ ಚಲನೆ ಹಾಗೂ ಬಣ್ಣ ಒಂದೇ ಆಗಿರುತ್ತದೆ.
ಮತ್ತಷ್ಟು ಓದಿ: Bugkiss: ಕೀಟಗಳ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ, ಅವುಗಳನ್ನು ಚುಂಬಿಸಲು ಸಾಧನವನ್ನೇ ತಯಾರಿಸಿದ್ರು, ನೋಡಿ ಹೇಗಿದೆ
ಬಹಳ ಹತ್ತಿರದಿಂದ ನೋಡಿದರೆ ಮಾತ್ರ ಎರೆಹುಳುವಿಗಿಂತ ಭಿನ್ನವಾದ ಸಣ್ಣ ಪಟ್ಟೆಗಳು ಕಾಣಿಸುತ್ತವೆ. ಇದರ ಬಾಲವು ಮೊನಚಾದ ಮತ್ತು ತಲೆಯ ಬಳಿ ಎರಡು ಸಣ್ಣ ಚುಕ್ಕೆಗಳಿರುತ್ತವೆ. ಕಣ್ಣು ಇರುವ ಜಾಗವು ಮುಚ್ಚಿರಲಿದ್ದು, ಬಹುತೇಕ ಕುರುಡಾಗಿರುತ್ತವೆ. ಬೆಳಕನ್ನು ಪತ್ತೆ ಮಾಡಲು ಕೂಡ ಸಾಧ್ಯವಿಲ್ಲ.
ಈ ಹಾವು ಎಷ್ಟು ಅಪಾಯಕಾರಿ ಬಹುತೇಕ ಹಾವುಗಳು ವಿಷಪೂರಿತವಾಗಿದ್ದರೂ ಈ ಬ್ಲೈಂಡ್ ಸ್ನೇಕ್ ಅಪಾಯಕಾರಿ ಅಲ್ಲ. ಅವು ಇರುವೆಗಳನ್ನು ತಿಂದು ಬದುಕುತ್ತವೆ. ಈ ಹಾವುಗಳು ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತವೆ. ಒಟ್ಟಿಗೆ 8 ಮೊಟ್ಟೆಗಳನ್ನು ಇಡುತ್ತವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ