Viral Post: ಸ್ನೋ ಗ್ಲೋಬ್ ಒಳಗೆ ನೈಜ ಮನೆಗಳ ಪ್ರತಿಕೃತಿಗಳನ್ನು ರಚಿಸಿದ ಕಲಾವಿದ
ಜೆಸ್ಸಿ ಮೆಕ್ಲಾರೆನ್ ಎಂಬ ಹೆಸರಿನ ಕಲಾವಿದ ಸ್ನೋ ಗ್ಲೋಬ್ ಒಳಗೆ ನೈಜ ಮನೆಗಳ ಪ್ರತಿಕೃತಿ ಹಾಗೂ ಕುದುರೆಗಳ ಪ್ರತಿಕೃತಿಗಳನ್ನು ರಚಿಸಿ, ಆ ಚಿತ್ರಗಳನ್ನು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ನಾವೆಲ್ಲರೂ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತೇವೆ. ಪ್ರತಿನಿತ್ಯ ಸೋಷಿಯಲ್ ಮೀಡಿಯಾ ಆಫ್ಗಳನ್ನು ಸ್ಕ್ರೋಲ್ ಮಾಡುವ ಮೂಲಕ ದಿನದಲ್ಲಿ ನಡೆಯುವ ಹಾಗುಹೋಗುಗಳು, ಹೊಸ ವಿಷಯಗಳ ಬಗ್ಗೆ ತಿಳಿಯುತ್ತಿರುತ್ತೇವೆ. ಅದರಲ್ಲಿ ಏನಾದರೂ ಆಶ್ಚರ್ಯಕರವಾದ ಪೋಸ್ಟ್ ಅಥವಾ ವಿಡಿಯೋ ಇದ್ದರೆ, ಕೆಲವೇ ಕ್ಷಣಗಳಲ್ಲಿ ಅದು ವೈರಲ್ ಆಗಿ ಬಿಡುತ್ತದೆ. ಈ ರೀತಿಯಾಗಿ ವೈರಲ್ ಆಗಿರುವ ಅದೆಷ್ಟೋ ಉದಾಹರಣೆಗಳಿವೆ. ಸೋಶಿಯಲ್ ಮೀಡಿಯಾ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಈ ವೇದಿಕೆಯ ಮೂಲಕ ತಮ್ಮೊಳಗಿನ ಕಲೆಗಳನ್ನು ಪ್ರದರ್ಶಿಸುವ ಅವಕಾಶವನ್ನು ಅದೆಷ್ಟೋ ಜನರು ಪಡೆದುಕೊಂಡಿದ್ದಾರೆ. ಇದೇ ರೀತಿಯಲ್ಲಿ ಜೆಸ್ಸಿ ಮೆಕ್ಲಾರೆನ್ ಎನ್ನುವವರು ತಾವು ಸ್ನೋ ಗ್ಲೋಬ್ ಒಳಗೆ ನೈಜ ಮನೆಗಳ ಪ್ರತಿಕೃತಿಗಳನ್ನು ಮತ್ತು ಕುದುರೆಗಳ ಪ್ರತಿಕೃತಿಗಳನ್ನು ರಚಿಸಿ, ಅದರ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಅದ್ಭುತ ಕಲಾಕೃತಿಯನ್ನು ಕಂಡು ಟ್ವಿಟರ್ ಬಳಕೆದಾದರು ಬೆರಗಾಗಿದ್ದಾರೆ.
ಜನರ ಮನೆಗಳ ಪ್ರತಿಕೃತಿಯನ್ನು ಸ್ನೋ ಗ್ಲೋಬ್ ಒಳಗೆ ರಚಿಸಿ, ಆ ಸ್ನೋ ಗ್ಲೋಬ್ ನ್ನು ಅದೇ ಮನೆಯವರಿಗೆ ಉಡುಗೊರೆಯಾಗಿ ನೀಡುವುದು ನನ್ನ ಅತ್ಯಂತ ಹವ್ಯಾಸವಾಗಿದೆ ಎಂದು ಅವರು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
My most unhinged hobby is making snow globes of people’s homes as and giving it to them as a gift. pic.twitter.com/7ElIUEAkms
— Jesse McLaren (@McJesse) April 16, 2023
ಇದನ್ನೂ ಓದಿ:Viral News: ಮಕ್ಕಳನ್ನು ದುಷ್ಟ ಶಕ್ತಿಯಿಂದ ರಕ್ಷಿಸಲು ಶ್ವಾನಗಳೊಂದಿಗೆ ವಿವಾಹ
ಈ ಪೋಸ್ಟ್ ನ್ನು ಏಪ್ರಿಲ್ 16ರಂದು ಹಂಚಿಕೊಳ್ಳಲಾಗಿದೆ. ಟ್ವೀಟ್ ಮಾಡಿದ ನಂತರ ಈ ಪೋಸ್ಟ್ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮತ್ತು 31.2k ಲೈಕ್ಸ್ ಪಡೆದುಕೊಂಡಿದೆ. ವೈರಲ್ ಆಗಿರುವ ಈ ಪೋಸ್ಟ್ ಗೆ ಟ್ವಿಟರ್ ನಲ್ಲಿ ಹಲವಾರು ಕಮೆಂಟ್ ಗಳು ಹರಿದು ಬಂದಿವೆ. ಒಬ್ಬ ಬಳಕೆದಾದರು ವಾವ್ ಇದು ಬಹಳ ವಿಶೇಷವಾದ ಹವ್ಯಾಸವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾದರು ಬಹಳ ಸುಂದರ ಕಲಾಕೃತಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆಶ್ಚರ್ಯಚಕಿತವಾಗಿದೆ ಎಂದು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Fri, 21 April 23