Viral Video: ಮದುವೆ ಮಂಟಪದಲ್ಲೇ ಜುಟ್ಟು ಹಿಡಿದು ಜಗಳವಾಡಿದ್ರೆ, ಏಳೇಳು ಜನ್ಮಕ್ಕೂ ಇಬ್ಬರೂ ಖುಷಿಯಾಗಿರಿ ಎಂದು ಹೇಗೆ ಆಶೀರ್ವಾದ ಮಾಡೋದಪ್ಪಾ!

ಮದುವೆ ಬಳಿಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವವರೆಗೆ ಸ್ವಲ್ಪ ಕೋಪ, ಮನಸ್ತಾಪ ಎಲ್ಲವೂ ಇರುತ್ತದೆ. ಕ್ರಮೇಣವಾಗಿ ಕಡಿಮೆಯಾಗಬಹುದು.

Viral Video: ಮದುವೆ ಮಂಟಪದಲ್ಲೇ ಜುಟ್ಟು ಹಿಡಿದು ಜಗಳವಾಡಿದ್ರೆ, ಏಳೇಳು ಜನ್ಮಕ್ಕೂ ಇಬ್ಬರೂ ಖುಷಿಯಾಗಿರಿ ಎಂದು ಹೇಗೆ ಆಶೀರ್ವಾದ ಮಾಡೋದಪ್ಪಾ!
ಮದುವೆ
Follow us
ನಯನಾ ರಾಜೀವ್
|

Updated on: Apr 20, 2023 | 2:28 PM

ಮದುವೆ ಬಳಿಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವವರೆಗೆ ಸ್ವಲ್ಪ ಕೋಪ, ಮನಸ್ತಾಪ ಎಲ್ಲವೂ ಇರುತ್ತದೆ. ಕ್ರಮೇಣವಾಗಿ ಕಡಿಮೆಯಾಗಬಹುದು. ಕೆಲವರು ತಾವು ಎಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ಅರ್ಥಮಾಡಿಕೊಂಡು ತಿದ್ದಿಕೊಳ್ಳಲು ಪ್ರಯತ್ನಿಸಬಹುದು. ಇಬ್ಬರೂ ಸೋಲು ಒಪ್ಪಿಕೊಳ್ಳದ ಸ್ಥಿತಿಯಲ್ಲಿದ್ದರೆ ಪರಿಸ್ಥಿತಿ ಯಾವ ಹಂತಕ್ಕೂ ತಲುಪಬಹುದು.

ಆದರೆ ಇಲ್ಲೊಂದು ಮದುವೆಯಲ್ಲಿ ವರ ಒತ್ತಾಯಪೂರ್ವಕವಾಗಿ ಸಿಹಿಯನ್ನು ತಿನ್ನಿಸಿದಕ್ಕೆ ಶುರುವಾದ ಕದನ ಕೊನೆಗೆ ವಧು-ವರರಿಬ್ಬರು ಜುಟ್ಟು ಹಿಡಿದು ಹೊಡೆದಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಬ್ಬರೂ ಕೂಡ ಎಲ್ಲಿಯೂ ತಾವು ಸೋಲನ್ನು ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ, ಮುಖಕ್ಕೆ, ಕೆನ್ನಗೆ ಎಲ್ಲೆಂದರಲ್ಲಿ ಹೊಡೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಓಡಿದ ಒಡಿಯಾ ಮಹಿಳೆ; ವಿಡಿಯೋ ವೈರಲ್​​​​

ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೇವಲ ಮನರಂಜನಾ ಉದ್ದೇಶಕ್ಕಾಗಿ ಮಾಡಿದ ಸ್ಕ್ರಿಪ್ಟ್​ ಕೂಡ ಆಗಿರಬಹುದು ಎಂದು ಹೇಳಲಾಗುತ್ತಿದೆ. ವಿಡಿಯೋವನ್ನು 2 ಲಕ್ಷಕ್ಕಿಂತಲೂ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ವಧುವಿನ ಕತ್ತಲ್ಲಿ ಮಂಗಳಸೂತ್ರವೂ ಇಲ್ಲ ಎಂದು ಕೆಲವರು ಹೇಳಿದ್ದಾರೆ.

ಆದರೆ ಮದುವೆಯ ಸಂದರ್ಭದಲ್ಲಿ ಯಾವುದ್ಯಾವುದೋ ವಿಚಾರಗಳು ಕೋಪ ತರಿಸುತ್ತವೆ, ಕೋಪ ಮಾಡಿಕೊಳ್ಳುವ ಪ್ರಸಂಗಗಳು ಬರುತ್ತವೆ, ಆದರೆ ಸಾರ್ವಜನಿಕವಾಗಿ ಹೀಗೆ ಹೊಡೆದಾಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣಸಿಗುತ್ತವೆ.