Video: ಪಿಂಚಣಿ ಪಡೆಯಲು ಈ ಬಿಸಿಲ ಝಳದಲ್ಲಿ ಮುರಿದ ಕುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವೃದ್ಧೆ

ಕಿತ್ತು ತಿನ್ನುವ ಬಡತನ, ತಿಂಗಳಿಗೆ ಬರುವ ಪಿಂಚಣಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ವೃದ್ಧೆ. ಪಿಂಚಣಿ ಪಡೆಯಲು ಕಿಲೋಮೀಟರ್​ಗಟ್ಟಲೆ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

Video: ಪಿಂಚಣಿ ಪಡೆಯಲು ಈ ಬಿಸಿಲ ಝಳದಲ್ಲಿ ಮುರಿದ ಕುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವೃದ್ಧೆ
ವೃದ್ಧೆImage Credit source: ANI
Follow us
ನಯನಾ ರಾಜೀವ್
|

Updated on: Apr 21, 2023 | 8:38 AM

ಕಿತ್ತು ತಿನ್ನುವ ಬಡತನ, ತಿಂಗಳಿಗೆ ಬರುವ ಪಿಂಚಣಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ವೃದ್ಧೆ. ಪಿಂಚಣಿ ಪಡೆಯಲು ಕಿಲೋಮೀಟರ್​ಗಟ್ಟಲೆ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವೃದ್ಧೆಗೆ 70 ವರ್ಷ, ನಡೆಯಲಾಗದ ಪರಿಸ್ಥಿತಿ ಆದರೆ ಬ್ಯಾಂಕ್​ಗೆ ಹೋಗಿ ಪಿಂಚಣಿ ಪಡೆಯುವುದು ಅನಿವಾರ್ಯ. ಮುರಿದಿರುವ ಖುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಡಿಶಾದ ನಬ್ರಂಗ್​ಪುರ್ ಜಿಲ್ಲೆಯಲ್ಲಿ ಏಪ್ರಿಲ್ 17 ರಂದು ಕಂಡುಬಂದಂತಹ ದೃಶ್ಯವಿದು.

ವೃದ್ಧೆ ಹೆಸರು ಸೂರ್ಯ ಹರಿಜನ್, ಅವರು ವಲಸೆ ಕಾರ್ಮಿಕರಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಇಷ್ಟು ವರ್ಷ ಕೆಲಸ ಮಾಡುತ್ತಿದ್ದರು. ಅವರು ತನ್ನ ಕಿರಿ ಮಗನ ಜತೆ ವಾಸವಾಗಿದ್ದಾರೆ, ಅವರು ಸ್ವಂತ ಜಮೀನು, ಮನೆ ಯಾವುದೂ ಇಲ್ಲ, ಗುಡಿಸಿಲಿನಲ್ಲಿಯೇ ಅವರ ವಾಸ.

ಮತ್ತಷ್ಟು ಓದಿ: ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಓಡಿದ ಒಡಿಯಾ ಮಹಿಳೆ; ವಿಡಿಯೋ ವೈರಲ್​​​​

ಬ್ಯಾಂಕ್​ಗೆ ತೆರಳಿದ್ದರೂ ಅವರ ಹೆಬ್ಬೆಟ್ಟು ಮ್ಯಾಚ್ ಆಗದ ಕಾರಣ ಮನೆಗೆ ವಾಪಸ್ ಕಳುಹಿಸಿದ್ದಾರೆ. ಅವರು ಕೈ ಬೆರಳು ಸರಿ ಇಲ್ಲದ ಕಾರಣ ಹಣ ಪಡೆಯಲು ತೊಂದರೆ ಅನುಭವಿಸಬೇಕಾಯಿತು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.

ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಬರುತ್ತದೆ. ನಾವು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಎಸ್​ಬಿಐ ಮ್ಯಾನೇಜರ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ