PMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ

LIC Pension Policy: ಪಿಎಂ ವಿವಿವೈ ಸ್ಕೀಮ್ 10 ವರ್ಷದವರೆಗೂ ಇದ್ದು, ಮಾಸಿಕ ಅಥವಾ ತ್ರೈಮಾಸಿಕ ಅಥವಾ ವಾರ್ಷಿಕ ಅಥವಾ ಅರ್ಧವಾರ್ಷಿಕವಾಗಿ ಪಿಂಚಣಿ ಪಡೆಯಬಹುದು. ಪಾಲಿಸಿ ಅಂತ್ಯದಲ್ಲಿ ಸ್ಕೀಮ್​ಗೆ ನೀವು ಕಟ್ಟಿದ ಹಣ ವಾಪಸ್ ಬರುತ್ತದೆ.

PMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ
ಹಿರಿಯ ನಾಗರಿಕರಿಗೆ ಪಿಂಚಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Mar 15, 2023 | 5:19 PM

ಭಾರತೀಯ ಜೀವ ವಿಮಾ ನಿಗಮ ಎಲ್​ಐಸಿಯಲ್ಲಿ (LIC) ವಿವಿಧ ರೀತಿಯಲ್ಲಿ ವಿವಿಧ ಜನರ ಅಗತ್ಯಗಳಿಗೆ ತಕ್ಕಂತಹ ಪಾಲಿಸಿಗಳಿವೆ. ಹಿರಿಯ ನಾಗರಿಕರಿಗೆಂದು (Senior Citizens) ಸರ್ಕಾರದಿಂದಲೇ ಕೆಲವಾರು ಮುಖ್ಯ ಯೋಜನೆಗಳಿವೆ. ಎಲ್​ಐಸಿಯಲ್ಲೂ ವೃದ್ಧರಿಗೆಂದು ಅಥವಾ ವೃದ್ಧಾಪ್ಯದ ಜೀವನಭದ್ರತೆಗೆಂದು ಸ್ಕೀಮುಗಳಿವೆ. ಅಂಥ ಪಾಲಿಸಿಗಳಲ್ಲಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ (PM VVY) ಪ್ರಮುಖವಾದದು. 2017ರಲ್ಲಿ ಎಲ್​ಐಸಿ ಆರಂಭಿಸಿದ ಈ ಸ್ಕೀಮ್​ನಲ್ಲಿ ಭರವಸೆ ಕೊಡಲಾಗಿರುವ ಪಿಂಚಣಿ ಹಣಕ್ಕೆ ಸರ್ಕಾರದ ಖಾತ್ರಿ ಇದೆ. ಹೀಗಾಗಿ, ಯಾವುದೇ ನಾಗರಿಕರು ತಮ್ಮ ಹಣ ಕಳೆದುಕೊಳ್ಳುವ ಚಿಂತೆ ಇಲ್ಲದೇ ಈ ಪಾಲಿಸಿಯಲ್ಲಿ ತೊಡಗಿಸಿಕೊಳ್ಳಬಹುದು.

ಈ ಸ್ಕೀಮು ಸದ್ಯಕ್ಕೆ 2023 ಮಾರ್ಚ್ 31ರವರೆಗೆ ಮಾತ್ರ ಲಭ್ಯ ಇದೆ. ಅಂದರೆ ಮಾರ್ಚ್ 31ರವರೆಗೆ ಪಾಲಿಸಿ ಖರೀದಿಸಲು ಸಮಯ ಇದೆ. ಆದರೆ, ಈ ಸಮಯ ವಿಸ್ತರಣೆ ಆಗಬಹುದು, ಅಥವಾ ನಿರಂತರವಾಗಿ ಮುಂದುವರಿಯಬಹುದು. ಈ ಬಗ್ಗೆ ಸರ್ಕಾರ ಮಾರ್ಚ್ 31ರೊಳಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.

ಏನಿದು ಪ್ರಧಾನ ಮಂತ್ರಿ ವಯ ವಂದನ ಯೋಜನೆ?

ಪಿಎಂ ವಯ ವಂದನ ಯೋಜನೆಯಲ್ಲಿ ವಯ ಹಿಂದಿ ಪದವಾಗಿದ್ದು, ವಯಸ್ಸು ಅಥವಾ ವಯೋವೃದ್ಧ ಎಂದರ್ಥ. 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಇರುವ ಯೋಜನೆಯಾಗಿದೆ. ಒಮ್ಮೆಗೆ ಪ್ರೀಮಿಯಮ್ ಕಟ್ಟಿದರೆ, ನಿಮ್ಮ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ 10 ವರ್ಷದವರೆಗೆ ನಿರ್ದಿಷ್ಟ ಪಿಂಚಣಿ ನಿಮಗೆ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿCrorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?

ಪ್ರೀಮಿಯಮ್ ಮೊತ್ತ ಕನಿಷ್ಠ 1,56,658 ರೂ ಇದೆ. 2018ರಲ್ಲಿ ಗರಿಷ್ಠ ಪ್ರೀಮಿಯಮ್ ಅನ್ನು 7.5 ಲಕ್ಷದಿಂದ 15ಲಕ್ಷಕ್ಕೆ ಏರಿಸಲಾಗಿದೆ. ಈ ಪಾಲಿಸಿಯಲ್ಲಿ ತಿಂಗಳಿಗೆ ಕನಿಷ್ಠ 1,000 ರೂನಿಂದ ಗರಿಷ್ಠ 9,250 ರುಪಾಯಿಯವರೆಗೂ ಪಿಂಚಣಿಯನ್ನು 10 ವರ್ಷದವರೆಗೆ ಪಡೆಯಬಹುದು. ನೀವು ಪಾವತಿಸುವ ಪ್ರೀಮಿಯಮ್ ಹಣಕ್ಕೆ ಸರ್ಕಾರ ಶೇ. 7.40ಯಿಂದ ಶೇ. 7.66ರವರೆಗೆ ಬಡ್ಡಿ ಕೊಡುತ್ತದೆ. ಮಾಸಿಕ ಪಿಂಚಣಿಯಾದರೆ ಶೇ. 7.40 ಬಡ್ಡಿ ಸಿಗುತ್ತದೆ. ವಾರ್ಷಿಕ ಪಿಂಚಣಿಯಾದರೆ ಗರಿಷ್ಠ ಶೇ. 7.66ರಷ್ಟು ಬಡ್ಡಿ ಬರುತ್ತದೆ. ಪಿಂಚಣಿಯನ್ನು ಮಾಸಿಕವಾಗಿಯೂ ಬರುವಂತೆ ಮಾಡಬಹುದು. ಅಥವಾ 3 ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಸಿಗುವಂತೆ ಮಾಡಬಹುದು.

ಪ್ರಧಾನ ಮಂತ್ರಿ ವಯ ವಂದನ ಯೋಜನೆ ಪಾಲಿಸಿ ಖರೀದಿ ಹೇಗೆ?

  • ಪಿಎಂ ವಯ ವಂದನ ಯೋಜನೆ ವೃದ್ಧರಿಗೆಂದು ರೂಪಿಸಿದ್ದು. ಆದ್ದರಿಂದ ಇದರ ಕನಿಷ್ಠ ವಯಸ್ಸು 60 ವರ್ಷ.
  • ಪಾಲಿಸಿದಾರ ಭಾರತೀಯ ನಾಗರಿಕರಾಗಿರಬೇಕು
  • ಒಂದು ಬಾರಿಗೆ ಪ್ರೀಮಿಯಮ್ ಕಟ್ಟಬೇಕು.
  • ಪ್ರೀಮಿಯಮ್ ಮೊತ್ತ 1,56,658 ರುಪಾಯಿಯಿಂದ 15,00,000 ರುಪಾಯಿಯವರೆಗೂ ಇದೆ
  • 10 ವರ್ಷದವರೆಗೆ ಪಿಂಚಣಿ ಬರುತ್ತದೆ.
  • ಕನಿಷ್ಠ ಪಿಂಚಣಿ ತಿಂಗಳಿಗೆ 1,000 ರು ಅಥವಾ ವರ್ಷಕ್ಕೆ 12,000 ರೂ ಸಿಗುತ್ತದೆ.
  • ಪಾಲಿಸಿ ಸಕ್ರಿಯ ಇರುವ 10 ವರ್ಷದಲ್ಲಿ ಪಾಲಿಸಿದಾರ ಮೃತಪಟ್ಟರೆ ಅವರ ಇಡೀ ಪ್ರೀಮಿಯಮ್ ಮೊತ್ತವನ್ನು ನಾಮಿನಿಗೆ ರೀಫಂಡ್ ಮಾಡಲಾಗುತ್ತದೆ
  • 10 ವರ್ಷದ ಬಳಿಕ ಪಾಲಿಸಿದಾರ ಸಜೀವವಾಗಿದ್ದರೆ ಅವರಿಗೆ ಪ್ರೀಮಿಯಮ್ ಮೊತ್ತ ಮರಳುತ್ತದೆ.
  • 15 ಲಕ್ಷ ರೂ ಪ್ರೀಮಿಯಮ್ ಕಟ್ಟಿದರೆ ವರ್ಷಕ್ಕೆ 1.1 ಲಕ್ಷ ರೂನಂತೆ 10 ವರ್ಷ ಹಣ ಬರುತ್ತದೆ. 10 ವರ್ಷದ ಬಳಿಕ 15 ಲಕ್ಷ ರೂ ಹಣವೂ ಕೈಸೇರುತ್ತದೆ.

ಪ್ರಧಾನ ಮಂತ್ರಿ ವಯ ವಂದನ ಯೋಜನೆ ಪಾಲಿಸಿ ಲೆಕ್ಕಾಚಾರ:

ಕನಿಷ್ಠ ಮೊತ್ತಕ್ಕೆ ನೀವು ಪಾಲಿಸಿ ಖರೀದಿಸುವುದಾದರೆ 1,56,658 ರುಪಾಯಿಯಿಂದ ಆರಂಭವಾಗುತ್ತದೆ. ಈ ಮೊತ್ತಕ್ಕೆ ವಾರ್ಷಿಕವಾಗಿ 12,000 ರೂ ಪಿಂಚಣಿ ಬರುತ್ತದೆ. ಅರ್ಧವರ್ಷಕ್ಕೆ ಪಿಂಚಣಿ ಬೇಕೆಂದರೆ ಪಾಲಿಸಿ ಪ್ರೀಮಿಯಮ್ ಮೊತ್ತ 1,59,574 ರು ಆಗುತ್ತದೆ. ತಿಂಗಳಿಗೆ ಪಿಂಚಣಿ ಬೇಕೆಂದರೆ ಪ್ರೀಮಿಯಮ್ 1,62,162 ರು ಕಟ್ಟಬೇಕಾಗುತ್ತದೆ.

ಇದನ್ನೂ ಓದಿMutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…

ಇನ್ನು ಗರಿಷ್ಠ ಮೊತ್ತದ ಪಾಲಿಸಿ ಖರೀದಿಸುವುದಿದ್ದರೆ 15 ಲಕ್ಷ ರೂ ಆಗುತ್ತದೆ. ಇದರಲ್ಲಿ ತಿಂಗಳಿಗೆ 9,250 ರುಪಾಯಿ ಪಿಂಚಣಿ ಬರುತ್ತದೆ. 14,49,086 ರು ಪ್ರೀಮಿಯಮ್ ಕಟ್ಟಿದರೆ ವರ್ಷಕ್ಕೆ 1.1 ಲಕ್ಷ ರು ಪಿಂಚಣಿ ಪ್ರಾಪ್ತವಾಗುತ್ತಾ ಹೋಗುತ್ತದೆ.

ಎಫ್​ಡಿಯಲ್ಲಿ ಹೂಡಿಕೆ ಮಾಡಿದರೆ ಹೇಗೆ?

ಒಂದು ವೇಳೆ ನಿಮ್ಮಲ್ಲಿ 15ಲಕ್ಷ ರೂ ಇದ್ದು ಅದನ್ನು ನಿಶ್ಚಿತ ಠೇವಣಿಯಲ್ಲಿ ಇರಿಸಿದರೂ ಬಹಳಷ್ಟು ರಿಟರ್ನ್ಸ್ ಸಿಗುತ್ತದೆ. ಈಗ ಎಲ್ಲಾ ಬ್ಯಾಂಕುಗಳಲ್ಲೂ ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿ ನೀಡುತ್ತವೆ. ಕೆಲ ಬ್ಯಾಂಕುಗಳು ಹಿರಿಯರ ಠೇವಣಿಗಳಿಗೆ ಶೇ. 8.8ರವರೆಗೂ ಬಡ್ಡಿ ಕೊಡುತ್ತವೆ. ನಿಮ್ಮ 15 ಲಕ್ಷ ರು ಠೇವಣಿಗೆ ಶೇ. 8.8ರಷ್ಟು ಬಡ್ಡಿ ಸಿಕ್ಕರೆ ಅದು ವರ್ಷಕ್ಕೆ 1.32 ಲಕ್ಷ ರುಪಾಯಿ ಆಗುತ್ತದೆ. ಹಾಗೆ ನೋಡಿದರೆ ಪಿಎಂ ವಯ ವಂದನ ಯೋಜನೆಗಿಂತ ಹೆಚ್ಚು ರಿಟರ್ನ್ಸ್ ತಂದುಕೊಡುತ್ತವೆ ಕೆಲ ನಿಶ್ಚಿತ ಠೇವಣಿಗಳು. ಆದರೆ, ಪಿಎಂ ವಿವಿವೈ ಸ್ಕೀಮ್​ಗೆ ಸರ್ಕಾರದ ಖಾತ್ರಿ ಇರುವುದರಿಂದ ಹಣ ಸುರಕ್ಷಿತವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Wed, 15 March 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ