Mutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…

Investment Tips: ಮ್ಯೂಚುವಲ್ ಫಂಡ್ ಸಾಮಾನ್ಯರಿಂದ ಹೂಡಿಕೆ ಹಣ ಪಡೆದು ಅದನ್ನು ವಿವಿಧ ಷೇರುಗಳಲ್ಲಿ ವಿನಿಯೋಗಿಸುತ್ತಾರೆ. ಅದರಿಂದ ಬರುವ ಲಾಭ ಅಥವಾ ನಷ್ಟ ಮ್ಯೂಚುವಲ್ ಫಂಡ್​ನ ಗ್ರಾಹಕರಿಗೆ ವರ್ಗಾವಣೆ ಆಗುತ್ತದೆ. ಈ ಮ್ಯೂಚುವಲ್ ಫಂಡ್​ಗಳು ಹೆಚ್ಚಾಗಿ ಯಾವ ಷೇರುಗಳ ಮೇಲೆ ಹೂಡಿಕೆ ಮಾಡುತ್ತಾರೆ...? ಇಲ್ಲಿದೆ ವಿವರ

Mutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು...
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 14, 2023 | 2:39 PM

ಷೇರುಪೇಟೆಯಲ್ಲಿ ವ್ಯವಹಾರ ನಡೆಸಿದವರೆಲ್ಲರೂ ಶ್ರೀಮಂತರಾಗುವುದಿಲ್ಲ. ಅಥವಾ ಎಲ್ಲವನ್ನೂ ಕಳೆದುಕೊಂಡು ಬಿಕಾರಿಗಳೂ ಆಗುವುದಿಲ್ಲ. ಮಾರುಕಟ್ಟೆಯ ಏರಿಳಿತ, ಹೂಡಿಕೆ ಮಾಡಿದ ಕಂಪನಿಯ ಏರಿಳಿತ, ಭವಿಷ್ಯದ ದಾರಿ ಇವೆಲ್ಲವನ್ನೂ ತಕ್ಕಮಟ್ಟಿಗೆ ಅಂದಾಜಿಸಬಲ್ಲವರು ವೈಯಕ್ತಿಕವಾಗಿ ಷೇರುಗಳ ಮೇಲೆ ಹೂಡಿಕೆ ಮಾಡಬಹುದು. ಇಂಥ ಕೆಲಸಕ್ಕೆಂದೇ ಇರುವ ಪರಿಣಿತ ಸ್ಟಾಕ್ ಬ್ರೋಕರ್​ಗಳ (Stock Brokers) ಮೂಲಕವೂ ಷೇರುಗಳ ಮೇಲೆ ಹಣ ಹೂಡಬಹುದು. ಇನ್ನು, ಮ್ಯೂಚುವಲ್ ಫಂಡ್ (Mutual Fund) ಮೇಲೆ ಹಣ ಹಾಕುವುದು ಷೇರುಪೇಟೆ ವ್ಯವಹಾರದಲ್ಲಿ ಸೇಫ್ ಮಾರ್ಗ ಎಂದು ಹೇಳಲಾಗುತ್ತದೆ.

ಅಷ್ಟಕ್ಕೂ ಮ್ಯೂಚುವಲ್ ಫಂಡ್​ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ನೂರಾರು ಮ್ಯೂಚುವಲ್ ಫಂಡ್​ಗಳಿದ್ದು, ಇವು ಷೇರುಪೇಟೆಯಲ್ಲಿ ವಿವಿಧ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಅದಕ್ಕೆಂದೇ ಷೇರುಪೇಟೆ, ಮತ್ತು ಹಣಕಾಸು ಹಾಗೂ ಆರ್ಥಿಕ ಮಾರುಕಟ್ಟೆಯ ಸೂಕ್ಷ್ಮತೆಗಳನ್ನು ಬಲ್ಲಂತಹ ತಜ್ಞರನ್ನು ಮ್ಯೂಚುವಲ್ ಫಂಡ್​ಗಳು ನೇಮಿಸಿಕೊಳ್ಳುತ್ತವೆ.

ಇದನ್ನೂ ಓದಿYes Bank: ಯೆಸ್ ಬ್ಯಾಂಕ್ ಷೇರುಗಳನ್ನು ಮನಬಂದಂತೆ ಮಾರುತ್ತಿರುವ ಜನರು; ಯಾಕಿಷ್ಟು ನೂಕುನುಗ್ಗುಲು?

ಮ್ಯೂಚುವಲ್ ಫಂಡ್​ಗಳು ಎಂಥ ಷೇರುಗಳಲ್ಲಿ ಹೂಡಿಕೆ ಮಾಡಬೇಕೆಂದು ಯಾವ ಮಾನದಂಡ ಅನುಸರಿಸುತ್ತವೆ ಎಂಬುದೂ ಕುತೂಹಲದ ಸಂಗತಿ. ನಿರ್ದಿಷ್ಟ ಕಾಲಾವಧಿಯಲ್ಲಿ ವ್ಯವಹಾರ ಮತ್ತು ಲಾಭ ಆರೋಗ್ಯಕರ ಮಟ್ಟದಲ್ಲಿರುವ ಕಂಪನಿಗಳನ್ನು ನೋಡಿ ಹೂಡಿಕೆಗೆ ಆಯ್ಕೆ ಮಾಡಲಾಗುತ್ತದೆ. 2018ರಿಂದ 2022ರ ಅವಧಿಯಲ್ಲಿ ಸ್ಥಿರ ಬೆಳವಣಿಗೆ ಕಂಡ ಇಂಥ ಕೆಲ ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಕಂಪನಿಗಳು ಮತ್ತು ಇವುಗಳ ಷೇರುಗಳಲ್ಲಿ ಎಷ್ಟು ಮ್ಯೂಚುವಲ್ ಫಂಡ್​ಗಳು ಹೂಡಿಕೆ ಮಾಡಿವೆ ಎಂಬ ಮಾಹಿತಿ ಇಲ್ಲಿದೆ….

  1. ಆಯಿಲ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 29. ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 11
  2. ಅಜಂತ ಫಾರ್ಮ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 12; ಹೂಡಿಕೆ ಮಾಡಿರುವ ಮ್ಯುಚುವಲ್ ಫಂಡ್​ಗಳ ಸಂಖ್ಯೆ 48
  3. ಇಂಡಿಯನ್ ಎನರ್ಜಿ ಎಕ್ಸ್​ಚೇಂಜ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 17; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 15
  4. ಅಫಲ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 90; ಹೂಡಿಕೆ ಮಾಡಿರುವ ಮ್ಯುಚುವಲ್ ಫಂಡ್​ಗಳ ಸಂಖ್ಯೆ 27
  5. ಜಿಂದಾಲ್ ಸ್ಟೀಲ್ ಅಂಡ್ ಪವರ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 23; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 75
  6. ಫಿನೋಲೆಕ್ಸ್ ಇಂಡಸ್ಟ್ರೀಸ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 13; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 19.
  7. ಟ್ಯೂಬ್ ಇನ್ವೆಸ್ಟ್​ಮೆಂಟ್ಸ್ ಆಫ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 25; ಹೂಡಿಕೆಯಾಗಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 55
  8. ಅಬ್ಬಾಟ್ ಇಂಡಿಯಾ: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 11; ಹೂಡಿಕೆ ಆದ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 72.
  9. ಗೇಟ್​ವೇ ಡಿಸ್ಟ್ರಿಪಾರ್ಕ್ಸ್: ಐದು ವರ್ಷದಲ್ಲಿ ಆದಾಯ ಹೆಚ್ಚಳ ಶೇ. 16; ಹೂಡಿಕೆಯಾದ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 26
  10. ಪ್ರೂಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸಸ್: ಆದಾಯ ಹೆಚ್ಚಳ ಶೇ. 22; ಹೂಡಿಕೆಯಾದ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 23
  11. ಬಾಯೆರ್ ಕ್ರಾಪ್​ಸೈನ್ಸ್: ಆದಾಯ ಹೆಚ್ಚಳ ಶೇ. 19; ಹೂಡಿಕೆ ಮಾಡಿರುವ ಮ್ಯೂಚುವಲ್ ಪಂಡ್​ಗಳ ಸಂಖ್ಯೆ 24
  12. ಗುಜರಾತ್ ಗ್ಯಾಸ್: ಆದಾಯ ಹೆಚ್ಚಳ ಶೇ. 28; ಮ್ಯುಚವಲ್ ಫಂಡ್ ಸಂಖ್ಯೆ 87
  13. ಗ್ಲ್ಯಾಂಡ್ ಫಾರ್ಮಾ: ಆದಾಯ ಹೆಚ್ಚಳ ಶೇ. 28; ಮ್ಯೂಚುವಲ್ ಫಂಡ್​ಗಳು 98
  14. ಆಸ್ಟ್ರಾಲ್: ಆದಾಯ ಹೆಚ್ಚಳ ಶೇ. 28; ಹೂಡಿಕೆಯಾಗಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 65
  15. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಆದಾಯ ಹೆಚ್ಚಳ ಶೇ. 35; ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 52.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Tue, 14 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ