AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Loan: ಗೋಲ್ಡ್ ಲೋನ್ ತೆಗೆದುಕೊಳ್ಳುವ ಮುನ್ನ ಈ ಅಂಶಗಳು ಗಮನದಲ್ಲಿರಲಿ…

Advantages and Disadvantages of Gold Loan: ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಕೆಲವಾರು ವಿಚಾರಗಳು ಗಮನದಲ್ಲಿರುವುದು ಸೂಕ್ತ. ಗೋಲ್ಡ್ ಲೋನ್​ನಿಂದ ಆಗುವ ಲಾಭಗಳೇನು, ಅದರ ಸಾಧಕ ಬಾಧಕಗಳೇನು ಎಂಬುದು ತಿಳಿದಿರಲಿ.

Gold Loan: ಗೋಲ್ಡ್ ಲೋನ್ ತೆಗೆದುಕೊಳ್ಳುವ ಮುನ್ನ ಈ ಅಂಶಗಳು ಗಮನದಲ್ಲಿರಲಿ...
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Mar 13, 2023 | 3:58 PM

Share

ಚಿನ್ನ ಇವತ್ತು ಬಹು ಆಯಾಮಗಳಲ್ಲಿ ಬಳಕೆ ಆಗುವ ಅಮೂಲ್ಯ ವಸ್ತು. ಅಂದವಾಗಿ ಕಾಣಲು ಮೈಮೇಲೆ ಒಡವೆ ಧರಿಸಲು ಚಿನ್ನ (Gold) ಬೇಕು; ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡಲು (Investment option) ಚಿನ್ನ ಬಹಳ ಸೂಕ್ತ; ಕಡಿಮೆ ಬಡ್ಡಿಗೆ ಸಾಲ ಪಡೆಯಲು ಚಿನ್ನ ಬೆಸ್ಟ್. ಆಪತ್ಕಾಲದಲ್ಲಿ ನಮಗೆ ಬಹಳ ಆಸರೆಯಾಗುತ್ತದೆ ಈ ಚಿನ್ನ. ನೀವು ಒಡವೆ ರೂಪದಲ್ಲಾದರೂ ಸರಿ, ಕಾಯಿನ್, ಗಟ್ಟಿ ಇತ್ಯಾದಿ ಶುದ್ಧ ರೂಪದಲ್ಲಾದರೂ ಸರಿ ಚಿನ್ನ ಖರೀದಿಸುವುದು ಯಾವತ್ತೂ ನಷ್ಟ ತರುವುದಿಲ್ಲ. ಈಗ ನಮಗೆ ತುರ್ತಾಗಿ ಸಾಲ ಬೇಕೆಂದರೆ ಮೊದಲು ಹುಡುವುದೇ ಚಿನ್ನಕ್ಕಾಗಿ. ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಕೆಲವಾರು ವಿಚಾರಗಳು ಗಮನದಲ್ಲಿರುವುದು ಸೂಕ್ತ. ಗೋಲ್ಡ್ ಲೋನ್​ನಿಂದ (Gold Loan) ಆಗುವ ಲಾಭಗಳೇನು, ಅದರ ಸಾಧಕ ಬಾಧಕಗಳೇನು ಎಂಬುದು ತಿಳಿದಿರಲಿ.

ಚಿನ್ನದ ಮೇಲೆ ಸಾಲ ಎಲ್ಲಿ ಪಡೆಯುತ್ತೀರಿ?

ಬಹಳ ಜನರು ಈಗಲೂ ಒಡವೆ ಗಿರವಿ ಅಂಗಡಿಗಳಲ್ಲಿ (Bankers) ಅಡವಿಟ್ಟು ಸಾಲ ಪಡೆಯುತ್ತಾರೆ. ಮನೆಯ ಬಳಿಯೇ ಗಿರವಿ ಅಂಗಡಿಗಳಿರುವುದು, ಒಡವೆ ಅಂಗಡಿಯವರ ಪರಿಚಿತನಿರುವುದು ಮತ್ತು ಬಹಳ ಕ್ಷಿಪ್ರವಾಗಿ ಸಾಲ ಸಿಗುವುದು ಇದಕ್ಕೆ ಪ್ರಮುಖ ಕಾರಣ. ಆದರೆ, ಬಡ್ಡಿ ದರ ಶೇ. 18ರಿಂದ ಶೇ. 36ರವರೆಗೂ ಇರುತ್ತದೆ.

ಇದನ್ನೂ ಓದಿCheQ: ಬಿಲ್ ಕಟ್ಟಿದರೆ ಶೇ. 1.5ರಷ್ಟು ರಿಟರ್ನ್; ಬೆಂಗಳೂರಿನ ಸ್ಟಾರ್ಟಪ್ ಆಫರ್; ಕ್ರೆಡ್​ಗಿಂತ ಇದು ಭಿನ್ನವಾ?

ಇದರ ಬದಲು ಬ್ಯಾಂಕುಗಳಲ್ಲಿ ಒಡವೆ ಸಾಲ ಪಡೆಯುವುದು ಬಹಳ ಉಪಯುಕ್ತ. ಇದರ ಪ್ರಕ್ರಿಯೆ ಕೂಡ ಬಹಳ ಸರಳ ಹಾಗು ಕ್ಷಿಪ್ರ. ಬಡ್ಡಿ ದರವೂ ಬಹಳ ಕಡಿಮೆ. ನಿಮ್ಮ ಒಡವೆಯ ಕಳ್ಳತನ ಆಗುವ ಭಯ ಇರುವುದಿಲ್ಲ. ಕೋಆಪರೇಟಿವ್ ಬ್ಯಾಂಕ್​ಗಳಲ್ಲೂ ನೀವು ಈ ಸಾಲ ಪಡೆಯಬಹುದು. ಮುತ್ತೂಟ್ ಫೈನಾನ್ಸ್ ಇತ್ಯಾದಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಕಡಿಮೆ ಬಡ್ಡಿ ದರಕ್ಕೆ ಒಡವೆ ಸಾಲ ನೀಡುತ್ತವೆ.

ಗೋಲ್ಡ್ ಲೋನ್ ಲಾಭ

  • ಒಡವೆ ಸಾಲಕ್ಕೆ ನೀವು ಚಿನ್ನ ನೀಡಿದರೆ ಸಾಕು. ಹೆಚ್ಚೆಂದರೆ ಒಂದು ಅರ್ಜಿಗೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಬಹಳ ಸುಲಭವಾಗಿ ಸಾಲ ಸಿಗುತ್ತದೆ.
  • ಕ್ರೆಡಿಟ್ ಸ್ಕೋರ್ ಇಲ್ಲ ಎಂದು ಆತಂಕಗೊಳ್ಳಬೇಕಿಲ್ಲ. ಆದಾಯ ಪ್ರಮಾಣಪತ್ರ ಕೊಡಬೇಕಿಲ್ಲ. ಉದ್ಯೋಗಸ್ಥ ಎಂದು ತೋರಿಸುವ ಅಗತ್ಯ ಇಲ್ಲ. ವಯಸ್ಸಿನ ಮಿತಿ ಇಲ್ಲ.
  • ಬಡ್ಡಿ ದರ ಬಹಳ ಕಡಿಮೆ ಇರುತ್ತದೆ. ಶೇ. 10ರಿಂದ 14ರಷ್ಟು ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
  • ಬ್ಯಾಂಕುಗಳಿಗೂ ಕೂಡ ಗೋಲ್ಡ್ ಲೋನ್ ನೀಡುವುದು ಅತ್ಯಂತ ಸುರಕ್ಷಿತ ಸಾಲ ವಿಧಾನ. ಇಲ್ಲಿ ಸಾಲ ಮರುಪಾವತಿ ಆಗದಿದ್ದರೆ ಚಿನ್ನವನ್ನು ಹರಾಜಿಗೆ ಹಾಕಿ ಹಣ ಪಡೆಯಬಹುದು.
  • ಚಿನ್ನದ ಈಗಿನ ದರ ಎಷ್ಟಿದೆ, ಅದರ ಶುದ್ಧತೆ ಎಷ್ಟಿದೆ ಎಂಬುದರ ಮೇಲೆ ಸಾಲದ ಪ್ರಮಾಣ ನಿಗದಿಯಾಗುತ್ತದೆ. ಈಗಿನ ಚಿನ್ನದ ಮೌಲ್ಯದ ಶೇ. 80ರಿಂದ ಶೇ. 90ರಷ್ಟು ಹಣವನ್ನು ಸಾಲವಾಗಿ ಕೊಡಲಾಗುತ್ತದೆ. ಚಿನ್ನದ ಶುದ್ಧತೆಯನ್ನು ಪರೀಕ್ಷಿಸಿದ ಬಳಿಕ ಸಾಲ ಕೊಡಲಾಗುತ್ತದೆ.
  • ನೀವು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಮುಳುಗಿಹೋಗುವುದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ನಷ್ಟ ಆಗುವುದಿಲ್ಲ. ಬ್ಯಾಂಕಿನವರು ನಿಮ್ಮನ್ನು ಹುಡುಕಿಕೊಂಡು ಬರೋದಿಲ್ಲ.

ಇದನ್ನೂ ಓದಿInspiring: ಟಿಸಿಎಸ್​ನಲ್ಲಿ ಇಂಟರ್ನ್ ಆಗಿದ್ದ ರೈತನ ಮಗನ ಸಂಬಳ ಈಗ 109 ಕೋಟಿ; ದಂಗುಬಡಿಸುತ್ತದೆ ಚಂದ್ರಶೇಖರನ್ ವೃತ್ತಿಜೀವನ

ತೆರಿಗೆ ಲಾಭ ಇಲ್ಲ

ಗೋಲ್ಡ್ ಲೋನ್​ನಿಂದ ಪ್ರಯೋಜನ ಇಲ್ಲ ಎನ್ನುವುದಾದರೆ ಅದು ತೆರಿಗೆ ವಿಚಾರದಲ್ಲಿ ಮಾತ್ರ. ಒಡವೆ ಅಡವಿಟ್ಟು ಪಡೆಯುವ ಸಾಲವನ್ನು ಐಟಿ ರಿಟರ್ನ್ಸ್​ನಲ್ಲಿ ತೋರಿಸಲು ಆಗುವುದಿಲ್ಲ. ಗೃಹ ಸಾಲಗಳಿಗೆ ಕೆಲ ತೆರಿಗೆ ರಿಯಾಯಿತಿಗಳು ಇರುವಂತೆ ಚಿನ್ನದ ಸಾಲಕ್ಕೆ ಇರುವುದಿಲ್ಲ. ನಿಮ್ಮ ಪ್ಯಾನ್ ಡೇಟಾಬೇಸ್​ನಲ್ಲಿ ಒಡವೆ ಸಾಲ ದಾಖಲಾಗುವುದೇ ಇಲ್ಲ. ಇದು ಬಿಟ್ಟರೆ ಚಿನ್ನದ ಮೇಲಿನ ಸಾಲ ಯಾರಿಗೇ ಆದರೂ ಆಪತ್ಕಾಲದ ನಿಧಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Mon, 13 March 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ