Inspiring: ಟಿಸಿಎಸ್​ನಲ್ಲಿ ಇಂಟರ್ನ್ ಆಗಿದ್ದ ರೈತನ ಮಗನ ಸಂಬಳ ಈಗ 109 ಕೋಟಿ; ದಂಗುಬಡಿಸುತ್ತದೆ ಚಂದ್ರಶೇಖರನ್ ವೃತ್ತಿಜೀವನ

Successful Story of N Chandrasekharan: ಟಾಟಾ ಸಾಮ್ರಾಜ್ಯವನ್ನು ನಿರ್ವಹಿಸುತ್ತಿರುವ ಎನ್ ಚಂದ್ರಶೇಖರನ್ ವೃತ್ತಿಜೀವನ ಸಾಮಾನ್ಯ ಜನರೆಲ್ಲರಿಗೂ ರೋಲ್ ಮಾಡಲ್ ಎನಿಸುವಂತದ್ದು. ಉನ್ನತ ಸ್ತರಕ್ಕೆ ಯಾರು ಬೇಕಾದರೂ ಏರಬಹುದು ಎಂದು ತೋರಿಸಿಕೊಟ್ಟವರು ಅವರು. ಅವರ ಬಗ್ಗೆ ಒಂದು ಫೋಟೋ ಸ್ಟೋರಿ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 13, 2023 | 2:55 PM

ರೈತನ ಮಗನಾಗಿ ಎಚ್​ಡಿ ದೇವೇಗೌಡ ಈ ದೇಶದ ಪ್ರಧಾನಿಯಾದ ಭವ್ಯ ಇತಿಹಾಸ ನಮ್ಮ ದೇಶದ್ದು. ಕಾರ್ಪೊರೇಟ್ ವಲಯದಲ್ಲೂ ಈ ರೀತಿ ರ್ಯಾಗ್ ಟು ರಿಚಸ್ (Rag to Riches) ನಿದರ್ಶನಗಳು ಬಹಳ ಇವೆ. ಅದರಲ್ಲಿ ಗಮನ ಸೆಳೆದಿರುವುದು ಟಾಟಾ ಸನ್ಸ್ ಛೇರ್ಮನ್ ನಟರಾಜನ್ ಚಂದ್ರಶೇಖರನ್. ಚಂದ್ರ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಎನ್ ಚಂದ್ರಶೇಖರನ್ ವೃತ್ತಿಜೀವನ ಪ್ರತಿಯೊಬ್ಬ ಕನಸುಗಾರನಿಗೂ ಆದರ್ಶಪ್ರಾಯ. ಸಾಮಾನ್ಯ ರೈತನ ಮಗನಾದ ಎನ್ ಚಂದ್ರಶೇಖರನ್ ಇವತ್ತು ಟಾಟಾ ಸನ್ಸ್ ಛೇರ್ಮನ್ ಆಗಿ ವರ್ಷಕ್ಕೆ 109 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ. ರತನ್ ಟಾಟಾ ನೆಚ್ಚಿನ ಸಿಪಾಯಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1 / 7
2017ರಲ್ಲಿ ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ಹೊರಹಾಕಲಾಯಿತು. ಅದೊಂದು ಕಹಿ ಬೆಳವಣಿಗೆ ಬಳಿಕ ಟಾಟಾ ಸನ್ಸ್ ಸಾಮ್ರಾಜ್ಯವನ್ನು ನೋಡಿಕೊಳ್ಳುವ ನೆಚ್ಚಿನ ವ್ಯಕ್ತಿಗೆ ರತನ್ ಟಾಟಾ ಹುಡುಕಾಟ ನಡೆಸಿದಾಗ ತೋಚಿದ್ದೇ ನಟರಾಜನ್ ಚಂದ್ರಶೇಖರನ್. ಸೈರಸ್ ನಿರ್ಗಮನದ ಬಳಿಕ ಅಲುಗಾಡುತ್ತಿದ್ದ ಟಾಟಾ ಸನ್ಸ್ ಸಂಸ್ಥೆಗೆ ಚಂದ್ರಶೇಖರನ್ ಒಂದು ಸ್ಥಿರತೆ ತಂದುಕೊಟ್ಟಿದ್ದಲ್ಲದೇ ಇನ್ನಷ್ಟು ಪ್ರಬಲ ಕಂಪನಿಯಾಗಿ ಬೆಳೆಸಿದ್ದಾರೆ. ತಾನೊಬ್ಬ ನಾಮಕಾವಸ್ತೆಯ ಛೇರ್ಮನ್ ಅಲ್ಲ ಎಂಬುದನ್ನು ನಿರ್ವಿವಾದ ಎನಿಸುವ ರೀತಿಯಲ್ಲಿ ಸಾಬೀತುಪಡಿಸಿದ್ದಾರೆ.

2 / 7
ರೈತನ ಮಗ: ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಮೋಹನೂರ್ ಗ್ರಾಮದ ರೈತರ ಕುಟುಂಬದಲ್ಲಿ 1963ರಲ್ಲಿ ಜನಸಿದವರು ನಟರಾಜನ್ ಚಂದ್ರಶೇಖರನ್. ಸರ್ಕಾರಿ ಶಾಲೆಯಲ್ಲಿ ಓದಿದ ಅವರು ಕೊಯಂಬತ್ತೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಪ್ಲೈಡ್ ಸೈನ್ಸ್​ನಲ್ಲಿ ಪದವಿ ಪಡೆದರು. ಬಾಲ್ಯದಿಂದಲೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಡೆ ಆಸಕ್ತಿ ಹೊಂದಿದ್ದ ಅವರು ಆಗ ಟ್ರೆಂಡಿಂಗ್​ನಲ್ಲಿದ್ದ ಎಂಸಿಎ ಸ್ನಾತಕೋತ್ತರ ಪದವಿಯನ್ನು ತಿರುಚ್ಚಿಯ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿದರು.

3 / 7
ಟಿಸಿಎಸ್​ನಲ್ಲಿ ಇಂಟರ್ನ್: ಎಂಜಿನಿಯರಿಂಗ್ ಮಾಡಿದ ಬಳಿಕ ನಟರಾಜನ್ ಚಂದ್ರಶೇಖರನ್ 1987ರಲ್ಲಿ ಟಿಸಿಎಸ್​ನಲ್ಲಿ ಇಂಟರ್ನ್ ಆಗಿ ಸೇರಿಕೊಂಡರು. ತಮ್ಮ ಕಾರ್ಯಕ್ಷಮತೆ ಮೂಲಕ ವೃತ್ತಿಜೀವನದ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದ ಅವರು 2007ರಲ್ಲಿ ಟಿಸಿಎಸ್ ಮಂಡಳಿ ಸದಸ್ಯರಾದರಲ್ಲದೇ, ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಕೂಡ ಆದರು. ಆದಾಗಿ ಎರಡು ವರ್ಷದಲ್ಲಿ, ಅಂದರೆ 2009ರಲ್ಲಿ ಅವರು ಟಾಟಾ ಗ್ರೂಪ್​ನ ಸಿಇಒ ಆದರು. ಆಗ ಅವರ ವಯಸ್ಸು ಕೇವಲ 46 ವರ್ಷ. ಟಾಟಾ ಗ್ರೂಪ್ ಇತಿಹಾಸದಲ್ಲೇ ಅದರ ಅತ್ಯಂತ ಕಿರಿಯ ಸಿಇಒ ಎಂದರೆ ಅದು ಎನ್ ಚಂದ್ರಶೇಖರನ್.

4 / 7
ಟಾಟಾ ಸನ್ಸ್ ಛೇರ್ಮನ್: ಟಾಟಾ ಗ್ರೂಪ್ ಸಿಇಒ ಆಗಿ ನಟರಾಜನ್ ಚಂದ್ರಶೇಖರನ್ 2017ರಲ್ಲಿ ಟಾಟಾ ಸನ್ಸ್ ಛೇರ್ಮನ್ ಆದರು. ಟಾಟಾ ಮನೆತನ ಮತ್ತು ಮಿಸ್ತ್ರಿ ಮನೆತನದ ಹೊರಗಿನವರು ಈ ಹುದ್ದೆ ಅಲಂಕರಿಸಿದ್ದು ಇದೇ ಮೊದಲು. ಅವರ ಸುಪರ್ದಿಯಲ್ಲಿ ಟಾಟಾ ಗ್ರೂಪ್ ಆದಾಯ ಹಲವು ಪಟ್ಟು ಹೆಚ್ಚಾಗಿದೆ. 2017ರಲ್ಲಿ 6.36 ಲಕ್ಷ ಆದಾಯ ಮತ್ತು 36,728 ರೂ ಲಾಭದಲ್ಲಿ ಇದ್ದ ಟಾಟಾ ಗ್ರೂಪ್ ಸಂಸ್ಥೆ ಐದು ವರ್ಷದಲ್ಲಿ ಅದರ ಆದಾಯ 9.44 ಲಕ್ಷ ಕೋಟಿಗೆ ಹೆಚ್ಚಾಗಿದೆ. ಅದರ ಲಾಭ ಕೂಡ 64,267 ಕೋಟಿ ರುಪಾಯಿಗೆ ಹೆಚ್ಚಾಗಿದೆ.

5 / 7
109 ಕೋಟಿ ರೂ ಸಂಭಾವನೆ: ಎನ್ ಚಂದ್ರಶೇಖರನ್ ಅವರ ವಾರ್ಷಿಕ ಸಂಬಳ 2019ರಲ್ಲಿ 65 ಕೋಟಿ ರೂ ಇತ್ತು. 2021-22ರಲ್ಲಿ ಅವರ ಸಂಭಾವನೆ 109 ಕೋಟಿ ಆಗಿದೆ. ಭಾರತದಲ್ಲಿ ಅತಿ ಹೆಚ್ಚು ಸಂಬಳ ತೆಗೆದುಕೊಳ್ಳುತ್ತಿರುವ ದಾಖಲೆ ಎನ್ ಚಂದ್ರಶೇಖರನ್ ಅವರದ್ದಾಗಿದೆ.

6 / 7
ನಟರಾಜನ್ ಕುಟುಂಬ ಮತ್ತು ಆಸ್ತಿ: ಎನ್ ಚಂದ್ರಶೇಖರನ್ ಅವರಿಗೆ ಪ್ರಣವ್ ಎಂಬ ಮಗನಿದ್ದಾನೆ. ಇವರ ಪತ್ನಿ ಲಲಿತಾ. 2020ರಲ್ಲಿ ಎನ್ ಚಂದ್ರಶೇಖರನ್ ಅವರು ಮುಂಬೈನಲ್ಲಿ 98 ಕೋಟಿ ರೂ ಮೌಲ್ಯದ ಡುಪ್ಲೆಕ್ಸ್ ಮನೆ ಖರೀದಿ ಮಾಡಿದ್ದರು. 6,000 ಚದರ ಅಡಿಯಷ್ಟು ವಿಶಾಲವಾಗಿದೆ ಈ ಫ್ಲಾಟ್. ಪೆಡರ್ ರೋಡ್ ಲಕ್ಸುರಿ ಟವರ್​ನಲ್ಲಿ ಇಂಥ ಫ್ಲಾಟ್​ನ ಬಾಡಿಗೆ ತಿಂಗಳಿಗೆ 20 ಲಕ್ಷ ರೂ ಆಗುತ್ತದೆ.

7 / 7
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ