CheQ: ಬಿಲ್ ಕಟ್ಟಿದರೆ ಶೇ. 1.5ರಷ್ಟು ರಿಟರ್ನ್; ಬೆಂಗಳೂರಿನ ಸ್ಟಾರ್ಟಪ್ ಆಫರ್; ಕ್ರೆಡ್​ಗಿಂತ ಇದು ಭಿನ್ನವಾ?

Axis Bank Credit Card Payment Offer: ಆ್ಯಕ್ಸಿಸ್ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಈ ಪ್ಲಾಟ್​ಫಾರ್ಮ್​ನಲ್ಲಿ ಕಟ್ಟಿದರೆ ಶೇ. 1.5ರಷ್ಟು ರಿಟರ್ನ್ ಸಿಗುತ್ತದೆ. ಇದು ಬೆಂಗಳೂರಿನ ಚೆಕ್ ಸ್ಟಾರ್ಟಪ್​ನ ಆಫರ್. ಇತರ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರೂ ಶೇ. 1ರಷ್ಟು ರಿಟರ್ನ್ ಸಿಗುತ್ತದೆ. ಹೆಚ್ಚಿನ ವಿವರ ಇಲ್ಲಿ ಓದಿ....

CheQ: ಬಿಲ್ ಕಟ್ಟಿದರೆ ಶೇ. 1.5ರಷ್ಟು ರಿಟರ್ನ್; ಬೆಂಗಳೂರಿನ ಸ್ಟಾರ್ಟಪ್ ಆಫರ್; ಕ್ರೆಡ್​ಗಿಂತ ಇದು ಭಿನ್ನವಾ?
CheQ App
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 13, 2023 | 11:52 AM

ಬೆಂಗಳೂರು: ಕ್ರೆಡ್ ಆ್ಯಪ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಚೆಕ್ (CheQ) ಎನ್ನುವ ಹೊಸ ಸ್ಟಾರ್ಟಪ್ ಆರಂಭಗೊಂಡಿದ್ದು, ಇದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗೆ ಅಮೋಘ ರಿಟರ್ನ್ಸ್ ಆಫರ್ ಮಾಡುತ್ತಿದೆ. ಪ್ರತೀ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರು ಆ ಬಿಲ್ ಮೊತ್ತದ ಶೇ. 1ರಷ್ಟು ಹಣ ಗ್ರಾಹಕರಿಗೆ ವಾಪಸ್ ಸಂದಾಯವಾಗುತ್ತದೆ. ಇದೀಗ ಆ್ಯಕ್ಸಿಸ್ ಬ್ಯಾಂಕ್ ಜೊತೆ CheQ ಹೊಂದಾಣಿಕೆ ಮಾಡಿಕೊಂಡಿದ್ದು, ಆ್ಯಕ್ಸಿಸ್ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರೆ ಶೇ. 1.5ರಷ್ಟು ಹಣ ರಿಟರ್ನ್ ಸಿಗುತ್ತದೆ.

ಇಲ್ಲಿ ಬಿಲ್ ಕಟ್ಟಿದಾಗ ನೇರವಾಗಿ ಹಣ ರಿಟರ್ನ್ ಆಗುವುದಿಲ್ಲ. ಅಂದರೆ ನೇರ ಕ್ಯಾಷ್ ಬ್ಯಾಕ್ ಸಿಗುವುದಿಲ್ಲ. ಚೆಕ್ ಚಿಪ್ಸ್ (CheQ Chips) ಅಥವಾ ಅಂಕಗಳ ಪಟ್ಟಿಗೆ ಇದು ಸೇರುತ್ತಾ ಹೋಗುತ್ತದೆ. ಅದನ್ನು ನೀವು ಯಾವಾಗ ಬೇಕಾದರೂ ಕ್ಯಾಷ್ ಆಗಿ ಪರಿವರ್ತಿಸಿಕೊಳ್ಳಬಹುದು. ಅಥವಾ ವೋಚರ್ ರೂಪದಲ್ಲಿ ನಿರ್ದಿಷ್ಟ ಶಾಪಿಂಗ್​ಗೆ ಇದನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿBank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್

CheQ ಆ್ಯಪ್ ಮೂಲಕ ನಾವು ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ಪಾವತಿಸಬಹುದು. ಲೋನ್ ಇಎಂಐಗಳನ್ನೂ ಕಟ್ಟಬಹುದು. ಆ ಎಲ್ಲಾ ಪಾವತಿಗೂ ಶೇ. 1ರಷ್ಟು ಹಣ ರಿಟರ್ನ್ ಬರುತ್ತದೆ.

Cred ವರ್ಸಸ್ CheQ

ಕ್ರೆಡ್ ಆ್ಯಪ್ ನೀವು ಬಳಸುತ್ತಿರಬಹುದು. ಇದೂ ಕೂಡ ಆರಂಭದಲ್ಲಿ ಕ್ರೆಡಿಟ್ ಕಾರ್ಡ್ ಬಿಲ್​ಗಳ ಪಾವತಿಗೆ ಒಂದು ಪ್ಲಾಟ್​ಫಾರ್ಮ್ ಆಗಿ ಸೇವೆ ಆರಂಭಿಸಿತು. ಬಳಿಕ ಕ್ರೆಡ್ ಬೇರೆ ಬೇರೆ ಸೇವೆಗಳನ್ನೂ ಆರಂಭಿಸಿದೆ. ಕ್ರೆಡ್ ಕೂಡ ತನ್ನ ಕ್ಯಾಷ್​ಬ್ಯಾಕ್ ಆಫರ್​ಗಳಿಂದ ಹಲವಾರು ಗ್ರಾಹಕರನ್ನು ಸೆಳೆದಿತ್ತು. ಈಗ ಕ್ರೆಡ್ ಹಾದಿಯಲ್ಲಿ CheQ ಸಾಗುತ್ತಿದೆ. ಕ್ರೆಡ್ ಆ್ಯಪ್​ಗಿಂತಲೂ CheQನ ವಿನ್ಯಾಸ ಸರಳವಾಗಿದೆ. ಇದರ ರಿವಾರ್ಡಿಂಗ್ ಪಾಯಿಂಟ್ ಇತ್ಯಾದಿ ವ್ಯವಸ್ಥೆ ಕ್ರೆಡ್​ಗಿಂತ ಪಾರದರ್ಶಕವಾಗಿದೆ ಎಂಬುದು ಸಾಮಾನ್ಯರ ಅನಿಸಿಕೆ.

ಇದನ್ನೂ ಓದಿPhonePe: ಫೋನ್​ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್​ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್

CheQ ಆ್ಯಪ್​ನಲ್ಲಿ ಖಾತೆ ತೆರೆಯುವುದು ಬಹಳ ಸರಳ. ಪಾನ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ ಇದ್ದರೆ ಸಾಕು. ಕ್ರೆಡ್​ನಲ್ಲೂ ಈ ಮೂರೇ ದಾಖಲೆ ಸಾಕಾದರೂ ಕ್ರೆಡಿಟ್ ಸ್ಕೋರ್ 750ಕ್ಕಿಂತ ಉತ್ತಮವಾಗಿರಬೇಕು. ಇಲ್ಲದಿದ್ದರೆ ಕ್ರೆಡ್ ಆ್ಯಪ್ ಖಾತೆ ತೆರೆಯುವುದೇ ಅಸಾಧ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:52 am, Mon, 13 March 23

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ