PhonePe: ಫೋನ್​ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್​ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್

PA License To PhonePe: ವಾರ್ಷಿಕೃತ ಟಿಪಿವಿ ರನ್ ರೇಟ್ 84 ಕೋಟಿ ರೂ ಮೊತ್ತವನ್ನು ಫೋನ್ ಪೇ ದಾಖಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದೇ ವೇಳೆ ಆರ್​ಬಿಐನಿಂದ ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ ಫೋನ್ ಪೇಗೆ ಸಿಕ್ಕಿದೆ.

PhonePe: ಫೋನ್​ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್​ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್
ಫೋನ್​ಪೇ
Follow us
|

Updated on: Mar 12, 2023 | 1:30 PM

ನವದೆಹಲಿ: ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಪ್ಲಾಟ್​ಫಾರ್ಮ್ ಎನಿಸಿರುವ ಫೋನ್ ಪೇ (PhonePe) ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಅದು ಮೊದಲ ಬಾರಿಗೆ ವಾರ್ಷಿಕ ಟಿಪಿವಿ ರನ್ ರೇಟ್ (Annualised TPV Run Rate) 1 ಟ್ರಿಲಿಯನ್ ಡಾಲರ್ (ಸುಮಾರು 84 ಲಕ್ಷ ಕೋಟಿ ರೂ) ಮುಟ್ಟಿದೆ. ಈ ಬಗ್ಗೆ ಫೋನ್ ಪೇ ಸಂಸ್ಥೆ ಮಾರ್ಚ್ 11, ಶನಿವಾರದಂದು ಪತ್ರಿಕಾಹೇಳಿಕೆ ನೀಡಿತು. ಇಲ್ಲಿ ಟಿಪಿವಿ ಎಂದರೆ ಟೋಟಲ್ ಪೇಮೆಂಟ್ ವ್ಯಾಲ್ಯೂ (Total Payment Value). ಅಂದರೆ ನಿರ್ದಿಷ್ಟ ಕಾಲಾವಧಿಯಲ್ಲಿ ಫೋನ್ ಪೇ ಮೂಲಕ ವಹಿವಾಟು ಆಗಿರುವ ಒಟ್ಟು ಹಣ.

ಇದೇ ವೇಳೆ, ಪ್ರಮುಖ ನಗರಗಳಲ್ಲದೇ ಕೆಳ ಸ್ತರದ ನಗರಗಳಲ್ಲಿ (ಟಯರ್ 2, 3, ಮತ್ತು 4 ಸಿಟಿ) 3.5 ಕೋಟಿ ವರ್ತಕರನ್ನು (Merchants) ಆನ್​ಲೈನ್ ಪೇಮೆಂಟ್ ವ್ಯವಸ್ಥೆಗೆ ತಂದಿರುವುದಾಗಿ ಫೋನ್ ಪೇ ಹೇಳಿದೆ. ದೇಶದಾದ್ಯಂತ ಶೇ. 99ರಷ್ಟು ಪಿನ್ ಕೋಡ್​ಗಳ ಸ್ಥಳಗಳಲ್ಲಿ ಫೋನ್ ಪೇ ಅಳವಡಿಕೆ ಆಗಿದೆ.

ಇನ್ನು, ಇನ್ಷೂರೆನ್ಸ್, ವೆಲ್ತ್ ಮ್ಯಾನೇಜ್ಮೆಂಟ್ ಇತ್ಯಾದಿ ಹೊಸ ವ್ಯವಹಾರಗಳಲ್ಲೂ ಫೋನ್​ಪೇ ಗಮನಾರ್ಹ ಮಟ್ಟದಲ್ಲಿ ಹೂಡಿಕೆಗಳನ್ನು ಮಾಡುತ್ತಿದೆ.

ವಾರ್ಷೀಕೃತಗೊಳಿಸಿ ಟಿಪಿವಿ ರನ್​ರೇಟ್ 1 ಟ್ರಿಲಿಯನ್ ಡಾಲರ್ ಮುಟ್ಟಿರುವುದು ಖುಷಿ ಕೊಟ್ಟಿದೆ. ಗ್ರಾಹಕರ ಅನುಭವವನ್ನು ಸರಳೀಕರಿಸುವುದರ ಜೊತೆಗೆ ಹಣ ವಹಿವಾಟು ಬಹಳ ಸುರಕ್ಷಿತ, ಕ್ಷಿಪ್ರ ಹಾಗೂ ವಿಶ್ವಾಸಾರ್ಹ ಆಗಿರುವುದು ಫೋನ್ ಪೇ ಕೋಟ್ಯಂತರ ಭಾರತೀಯರಿಗೆ ನಂಬುಗೆಯ ಪ್ಲಾಟ್​ಫಾರ್ಮ್ ಎನಿಸಿದೆ. ಈಗ ಯುಪಿಐ ಲೈಟ್, ಯುಪಿಐ ಇಂಟರ್ನ್ಯಾಷನಲ್, ಯುಪಿಐ ಮೇಲಿನ ಸಾಲ ಇತ್ಯಾದಿ ಆಫರ್​ಗಳ ಮೂಲಕ ಭಾರತದಲ್ಲಿ ಯುಪಿಐ ಪಾವತಿಯಲ್ಲಿ ಹೊಸ ಪ್ರಗತಿಯ ವೇಗದ ನಿರೀಕ್ಷೆಯಲ್ಲಿದ್ದೇವಎ ಎಂದು ಫೋನ್​ಪೇನ ಗ್ರಾಹಕ ವ್ಯವಹಾರ ವಿಭಾಗದ ಮುಖ್ಯಸ್ಥ ಸೋನಿಕಾ ಚಂದ್ರ ಹೇಳಿದ್ದಾರೆ.

ಇದನ್ನೂ ಓದಿ: NBFC: ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್​ಬಿಎಫ್​ಸಿಗಳ ಲೈಸೆನ್ಸ್ ರದ್ದು; ಇಲ್ಲಿದೆ ಪಟ್ಟಿ

ಯುಪಿಐ ಲೈಟ್ ವ್ಯವಸ್ಥೆಯನ್ನು ಪೇಟಿಎಂ ಈಗಾಗಲೇ ಅಳವಡಿಕೆ ಮಾಡಿದೆ. ಇದು 200 ರೂ ಒಳಗಿನ ಮೊತ್ತದ ಪಾವತಿಗಳನ್ನು ಮಾಡಲೆಂದೇ ರೂಪಿಸಲಾದ ವ್ಯವಸ್ಥೆಯಾಗಿದೆ. ದಿನಕ್ಕೆ 4,000 ರೂವರೆಗೂ ಸಣ್ಣ ಸಣ್ಣ ಮೊತ್ತದ ಪಾವತಿಗಳನ್ನು ಮಾಡಬಹುದಾಗಿದೆ.

ಫೋನ್​ಪೇಗೆ ಸಿಕ್ಕಿತು ಪಿಎ ಲೈಸೆನ್ಸ್

ಇದೇ ವೇಳೆ, ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆ ಫೋನ್ ಪೇಗೆ ಪಿಎ ಲೈಸೆನ್ಸ್ (Payment Aggregators license) ಕೊಡಲು ಅನುಮೋದನೆ ನೀಡಿದೆ. ಇದರಿಂದ ಫೋನ್ ಪೇ ವ್ಯಾಪ್ತಿ ಇನ್ನಷ್ಟು ಹೆಚ್ಚಲು ಅನುಕೂಲವಾಗಲಿದೆ.

ಇಲ್ಲಿ ಪಿಎ ಲೈಸೆನ್ಸ್ ಎಂದರೆ ಪೇಮೆಂಟ್ ಎಗ್ರಿಗೇಟರ್ ಆಗಿ ನಿರ್ವಹಿಸಲು ಆರ್​ಬಿಐ ನೀಡುವ ಪರವಾನಿಗೆ. ಇಲ್ಲಿ ಗ್ರಾಹಕರು ಮಾಡುವ ಪಾವತಿಯಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಬ್ಯಾಂಕ್ ಟ್ರಾನ್ಸ್​ಫರ್, ವ್ಯಾಲಟ್ ಇತ್ಯಾದಿ ಬಹು ಆಯ್ಕೆಗಳನ್ನು ಒದಗಿಸಬಹುದು. ವಿವಿಧ ರೀತಿಯ ಪೇಮೆಂಟ್ ವ್ಯವಸ್ಥೆ ಮತ್ತು ವರ್ತಕರ ಮಧ್ಯೆ ಈ ಅಗ್ರಿಗೇಟರ್​ಗಳು ಕೊಂಡಿಯಾಗಿರುತ್ತವೆ.

ಇದನ್ನೂ ಓದಿFoxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

ಅಮೇಜಾನ್ ಪೇ, ಏರ್​ಪೇ ಪೇಮೆಂಟ್ ಸರ್ವಿಸ್, ಡಿಜಿಯೋಟೆಕ್ ಸಲ್ಯೂಷನ್ಸ್, ಕ್ಯಾಶ್​ಫ್ರೀ ಪೇಮೆಂಟ್ಸ್, ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸಸ್, ಇಂಡಿಯಾಐಡಿಯಾಸ್, ಫಿನ್​ಲಾಜಿಕ್ ಟೆಕ್ನಾಲಜೀಸ್, ಈಸ್​ಬಜ್, ಲೈರಾ ನೆಟ್ವರ್ಕ್, ಎನ್​ಎಸ್​ಡಿಎಲ್ ಡೇಟಾಬೇಸ್ ಮ್ಯಾನೇಜ್ಮೆಂಟ್ ಲಿ, ಎನ್​ಟಿಟಿ ಡೇಟಾ ಪೇಮೆಂಟ್ ಸರ್ವಿಸಸ್, ಪೇಮೇಟ್ ಇಂಡಿಯಾ, ಪೇಶಾರ್ಪ್, ಪೈನ್ ಲ್ಯಾಬ್ಸ್, ರೇಜರ್​ಪೇ ಸಾಫ್ಟ್​ವೇರ್, ರಿಲಾಯನ್ಸ್ ಪೇಮೆಂಟ್, ಜೊಮಾಟೋ ಪೇಮೆಂಟ್ಸ್ ಇತ್ಯಾದಿ 32 ಪೇಮೆಂಟ್ ಅಗ್ರಿಗೇಟರ್ಸ್ ಇವೆ. ಈಗ ಫೋನ್ ಪೇ ಸಂಸ್ಥೆಗೂ ಲೈಸೆನ್ಸ್ ಕೊಡಲಾಗಿದೆ. ಹಿಂದೆ ಪೇಟಿಎಂ ಇತ್ಯಾದಿ ಕಂಪನಿಗಳು ಪಿಎ ಲೈಸೆನ್ಸ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಆರ್​ಬಿಐ ತಿರಸ್ಕರಿಸಿತ್ತು. ಕೆಲ ಮಾನದಂಡಗಳನ್ನು ಪೂರೈಸಿ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಕೇಳಿತ್ತು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿದೆ.