AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI income: ಬ್ಯಾಂಕುಗಳನ್ನು ನಿಯಂತ್ರಿಸುವ ಆರ್​​ಬಿಐಗೆ ಆದಾಯ ಎಲ್ಲಿಂದ ಬರುತ್ತೆ? ಇಲ್ಲಿದೆ ಡೀಟೇಲ್ಸ್

Income of RBI: ಆರ್​​​ಬಿಐ ಕಳೆದ ಹಣಕಾಸು ವರ್ಷ ಎರಡು ಲಕ್ಷ ಕೋಟಿ ರೂಗಿಂತ ಹೆಚ್ಚು ಮೊತ್ತವನ್ನು ಸರ್ಕಾರಕ್ಕೆ ಡಿವಿಡೆಂಡ್ ಆಗಿ ನೀಡಿತ್ತು. ಈ ವರ್ಷ ಇನ್ನೂ ಹೆಚ್ಚಿನ ಮೊತ್ತ ಕೊಡುವ ನಿರೀಕ್ಷೆ ಇದೆ. ಕಮರ್ಷಿಯಲ್ ಬ್ಯಾಂಕ್ ಅಲ್ಲದ ಆರ್​​ಬಿಐಗೆ ಇಷ್ಟೊಂದು ಆದಾಯ ಮತ್ತು ಲಾಭ ಎಲ್ಲಿಂದ ಬರುತ್ತದೆ? ಈ ಬಗ್ಗೆ ಮಾಹಿತಿ ಇಲ್ಲಿದೆ...

RBI income: ಬ್ಯಾಂಕುಗಳನ್ನು ನಿಯಂತ್ರಿಸುವ ಆರ್​​ಬಿಐಗೆ ಆದಾಯ ಎಲ್ಲಿಂದ ಬರುತ್ತೆ? ಇಲ್ಲಿದೆ ಡೀಟೇಲ್ಸ್
ಭಾರತೀಯ ರಿಸರ್ವ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2025 | 2:31 PM

Share

ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank of India) ಭಾರತದ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆ. ಇವತ್ತು ಸರ್ಕಾರಕ್ಕೆ ಅದು 2024-25ರ ಹಣಕಾಸು ವರ್ಷದ ತನ್ನ ಡಿವಿಡೆಂಡ್ ಅನ್ನು ನೀಡಲಿದೆ. ಹಿಂದಿನ ವರ್ಷ (2023-24ರಲ್ಲಿ) 2.1 ಲಕ್ಷ ಕೋಟಿ ರೂ ಹಣವನ್ನು ಸರ್ಕಾರಕ್ಕೆ ಕೊಟ್ಟಿತ್ತು. ಅದು ಸಾರ್ವಕಾಲಿಕ ದಾಖಲೆ ಮೊತ್ತವಾಗಿದೆ. 2022-23ರ ವರ್ಷದಲ್ಲಿ ಕೊಟ್ಟಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಮೊತ್ತ ಅದು. ಈ ವರ್ಷ ಸರ್ಕಾರಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುವುದರಿಂದ ರಿಸರ್ವ್ ಬ್ಯಾಂಕ್ ಇನ್ನೂ ಹೆಚ್ಚಿನ ಮೊತ್ತವನ್ನು ಕೊಟ್ಟರೆ ಅಚ್ಚರಿ ಇರಲ್ಲ.

ಆರ್​​ಬಿಐನಿಂದ ಸರ್ಕಾರಕ್ಕೆ ಯಾವ ಆಧಾರದಲ್ಲಿ ಡಿವಿಡೆಂಡ್ ನೀಡುತ್ತದೆ?

ಲಿಸ್ಟೆಡ್ ಕಂಪನಿಗಳು ತಮ್ಮ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಡಿವಿಡೆಂಡ್ ಆಗಿ ಘೋಷಿಸುತ್ತವೆ. ಕಂಪನಿಯ ನಿರ್ದೇಶಕರ ಮಂಡಳಿ ಇದನ್ನು ನಿರ್ಧರಿಸುತ್ತದೆ. ಪ್ರತೀ ಷೇರಿಗೆ ಡಿವಿಡೆಂಡ್ ನಿಗದಿತವಾಗಿರುತ್ತದೆ. ಲಿಸ್ಟೆಡ್ ಕಂಪನಿಯಲ್ಲವಾದರೂ ಆರ್​​ಬಿಐ ತನ್ನ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಡಿವಿಡೆಂಡ್ ಆಗಿ ಸರ್ಕಾರಕ್ಕೆ ನೀಡುತ್ತದೆ. ಎಷ್ಟು ಡಿವಿಡೆಂಡ್ ಎಂದು ನಿರ್ಧರಿಸಲು ಇಸಿಎಫ್ ಸೂತ್ರವನ್ನು ಅನುಸರಿಸಲಾಗುತ್ತದೆ.

2019ರಲ್ಲಿ ಪರಿಷ್ಕರಿಸಲಾದ ಎಕನಾಮಿಕ್ ಕ್ಯಾಪಿಟಲ್ ಫ್ರೇಮ್​​ವರ್ಕ್ ಪ್ರಕಾರ ಆರ್​​ಬಿಐ ಸರ್ಕಾರಕ್ಕೆ ಡಿವಿಡೆಂಡ್ ಕೊಡುತ್ತದೆ. ತನ್ನ ಬ್ಯಾಲನ್ಸ್ ಶೀಟ್​ನಲ್ಲಿ ಶೇ. 5.5ರಿಂದ ಶೇ. 6.5ರಷ್ಟು ಮೊತ್ತವನ್ನು ರಿಸ್ಕ್ ಬಫರ್ ಆಗಿ ಇಟ್ಟುಕೊಳ್ಳುತ್ತದೆ. ಇನ್ನುಳಿದ ಹೆಚ್ಚುವರಿ ಮೊತ್ತವನ್ನು ಸರ್ಕಾರಕ್ಕೆ ನೀಡಲು ಪರಿಗಣಿಸಬಹುದು.

ಇದನ್ನೂ ಓದಿ: 1 ಬ್ಯಾರಲ್ ಕಚ್ಛಾ ತೈಲದಿಂದ ಪೆಟ್ರೋಲ್, ಡೀಸಲ್ ಸೇರಿ ಏನೆಲ್ಲಾ ತಯಾರಿಸಬಹುದು ಗೊತ್ತಾ?

ರಿಸರ್ವ್ ಬ್ಯಾಂಕ್​​ಗೆ ಆದಾಯ ಎಲ್ಲಿಂದ ಬರುತ್ತದೆ?

  • ಬಾಂಡ್​ಗಳು: ಸರ್ಕಾರ ವಿತರಿಸುವ ಗವರ್ನ್ಮೆಂಟ್ ಬಾಂಡ್, ಟ್ರೆಶರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಆರ್​​ಬಿಐ ಖರೀದಿಸುತ್ತದೆ. ಅದರಲ್ಲಿ ಬಡ್ಡಿ ಸಿಗುತ್ತದೆ.
  • ಫಾರೆಕ್ಸ್: ಆರ್​​ಬಿಐ ವಿದೇಶೀ ವಿನಿಮಯ ಮೀಸಲು ನಿಧಿ ಇಟ್ಟುಕೊಳ್ಳುತ್ತದೆ. ಇದರಲ್ಲಿ ಡಾಲರ್, ಯೂರೋ ಇತ್ಯಾದಿ ಪ್ರಮುಖ ಕರೆನ್ಸಿಗಳು ಇರುತ್ತವೆ. ಚಿನ್ನವನ್ನೂ ಖರೀದಿಸುತ್ತದೆ. ಇವುಗಳಿಂದ ಆರ್​​ಬಿಐಗೆ ಲಾಭ ಸಿಗುತ್ತದೆ.
  • ಮುಕ್ತ ಮಾರುಕಟ್ಟೆ: ಸರ್ಕಾರಿ ಬಾಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಖರೀದಿಸುವುದು, ಮಾರುವುದರ ಮೂಲಕ ಆರ್​​ಬಿಐ ಆದಾಯ ಮಾಡುತ್ತದೆ.
  • ರಿಪೋ ಆದಾಯ: ರಿಪೋ ಮೂಲಕ ಬ್ಯಾಂಕುಗಳಿಗೆ ಆರ್​​ಬಿಐ ಸಾಲ ಕೊಡುತ್ತದೆ. ಇದರಲ್ಲಿ ಬಡ್ಡಿ ಆದಾಯ ಸಿಗುತ್ತದೆ.
  • ಸರ್ವಿಸ್ ಫೀ: ಸರ್ಕಾರಿ ಮತ್ತು ವಾಣಿಜ್ಯಾತ್ಮಕ ಬ್ಯಾಂಕುಗಳಿಗೆ ನೀಡುವ ಸಾಲ ನಿರ್ವಹಣೆ ಸೇವೆ ಇತ್ಯಾದಿ ಬ್ಯಾಂಕಿಂಗ್ ಸರ್ವಿಸ್​​ಗಳಿಗೆ ಆರ್​​ಬಿಐ ನಿರ್ದಿಷ್ಟ ಶುಲ್ಕ ವಿಧಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ