AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sukanya Samriddhi Yojana: ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿ ದರ ಹೆಚ್ಚುತ್ತಾ? ಠೇವಣಿದಾರರ ನಿರೀಕ್ಷೆ ಈಡೇರಿಸುತ್ತಾ ಸರ್ಕಾರ?

Interest Rates Announce On March End: ಕಳೆದ 3 ವರ್ಷಗಳಿಂದ ಬಡ್ಡಿ ದರ ಏರಿಕೆ ಕಾಣದ ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿದಾರರು ಈ ಬಾರಿ ದರ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ. ತೆರಿಗೆ ಲಾಭ ಕೊಡುವ ಈ ಸ್ಕೀಮ್​ನಲ್ಲಿ ಬಡ್ಡಿ ದರ ಹೆಚ್ಚಾದರೆ ಜನರಿಗೆ ಡಬಲ್ ಧಮಾಕವೇ ಸರಿ. ಆದರೆ, ಮಾರ್ಚ್ ಅಂತ್ಯದಲ್ಲಿ ಸರ್ಕಾರ ಬಡ್ಡಿ ದರ ಪರಿಷ್ಕರಿಸುತ್ತಾ ಎಂಬುದು ಸದ್ಯದ ಕುತೂಹಲ.

Sukanya Samriddhi Yojana: ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿ ದರ ಹೆಚ್ಚುತ್ತಾ? ಠೇವಣಿದಾರರ ನಿರೀಕ್ಷೆ ಈಡೇರಿಸುತ್ತಾ ಸರ್ಕಾರ?
ಸುಕನ್ಯಾ ಸಮೃದ್ಧಿ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 12, 2023 | 4:48 PM

Share

ಬೆಂಗಳೂರು: ಹೆಣ್ಮಕ್ಕಳ ಅನುಕೂಲಕ್ಕೆಂದು ರೂಪಿಸಲಾಗಿರುವ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಕಳೆದ 3 ವರ್ಷಗಳಿಂದ ಬಡ್ಡಿ ಪರಿಷ್ಕರಣೆ ಕಂಡೇ ಇಲ್ಲ. ಈ ಹಣಕಾಸು ವರ್ಷದಲ್ಲಾದರೂ ಬಡ್ಡಿ ದರ ಹೆಚ್ಚಿಸಿದರೆ (Interest Rate Hike) ಅನುಕೂಲವಾಗುತ್ತದೆ ಎಂದು ಯೋಜನೆಯ ಠೇವಣಿದಾರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ 12 ಕ್ವಾರ್ಟರ್​ಗಳಿಂದಲೂ ಈ ಯೋಜನೆಯಲ್ಲಿ ಬಡ್ಡಿ ದರ ಶೇ. 7.6ರಷ್ಟರಲ್ಲೇ ಇದೆ. 2022 ಡಿಸೆಂಬರ್​ನಲ್ಲಿ ಸರ್ಕಾರ ಕೆಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಏರಿಸಿತ್ತು. ಆದರೆ, ಠೇವಣಿದಾರರಿಗೆ ತೆರಿಗೆ ಲಾಭ ತಂದುಕೊಡದ ಯೋಜನೆಗಳ ಬಡ್ಡಿ ದರ ಮಾತ್ರವೇ ಪರಿಷ್ಕರಣೆ ಆಗಿದ್ದು. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಯಂತಹ ಜನಪ್ರಿಯ ಸ್ಕೀಮ್​ಗಳ ಬಡ್ಡಿ ದರ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿಲ್ಲ.

ಫೈನಾನ್ಷಿಯಲ್ ಎಕ್ಸ್​ಪ್ರೆಸ್​ನ ವರದಿ ಪ್ರಕಾರ 2023-24ರ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲೂ ಬಡ್ಡಿ ದರ ಹೆಚ್ಚಳವಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬಡ್ಡಿ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ. ಈ ತಿಂಗಳು, ಅಂದರೆ ಮಾರ್ಚ್​ನ ಅಂತ್ಯದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಪರಿಷ್ಕೃತ ಬಡ್ಡಿ ದರಗಳನ್ನು ಸರ್ಕಾರ ಪ್ರಕಟಿಸುವ ನಿರೀಕ್ಷೆ ಇದೆ.

ಬಡ್ಡಿ ದರ ಕಡಿಮೆ ಆದರೂ ಸುಕನ್ಯಾ ಸಮೃದ್ಧಿ ಯೋಜನೆ ಕೆಲವಾರು ತೆರಿಗೆ ಲಾಭ ತಂದುಕೊಡುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಇದೆ. ಇದರಲ್ಲಿ ಸುಕನ್ಯ ಸಮೃದ್ಧಿ ಯೋಜನೆಯಲ್ಲಿನ ಹೂಡಿಕೆ ಹಣವನ್ನೂ ಸೇರಿಸಿಕೊಳ್ಳಬಹುದು.

ಇದನ್ನೂ ಓದಿAtal Pension Scheme: ಈ ವರ್ಷ ಸದಸ್ಯರ ಸಂಖ್ಯೆ ಶೇ. 28ರಷ್ಟು ಹೆಚ್ಚಳ; ಏನಿದು ಅಟಲ್ ಪಿಂಚಣಿ ಸ್ಕೀಮ್? ಪ್ರೀಮಿಯಮ್ ಇತ್ಯಾದಿ ವಿವರ

ಕುತೂಹಲದ ಸಂಗತಿ ಎಂದರೆ ಸುಕನ್ಯ ಸಮೃದ್ಧಿ ಯೋಜನೆ ಮತ್ತು ಪಿಪಿಎಫ್ ಯೋಜನೆಗಳ ಬಡ್ಡಿ ದರ ಹಿಂದೆ ಇಳಿಕೆಯಾಗಿದ್ದುಂಟು. ಶೇ. 7.9ರಷ್ಟಿದ್ದ ಪಿಪಿಎಫ್ ಬಡ್ಡಿಯನ್ನು ಸರ್ಕಾರ ಇಗ ಶೇ. 7.1ಕ್ಕೆ ತಂದು ನಿಲ್ಲಿಸಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಶೇ. 8.4ರಿಂದ ಶೇ. 7.6ಕ್ಕೆ ಇಳಿದಿದೆ.

ಕೆಲ ಎಫ್​ಡಿ ದರಗಳು ಪಿಪಿಎಫ್, ಎಸ್​ಎಸ್​ವೈ ಸ್ಕೀಮ್​ಗಳಿಗಿಂತ ಹೆಚ್ಚು ಬಡ್ಡಿ ದರ ತಂದು ಕೊಡುತ್ತವಾದರೂ ಸುಕನ್ಯಾ ಸಮೃದ್ಧಿ ಯೋಜನೆಯಂಥ ಸ್ಕೀಮ್​ಗಳು ಜನಪ್ರಿಯತೆ ಉಳಿಸಿಕೊಂಡಿರುವುದು ಹೆಚ್ಚಾಗಿ ಅದು ಒದಗಿಸುವ ಟ್ಯಾಕ್ಸ್ ಡಿಡಕ್ಷನ್ ಅವಕಾಶದಿಂದಾಗಿ.

ಇದನ್ನೂ ಓದಿELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ

ಆದಾಯ ತೆರಿಗೆ ಪಾವತಿದಾರರು ಟ್ಯಾಕ್ಸ್ ಡಿಡಕ್ಷನ್​ಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ನಡೆಸುವುದರಿಂದ ಲಾಭ ಉಂಟು. ಕೆಲ ವರ್ಗದ ಟ್ಯಾಕ್ಸ್ ಪಾವತಿದಾರರಿಗೆ ಸುಕನ್ಯಾ ಸಮೃದ್ಧಿ ಯೋಜನೆ ವರ್ಷಕ್ಕೆ ಶೇ. 11ರವರೆಗೂ ಹಣ ಬೆಳೆಸುವ ಅವಕಾಶ ಮಾಡಿಕೊಡುತ್ತದೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಯಾರು ಬೇಕಾದರೂ ಸುಕನ್ಯಾ ಸಮೃದ್ಧಿ ಯೋಜನೆಯ ಸ್ಕೀಮ್ ಪಡೆಯಬಹುದು. ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂವರೆಗೂ ಈ ಸ್ಕೀಮ್​ನಲ್ಲಿ ಹಣ ತೊಡಗಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sun, 12 March 23

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು