ELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ

ELSS vs SIPs: ಇಎಲ್​ಎಸ್​ಎಸ್ ಜೋಡಿತ ಯೋಜನೆಗಳಲ್ಲಿ ಅತಿಯಾಗಿ ಹೂಡಿಕೆ ಮಾಡದಿರಿ. ವರ್ಷಕ್ಕೆ ಒಂದೂವರೆ ಲಕ್ಷ ರೂ ಮಾತ್ರ ಅದರಲ್ಲಿ ಹೂಡಿಕೆಯಾಗಲಿ. ಇಎಲ್​ಎಸ್​ಎಸ್​ನಿಂದ ತೆರಿಗೆ ವಿನಾಯಿತಿ ಅಂಶ ಬಿಟ್ಟರೆ ಹೆಚ್ಚಿನ ಲಾಭ ಇಲ್ಲ ಎನ್ನುತ್ತಾರೆ ತಜ್ಞರು. ಈ ಬಗ್ಗೆ ಒಂದಿಷ್ಟು ವಿವರಣೆ ಇಲ್ಲಿದೆ...

ELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ
ಎಸ್​ಐಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2023 | 2:22 PM

ಈಗ ನಮ್ಮ ಆದಾಯದಲ್ಲಿ ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ (Tax Deductions) ಮಾಡುವ ಅವಕಾಶ ಇದೆ. ಅಂದರೆ ಕೆಲ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. 1,50,000 ರೂನಷ್ಟು ಹೂಡಿಕೆ ಮಾಡಿದರೆ 46,800 ರೂ ಉಳಿಸಬಹುದು. ನಮ್ಮ ಆದಾಯದಲ್ಲಿ ತೆರಿಗೆ ಅನ್ವಯ ಆಗುವ ಆದಾಯದ ಪ್ರಮಾಣ ಕಡಿಮೆ ಆಗುತ್ತದೆ. ಈ ಮೂಲಕ ತೆರಿಗೆ ಉಳಿಸಬಹುದುಆದರೆ, ಬಹಳ ಮಂದಿಗೆ ಗೊಂದಲ ಇರುವುದು ಎಸ್​ಐಪಿ ವಿಚಾರದಲ್ಲಿ. ಎಲ್ಲಾ ಎಸ್​ಐಪಿಗಳೂ ತೆರಿಗೆ ವಿನಾಯಿತಿ ತಂದುಕೊಡುವುದಿಲ್ಲ ಎಂಬುದು ಗಮನದಲ್ಲಿರಲಿ. ಇಎಲ್​ಎಸ್​ಎಸ್​ಗೆ ಜೋಡಿತವಾಗಿರುವ ಎಸ್​ಐಪಿಗಳು ಮಾತ್ರವೇ ತೆರಿಗೆ ರಿಯಾಯಿತಿ ಒದಗಿಸಬಲ್ಲುವು.

ಇಎಲ್​ಎಸ್​ಎಸ್ ಎಂದರೆ ಈಕ್ವಿಟಿ ಜೋಡಿತ ಉಳಿತಾಯ ಯೋಜನೆ (ELSS- Equity Linked Saving Scheme). ಇವು ಮ್ಯೂಚುವಲ್ ಫಂಡ್​ನಲ್ಲಿ (Mutual Fund) ಹೂಡಿಕೆ ಮಾಡಲು ಅವಕಾಶ ಕೊಡುವ ಒಂದು ಸಾಧನ. ಇಎಲ್​ಎಸ್​ಎಸ್ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಲಾಗುವ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ಸ್ ಕ್ಲೇಮ್ ಮಾಡಬಹುದು.

ಇಎಲ್​ಎಸ್​ಎಸ್ ಸ್ಕೀಮ್​ಗೆ ಜೋಡಿತವಾದ ಎಸ್​ಐಪಿ ಯೋಜನೆಗಳಿಂದಲೂ ಟ್ಯಾಕ್ಸ್ ಡಿಡಕ್ಷನ್ಸ್ ಕ್ಲೇಮ್ ಮಾಡಬಹುದು. ಎಸ್​ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಇದು ಅಲ್ಪಾವಧಿಗೆ ಅಲ್ಪಪ್ರಮಾಣದಲ್ಲಿ ಈಕ್ವಿಟಿಗಳ ಮೇಲೆ ಹೂಡಿಕೆ ಮಾಡುವ ಯೋಜನೆಗಳಾಗಿವೆ. ಮ್ಯೂಚುವಲ್ ಫಂಡ್​ಗಳ ಎಸ್​ಐಪಿ ಪ್ಲಾನ್​ಗಳೂ ಉಂಟು.

ಇದನ್ನೂ ಓದಿFoxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

ಮ್ಯೂಚುವಲ್ ಫಂಡ್​ಗಳು ತಮ್ಮಲ್ಲಿನ ಹೂಡಿಕೆದಾರರ ಹಣವನ್ನು ವಿವಿಧ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಒಂದೇ ಕಂಪನಿ ಬದಲು ಮಾರುಕಟ್ಟೆಯ ಏರಿಳಿತಗಳನ್ನು ಗಮನದಲ್ಲಿರಿಸಿಕೊಂಡು ವಿವಿಧ ಕ್ಷೇತ್ರಗಳ ಕಂಪನಿಗಳ ಷೇರುಗಳಿಗೆ ಇನ್ವೆಸ್ಟ್ ಮಾಡಲಾಗುತ್ತದೆ. ಒಂದು ಷೇರು ಬಿದ್ದರೂ ಇತರ ಷೇರುಗಳು ಲಾಭ ತರಬಹುದು ಎನ್ನುವ ಲೆಕ್ಕಾಚಾರ. ಹೀಗಾಗಿ, ಮ್ಯೂಚುವಲ್ ಫಂಡ್​ಗಳು ತೀರಾ ಹೆಚ್ಚು ಲಾಭವನ್ನೂ ತರುವುದಿಲ್ಲ, ನಷ್ಟವನ್ನೂ ಕೊಡುವುದಿಲ್ಲ.

ಇಎಲ್​ಎಸ್​ಎಸ್​ಗೆ ಲಿಂಕ್ ಆದ ಮ್ಯೂಚುವಲ್ ಫಂಡ್​ಗಳು ಹಲವಿವೆ. ಎಸ್​ಬಿಐ ಲಾಗ್ ಟರ್ಮ್ ಈಕ್ವಿಟಿ ಫಂಡ್, ಆ್ಯಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್, ಐಸಿಐಸಿಐ ಪ್ರುಡೆನ್ಷಿಯಲ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್, ಐಡಿಎಫ್​ಸಿ ಟ್ಯಾಕ್ಸ್ ಅಡ್ವಾಂಟೇಜ್ ಈಕ್ವಿಟಿ ಫಂಡ್, ಡಿಎಸ್​ಪಿ ಟ್ಯಾಕ್ಸ್ ಸೇವರ್ ಫಂಡ್, ಮಿರೇ ಅಸೆಟ್ ಟ್ಯಾಕ್ಸ್ ಸೇವರ್ ಫಂಡ್ ಇತ್ಯಾದಿ ಹಲವು ಹೂಡಿಕೆ ಯೋಜನೆಗಳು ಇಎಲ್​ಎಸ್​ಎಸ್​ಗೆ ಜೋಡಿತವಾಗಿವೆ.

ತೀರಾ ಹೆಚ್ಚು ಇಎಲ್​ಎಸ್​ಎಸ್​ಗೆ ಜೋತು ಬೀಳದಿರಿ

ಇಎಲ್​ಎಸ್​ಎಸ್ ಜೋಡಿತ ಮ್ಯೂಚುವಲ್ ಫಂಡ್​ಗಳಿಗಿಂತ ಇತರ ಎಸ್​ಐಪಿಗಳು ಹೆಚ್ಚು ರಿಟರ್ನ್ಸ್ ತಂದುಕೊಡಬಲ್ಲುವು. ಇಎಲ್​ಎಸ್​ಎಸ್​ನಿಂದ ಹೆಚ್ಚು ಲಾಭ ಇರುವುದು ಅದರ ತೆರಿಗೆ ವಿನಾಯಿತಿ ಫೀಚರ್​ನಲ್ಲಿ. ಸದ್ಯ 1,50,000 ರೂವರೆಗೆ ಟ್ಯಾಕ್ಸ್ ಡಿಡಕ್ಷನ್ಸ್ ಸೌಲಭ್ಯ ಇದೆ. ಅಂದರೆ ನೀವು ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಇಎಲ್​ಎಸ್​ಎಸ್ ಜೋಡಿತ ಯೋಜನೆಗಳಲ್ಲಿ ಹಣ ತೊಡಗಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚು ಹಣ ಹೂಡಿಕೆ ಮಾಡಬಲ್ಲಿರೆಂದರೆ ಹೆಚ್ಚು ರಿಟರ್ನ್ಸ್ ತಂದುಕೊಡಬಲ್ಲ ಇತರ ಎಸ್​ಐಪಿಗಳತ್ತ ಗಮನ ಕೊಡುವುದು ಉತ್ತಮ. ಇದು ತಜ್ಞರ ಸಲಹೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ