Foxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

Karnataka Govt Amends Labour Law: ಚೀನಾದಲ್ಲಿರುವಂತಹ ಕಾರ್ಮಿಕ ವ್ಯವಸ್ಥೆ ಬೇಕೆಂದು ಆ್ಯಪಲ್ ಮತ್ತು ಫಾಕ್ಸ್​ಕಾನ್ ಬೇಡಿಕೆ ಇಟ್ಟ ಕಾರಣ ಕರ್ನಾಟಕ ಸರ್ಕಾರ ಕಾರ್ಮಿಕರ ಕಾನೂನಿನಲ್ಲಿ ಬದಲಾವಣೆ ಮಾಡಿದೆ. ಶಿಫ್ಟ್ ಅವಧಿ ಗರಿಷ್ಠ 9 ಗಂಟೆ ಇದ್ದದ್ದು 12ಗಂಟೆಗೆ ಹೆಚ್ಚು ಮಾಡಲಾಗಿದೆ. ಮಹಿಳೆಯರಿಗೆ ರಾತ್ರಿಪಾಳಿ ಅವಕಾಶ ಕೊಡಲಾಗಿದೆ ಎಂದು ವರದಿಗಳು ಹೇಳುತ್ತಿವೆ.

Foxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ
ಐಫೋನ್ ಫ್ಯಾಕ್ಟರಿ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Mar 10, 2023 | 10:56 AM

ಬೆಂಗಳೂರು: ಕರ್ನಾಟಕ ರಾಜ್ಯದ ಕಾರ್ಮಿಕ ಕಾನೂನಿನಲ್ಲಿ (Karnataka Labour Laws) ಕೆಲ ಮಹತ್ವದ ತಿದ್ದುಪಡಿ ಮಾಡಲಾಗಿದೆ. ಕಂಪನಿಗಳು ಇನ್ಮುಂದೆ ತಮ್ಮ ನೌಕರರಿಗೆ 12 ಗಂಟೆ ಅವಧಿಯ ಶಿಫ್ಟ್​ನಲ್ಲಿ ಕೆಲಸ ಮಾಡಿಸಲು (12 Hour Shift) ಕಾನೂನು ಈಗ ಅನುಮತಿಸುತ್ತದೆ. ಹಾಗೆಯೇ, ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ತಕರಾರು ಎತ್ತಲು ಸಾಧ್ಯವಾಗುವುದಿಲ್ಲ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಸರ್ಕಾರದ ಈ ಮಹತ್ವದ ಕಾನೂನು ತಿದ್ದುಪಡಿಗೆ ಪ್ರಮುಖ ಕಾರಣವಾಗಿದ್ದು ಆ್ಯಪಲ್ ಮತ್ತು ಫಾಕ್ಸ್​ಕಾನ್. ಚೀನಾದಲ್ಲೂ ಇಂಥದ್ದೇ ರೀತಿಯ ಕಾರ್ಮಿಕ ಕಾನೂನುಗಳಿದ್ದು, ಇಲ್ಲಿಯೂ ಅಂಥ ವ್ಯವಸ್ಥೆ ಮಾಡಬೇಕೆಂದು ಫಾಕ್ಸ್​ಕಾನ್ ಮತ್ತು ಆ್ಯಪಲ್ ಬೇಡಿಕೆ ಇಟ್ಟಿದ್ದವು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಸದ್ದಿಲ್ಲದೇ ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ತಂದಿದೆ.

ದೇಶದೆಲ್ಲೆಡೆ ಕಾರ್ಮಿಕರಿಗೆ ಗರಿಷ್ಠ 9 ಗಂಟೆ ಅವಧಿಯ ಕೆಲಸ ಪಾಳಿ ಎಂಬ ಕಾನೂನಿದೆ. ಮಹಿಳಾ ಉದ್ಯೋಗಿಗಳನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಕಡ್ಡಾಯಪಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಕಾನೂನು ತಿದ್ದುಪಡಿ ಗಮನ ಸೆಳೆದಿದೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನಿನಲ್ಲಿ ಬದಲಾವಣೆ ತಂದಿದೆ.

ಇದನ್ನೂ ಓದಿFoxconn: ಬೆಂಗಳೂರು ಏರ್​ಪೋರ್ಟ್​ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?

ಆ್ಯಪಲ್ ಕಂಪನಿಯ ಐಫೋನ್ ಅನ್ನು ತಯಾರಿಸುವ ಮೂರು ಕಂಪನಿಗಳಲ್ಲಿ ಫಾಕ್ಸ್​ಕಾನ್ ಒಂದು. ಚೀನಾದಲ್ಲಿ ಐಫೋನ್ ಫ್ಯಾಕ್ಟರಿಗಳನ್ನು ಹೊಂದಿರುವ ಫಾಕ್ಸ್​ಕಾನ್ ಭಾರತದಲ್ಲಿ ಘಟಕಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಪರಿಶೀಲನೆ ನಡೆಸಿರುವ ಫಾಕ್ಸ್​ಕಾನ್, ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಎಂಒಯು ಮಾಡಿಕೊಂಡಿದೆ. ಆದರೆ, ಈ ಎರಡು ರಾಜ್ಯಗಳಲ್ಲಿ ಅಂತಿಮವಾಗಿ ಯಾವುದು ಬೇಕೆಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ಫಾಕ್ಸ್​ಕಾನ್​ಗೆ ಇದೆ. ಐಟಿ ಬೀಡು ಎಂದೇ ಖ್ಯಾತವಾಗಿರುವ ಕರ್ನಾಟಕಕ್ಕೆ ಫಾಕ್ಸ್​ಕಾನ್ ಕಾರ್ಖಾನೆ ಶುರುವಾದರೆ ಇನ್ನೊಂದು ಗರಿ ಬಂದಂತೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಫಾಕ್ಸ್​ಕಾನ್​ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಫಾಕ್ಸ್​ಕಾನ್ ಇಟ್ಟಿದ್ದ ಬೇಡಿಕೆಗೆ ರಾಜ್ಯ ಸರ್ಕಾರ ಮಣಿದು ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.

ಕಾರ್ಮಿಕ ಕಾನೂನಿನಲ್ಲಿ ಆಗಿರುವ ತಿದ್ದುಪಡಿಗಳೇನು?

  • ಗರಿಷ್ಠ ಅವಧಿಯ ಪಾಳಿ 9 ಗಂಟೆ ಇದ್ದದ್ದು 12 ಗಂಟೆಗೆ ಏರಿಸಲಾಗಿದೆ. ಅಂದರೆ ಒಂದು ಕಂಪನಿಯು ಒಬ್ಬ ಉದ್ಯೋಗಿಯಿಂದ 12 ಗಂಟೆಗಳವರೆಗೆ ಕೆಲಸ ಮಾಡಿಸಿಕೊಳ್ಳಲು ಕಾನೂನು ಸಮ್ಮತಿ ಇರುತ್ತದೆ. ಆದರೆ ಒಂದು ವಾರದಲ್ಲಿ ಗರಿಷ್ಠ ಕೆಲಸದ ಅವಧಿ 48 ಗಂಟೆಗೆ ಮಿತಿಗೊಳಿಸಲಾಗಿದೆ.
  • ಮಹಿಳಾ ಉದ್ಯೋಗಿಗಳಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು.
  • ಓವರ್​ಟೈಮ್ ವರ್ಕ್ (ಓಟಿ) 3 ತಿಂಗಳಲ್ಲಿ 145 ಗಂಟೆಗಳವರೆಗೆ ಅವಕಾಶ ಇರುತ್ತದೆ. ಈ ಮುಂಚೆ ಇದು 75 ಗಂಟೆ ಇತ್ತು.

ಫಾಕ್ಸ್​ಕಾನ್ ಕರ್ನಾಟಕಕ್ಕೆ ಬರುವುದು ಖಚಿತವೇ?

ಫಾಕ್ಸ್​ಕಾನ್​ನ ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೆ ಬರುವುದು ಬಹುತೇಕ ಖಚಿತ ಎಂದು ರಾಜ್ಯ ಸರ್ಕಾರದ ಮೂಲಗಳು ಹೇಳುತ್ತಿವೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮೊದಲಾದವರು ಈಗಾಗಲೇ ಈ ಬಗ್ಗೆ ಸುಳಿವು ನೀಡಿದ್ದಾರೆ. ನಿರಾಣಿ ನಿನ್ನೆ ಗುರುವಾರ ಮಾತನಾಡುತ್ತಾ, ಫಾಕ್ಸ್​ಕಾನ್ ಬರುವುದು ನಿಶ್ಚಿತ ಎಂದು ಖಚಿತವಾಗಿ ಹೇಳಿದ್ದಾರೆ.

ಇದನ್ನೂ ಓದಿVehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?

ಸರ್ಕಾರ ಈಗಾಗಲೇ ದೊಡ್ಡಬಳ್ಳಾಪುರದ ಐಟಿಇಎಸ್ ಬಳಿ 300 ಎಕರೆ ಪ್ರದೇಶವನ್ನು ಫಾಕ್ಸ್​ಕಾನ್​ಗೆ ತೆಗೆದಿರಿಸಿದೆ. ಫಾಕ್ಸ್​ಕಾನ್ ಈಗೇನಿದ್ದರೂ ಫ್ಯಾಕ್ಟರಿ ತೆರೆಯುವುದೊಂದೇ ಬಾಕಿ. ಅತ್ತ ತೆಲಂಗಾಣ ಸರ್ಕಾರ ಕೂಡ ಫಾಕ್ಸ್​ಕಾನ್​ಗೋಸ್ಕರ ಹೈದರಾಬಾದ್ ಸಮೀಪ 200 ಎಕರೆ ಜಾಗವನ್ನು ಎತ್ತಿ ಇಟ್ಟಿದೆ. ಅಲ್ಲಿಯ ಸಿಎಂ ಕೆ ಚಂದ್ರಶೇಖರ್ ರಾವ್ ಕೂಡ ಫಾಕ್ಸ್​ಕಾನ್ ಬರುತ್ತೆ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ, ಈಗ ಕರ್ನಾಟಕ ಮಾಡಿರುವ ಕಾರ್ಮಿಕ ಕಾನೂನು ತಿದ್ದುಪಡಿ ಗೇಮ್ ಚೇಂಜರ್ ಆಗಿ, ಫಾಕ್ಸ್​ಕಾನ್ ಅನ್ನು ಸೆಳೆಯಲು ಯಶಸ್ವಿಯಾಗಬಹುದು.

ಇನ್ನಷ್ಟು ಉದ್ಯಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Fri, 10 March 23

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ