Atal Pension Scheme: ಈ ವರ್ಷ ಸದಸ್ಯರ ಸಂಖ್ಯೆ ಶೇ. 28ರಷ್ಟು ಹೆಚ್ಚಳ; ಏನಿದು ಅಟಲ್ ಪಿಂಚಣಿ ಸ್ಕೀಮ್? ಪ್ರೀಮಿಯಮ್ ಇತ್ಯಾದಿ ವಿವರ

APY Details: ವೃದ್ಧಾಪ್ಯದಲ್ಲಿ ಕನಿಷ್ಠ ಪಿಂಚಣಿ ಖಾತ್ರಿ ಒದಗಿಸುವ ಅಟಲ್ ಪಿಂಚಣಿ ಯೋಜನೆಗೆ ಈ ವರ್ಷ ಹೊಸದಾಗಿ ಸದಸ್ಯರಾದವರ ಸಂಖ್ಯೆ ಶೇ. 28ರಷ್ಟು ಹೆಚ್ಚಾಗಿದೆ. ಈ ಪಿಂಚಣಿ ಯೋಜನೆಯ ಪ್ರೀಮಿಯಮ್, ಪಿಂಚಣಿ ಮೊತ್ತ, ಅರ್ಹತೆ ಇತ್ಯಾದಿ ವಿವರ ಇಲ್ಲಿದೆ.

Atal Pension Scheme: ಈ ವರ್ಷ ಸದಸ್ಯರ ಸಂಖ್ಯೆ ಶೇ. 28ರಷ್ಟು ಹೆಚ್ಚಳ; ಏನಿದು ಅಟಲ್ ಪಿಂಚಣಿ ಸ್ಕೀಮ್? ಪ್ರೀಮಿಯಮ್ ಇತ್ಯಾದಿ ವಿವರ
ಅಟಲ್ ಪಿಂಚಣಿ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 12, 2023 | 12:26 PM

ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಅಟಲ್ ಪೆನ್ಷನ್ ಯೋಜನೆಯ (APY- Atal Pension Yojana) ಸದಸ್ಯರ ಸಂಖ್ಯೆ ಈ ವರ್ಷ ನಿರೀಕ್ಷೆಮೀರಿ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಟಲ್ ಪಿಂಚಣಿ ಯೋಜನೆಯ ಸದಸ್ಯರ ಸಂಖ್ಯೆ ಶೇ. 29.46ರಷ್ಟು ಹೆಚ್ಚಾಗಿದೆ. 2022 ಮಾರ್ಚ್ ತಿಂಗಳಲ್ಲಿ 3.52 ಕೋಟಿ ಇದ್ದ ಎಪಿವೈ ಚಂದಾದಾರರು 2023ಮಾರ್ಚ್ 4ರಂದು 4.53ಕೋಟಿ ಆಗಿದ್ದಾರೆ. ಒಂದು ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಗೆ ಜೋಡಿತಗೊಂಡ ಜನರ ಸಂಖ್ಯೆ ಒಂದು ಕೋಟಿಯಷ್ಟು ಹೆಚ್ಚಾಗಿದೆ.

ಇದೇ ವೇಳೆ, ನ್ಯಾಷನಲ್ ಪೆನ್ಷನ್ ಸ್ಕೀಮ್ (NPS- National Pension Scheme) ಯೋಜನೆಯೂ ಕೂಡ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2023 ಮಾರ್ಚ್ 4ರವರೆಗಿನ ದತ್ತಾಂಶದ ಪ್ರಕಾರ ನ್ಯಾಷನಲ್ ಪೆನ್ಷನ್ ಸ್ಕೀಮ್​ನ ಚಂದಾದಾರರ ಸಂಖ್ಯೆ 5.20 ಕೋಟಿಗೆ ಏರಿದೆ. ಎನ್​ಪಿಎಸ್ ಮತ್ತು ಎಪಿವೈ ಎರಡೂ ಸೇರಿ ಒಟ್ಟು ಪಿಂಚಣಿ ಆಸ್ತಿ (Total Pension Assets- AUM) 8.83 ಲಕ್ಷ ಕೋಟಿ ರುಪಾಯಿ ಇದೆ ಎಂದು ವರದಿ ಹೇಳುತ್ತದೆ.

ಎಪಿವೈನಲ್ಲಿ ಮಹತ್ವದ ಬದಲಾವಣೆ

ಇದೇ ವೇಳೆ, ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಳೆದ ವರ್ಷ ಮಹತ್ವದ ಬದಲಾವಣೆಯೊಂದನ್ನು ಹೊರಡಿಸಿತ್ತು. ಅದರಂತೆ, ಆದಾಯ ತೆರಿಗೆ ಪಾವತಿಸುತ್ತಿರುವ ವ್ಯಕ್ತಿಗಳು (Tax payers) ಅಟಲ್ ಪೆನ್ಷನ್ ಸ್ಕೀಮ್ ಪಡೆಯುವಂತಿಲ್ಲ. 2022 ಅಕ್ಟೋಬರ್ 1 ರಂದು ಮತ್ತು ಆ ಬಳಿಕ ಎಪಿವೈ ಯೋಜನೆ ಖರೀದಿಸುವ ವ್ಯಕ್ತಿ ಆದಾಯ ತೆರಿಗೆ ಪಾವತಿಸುತ್ತಿರುವುದು ಕಂಡುಬಂದರೆ ಅವರ ಎಪಿವೈ ಖಾತೆಯನ್ನು ರದ್ದುಪಡಿಸಲಾಗುವುದು ಮತ್ತು ಈ ಯೋಜನೆಯಲ್ಲಿ ಅವರು ಆವರೆಗೆ ಮಾಡಿರುವ ಹೂಡಿಕೆಯನ್ನು ಮರಳಿಸಲಾಗುವುದು ಎಂದು ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿAadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ

ಏನಿದು ಅಟಲ್ ಪೆನ್ಷನ್ ಸ್ಕೀಮ್?

2015ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಪಿಂಚಣಿ ಯೋಜನೆ ಎಪಿವೈ. ವೃದ್ಧಾಪ್ಯದಲ್ಲಿ ಪಿಂಚಣಿ ನೀಡುವ ಯೋಜನೆ ಇದು. 60 ವರ್ಷ ದಾಟಿದಾಗ 1,000 ರೂನಿಂದ 5,000 ರೂವರೆಗೆ ಪಿಂಚಣಿ ಸಿಗುವ ಸ್ಕೀಮ್ ಇದು.

ಈ ಯೋಜನೆಯನ್ನು ಭಾರತದ ಯಾವುದೇ ನಾಗಕರಿಕರು ತೆರೆಯಬಹುದು. ವಯೋಮಿತಿ 18 ರಿಂದ 40 ವರ್ಷದೊಳಗೆ ಇರಬೇಕು. ಬ್ಯಾಂಕ್ ಖಾತೆ ಹೊಂದಿರಬೇಕು. ಯಾವುದೇ ಬ್ಯಾಂಕ್, ಪೋಸ್ಟ್ ಆಫೀಸ್​ನಲ್ಲಿ ಈ ಯೋಜನೆ ಪಡೆಯಬಹುದು. ಒಂದು ವೇಳೆ ಯೋಜನೆಯ ಚಂದಾದಾರ ಮೃತಪಟ್ಟರೆ ಅವರ ಪತಿ ಅಥವಾ ಪತ್ನಿಗೆ ಪೆನ್ಷನ್ ರವಾನೆಯಾಗುತ್ತದೆ. ಅವರೂ ಮೃತಪಟ್ಟಾಗ ಎಲ್ಲಾ ಪಿಂಚಣಿ ಹಣವೂ ನಾಮಿನಿಗೆ ಸಂದಾಯವಾಗುತ್ತದೆ.

ಇದನ್ನೂ ಓದಿAadhaar Limitation: ಆಧಾರ್ ಕಾರ್ಡ್​ನಲ್ಲಿರುವ ಹೆಸರು, ವಿಳಾಸ ಇತ್ಯಾದಿ ಮಾಹಿತಿ ಎಷ್ಟು ಬಾರಿ ಬದಲಿಸಬಹುದು?

ಪ್ರೀಮಿಯಮ್ ಎಷ್ಟು?

18 ವರ್ಷ ತುಂಬಿದಾಗ ಅಟಲ್ ಪಿಂಚಣಿ ಯೋಜನೆ ಪಡೆದರೆ 22 ವರ್ಷದವರೆಗೆ ಪ್ರೀಮಿಯಮ್ ಕಟ್ಟುವ ಅವಕಾಶ ಇರುತ್ತದೆ. ತಿಂಗಳಿಗೆ 42 ರೂನಂತೆ 40ನೇ ವಯಸ್ಸಿನವರೆಗೂ ಪಾವತಿಸಿದರೆ ವೃದ್ಧಾಪ್ಯದಲ್ಲಿ ತಿಂಗಳಿಗೆ 1 ಸಾವಿರ ರೂ ಪಿಂಚಣಿ ಸಿಗುತ್ತದೆ. 5,000 ರೂ ಪಿಂಚಣಿ ಬೇಕೆಂದರೆ ತಿಂಗಳಿಗೆ 210 ರೂ ಕಟ್ಟಬೇಕು.

25ರ ವಯಸ್ಸಿನಲ್ಲಿ ಯೋಜನೆ ಆರಂಭಿಸುವುದಾದರೆ ಕನಿಷ್ಠ ಪಿಂಚಣಿ ಪಡೆಯಲು ತಿಂಗಳಿಗೆ 76 ರೂ ಕಟ್ಟಬೇಕಾಗುತ್ತದೆ. ಅಟಲ್ ಪಿಂಚಣಿ ಯೋಜನೆಯ ಯಾವುದೇ ಪ್ರೀಮಿಯಮ್ ಅನ್ನು ಮಾಸಿಕವಾಗಿಯೋ, ತ್ರೈಮಾಸಿಕವಾಗಿಯೋ ಅಥವಾ ಅರ್ಧವಾರ್ಷಿಕವಾಗಿಯೋ ಪಾವತಿಸುವ ಆಯ್ಕೆ ಇರುತ್ತದೆ. ಇದರ ಪೂರ್ಣ ಚಾರ್ಟ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Sun, 12 March 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್